Site icon Vistara News

Dhruva Sarja: ಫೆಬ್ರವರಿ 23ರಂದು ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್‌ʼ ಟೀಸರ್‌ ರಿಲೀಸ್‌?

Dhruva Sarja martin Teaser Release Date

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ʻಪೊಗರುʼ ಸಿನಿಮಾ ಬಳಿಕ ಮಾರ್ಟಿನ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆನಂತರದಲ್ಲಿ ಪ್ರೇಮ್‌ ಜತೆ ಕೆ.ಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಾರ್ಟಿನ್‌ ಚಿತ್ರದ ಟೀಸರ್‌ ಫೆಬ್ರವರಿ 23ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್ ಆ್ಯಪ್​ ಗ್ರೂಪ್​ಗಳಲ್ಲಿ ಟೀಸರ್ ರಿಲೀಸ್ ಮಾಹಿತಿ ಹರಿದಾಡುತ್ತಿವೆ. ಧ್ರುವ ಸರ್ಜಾ ಎಡಿಟಿಂಗ್ ರೂಮ್​​ನಲ್ಲಿ ಕುಳಿತ ಒಂದು ಫೋಟೋ ಕೂಡ ಈ ವಿಷಯದೊಂದಿಗೆ ಹರಿದಾಡುತ್ತಿದೆ. ಇನ್ನು ಚಿತ್ರದ ನಿರ್ದೇಶಕರಾಗಲಿ, ಚಿತ್ರದ ನಾಯಕ ನಟರಾಗಲಿ, ಅಧಿಕೃತವಾಗಿ ಟೀಸರ್ ರಿಲೀಸ್ ಬಗ್ಗೆ ಹೇಳಿಕೊಂಡಿಲ್ಲ. ಎ.ಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Dhruva Sarja | ʻಕೆಡಿʼ ಚಿತ್ರಕ್ಕೆ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ

ಧ್ರುವ ಸರ್ಜಾ ಸದ್ಯ ಕೆ.ಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

Exit mobile version