ಬೆಂಗಳೂರು: ಸ್ಯಾಂಡಲ್‌ವುಡ್ ನಟರು ಈಗಾಗಲೇ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. “ಕಾವೇರಿ ನಮ್ಮೆಲ್ಲರ ತಾಯಿ. ನಮ್ಮ ಕರ್ನಾಟಕದ ಜೀವನದಿ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು. ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಕೂಡ ಸದಾ ಇದೆʼʼಎಂದರು.
ʻʻಸ್ಟಾರ್ ಎನ್ನುವದಕ್ಕಿಂತ ಹೆಚ್ಚಾಗಿ ಸಾಮಾನ್ಯ ಪ್ರಜೆಯಾಗಿ ಮನವಿ ಮಾಡುತ್ತಿದ್ದೇನೆ. ನಮ್ಮ ಕಲಾವಿದರ ಸಂಘದಿಂದ ಅನಂತ್‌ನಾಗ್, ರವಿಚಂದ್ರನ್, ಜಗ್ಗೇಶ್ (Jaggesh), ಶಿವಣ್ಣ ಅವರು ಒಂದು ನಿರ್ಧಾರ ಕೈಗೊಂಡು ಕಾವೇರಿ ಹೋರಾಟಕ್ಕೆ ಕರೆ ನೀಡಿದರೆ, ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ರೈತನ ಮಗನಾಗಿ ಹೋರಾಟಕ್ಕೆ ನಾನು ಬೆಂಬಲ ಕೊಡುತ್ತೇನೆ. ಚಿತ್ರರಂಗದ ಎಲ್ಲ ಕಲಾವಿದರು ಜತೆಗೆ ನಿಂತು ಹೊರಾಡುತ್ತೇವೆʼʼ ಎಂದರು.
ನಮ್ಮ ಹೆತ್ತ ಅಮ್ಮನನ್ನು ಬೇರೆಯವರಿಗೆ ಹೇಗೆ ಕೊಡೋದು..?
ಬೆಂಗಳೂರು ಬಂದ್ ಬೆನ್ನಲ್ಲೇ ನಟಿ ಕಾರುಣ್ಯ ರಾಮ್ (Karunya Ram) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಮಾತನಾಡಿ ʻʻಬೆಂಗಳೂರಿನ ಆರ್ ಆರ್ ನಗರಕ್ಕೆ ಇನ್ನು ಕಾವೇರಿ ನೀರು ಪೂರೈಕೆ ಆಗಿಲ್ಲ.ಆರ್ ಆರ್ ನಗರದಲ್ಲಿ ವಾಸಿಸುತ್ತಿರುವ ನಮಗೆ ಕಾವೇರಿ ನೀರು ಸೌಲಭ್ಯವಿಲ್ಲ. ನಮಗೆ ಇಲ್ಲದ ನೀರು ಅವರಿಗೇಕೆ ಕೊಡಬೇಕು..? ನಮ್ಮ ಹೆತ್ತ ಅಮ್ಮನನ್ನ ಬೇರೆಯವರಿಗೆ ಹೇಗೆ ಕೊಡೋದು..? ಯಾರು ಗಲಭೆ ಮಾಡದೇ ಶಾಂತಿಯುತವಾಗಿ ಹೋರಾಟದಲ್ಲಿ ಭಾಗಿಯಾಗೋಣʼʼಎಂದರು.
ಇದನ್ನೂ ಓದಿ: Dhruva Sarja: ಮಗ ಹುಟ್ಟಿದ ತಕ್ಷಣ ಚಿರುಗೆ ಕಾಲ್ ಮಾಡಲು ಹೋಗಿದ್ದೆ ಎಂದು ಭಾವುಕರಾದ ಧ್ರುವ ಸರ್ಜಾ!
ಕಾವೇರಿ ಬಗ್ಗೆ ಧ್ರುವ ಸರ್ಜಾ ಮೊದಲ ಪ್ರತಿಕ್ರಿಯೆ
— Vistara News (@VistaraNews) September 25, 2023
ಕಾವೇರಿ ವಿವಾದ ಬಗ್ಗೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದು, ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಅಂತಾ ಹೇಳಿದ್ದಾರೆ.#dhruvasarja #cauveryissue #cauveryprotest pic.twitter.com/oejRouk8Tp
ಕಾವೇರಿ ನೀರಿಗಾಗಿ ಸೆ. 26ರಂದು ಬೆಂಗಳೂರು ಬಂದ್
ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ (Cauvery Protest) ಬಂದ್ ಬಗ್ಗೆ ತೀರ್ಮಾನ ತೆಗೆದುಕೊಂಡ ಬೆನ್ನಿಗೇ ನಾನಾ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಣೆ ಮಾಡಿವೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ಬಂದ್ ಘೋಷಣೆಯಾದ ಬಳಿಕ ಹಲವು ಸಂಘಟನೆಗಳು ತಾವು ನಿಮ್ಮ ಜತೆಗಿರುತ್ತೇವೆ ಎಂದು ಪ್ರಕಟಿಸಿವೆ. ಸುಮಾರು 150 ಸಂಘಟನೆಗಳು ಬಂದ್‌ಗೆ ಬೆಂಬಲಿಸಿರುವುದರಿಂದ ಬಂದ್ ಯಶಸ್ವಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.