Site icon Vistara News

Dhruva Sarja: `ಪೊಗರು’ ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಕೇವಲ 30ನೇ ವಯಸ್ಸಿಗೆ ನಿಧನ

Body building Star Jo Lindner has died

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ‘ಪೊಗರು’ ಸಿನಿಮಾದಲ್ಲಿ ಅಭಿನಯಿಸಿರುವ ಜರ್ಮನ್ ಬಾಡಿಬಿಲ್ಡರ್ ಜೋ ಲಿಂಡ್ನರ್ ಕೇವಲ 30 ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ನಿಧನದ (Jo Lindner Dies) ಸುದ್ದಿಯನ್ನು ಸ್ನೇಹಿತರು ಸೋಷಿಯಲ್ ಮೀಡಿಯಾ ಮೂಲಕ ದೃಢಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 85 ಲಕ್ಷ ಫಾಲೋವರ್ಸ್‌, ಹೊಂದಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ (Jo Lindner) ಹಠಾತ್‌ ನಿಧನಕ್ಕೆ ಅವರ ಫ್ಯಾನ್ಸ್‌ ಕಂಬನಿ ಮಿಡಿದಿದ್ದಾರೆ.

ಅಮೆರಿಕದ ಜನಪ್ರಿಯ ಬಾಡಿ ಬಿಲ್ಡರ್ ಕಾಯ್ ಗ್ರೀನ್, ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವ ಜಾನ್ ಲುಕಾಸ್ ಹಾಗೂ ಜರ್ಮನಿಯ ಫಿಟ್ನೆಸ್ ಸೆನ್ಸೇಷನ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯನಾಗಿದ್ದ ಜೋ ಲಿಂಡ್ನೆರ್ ‘ಪೊಗರು’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಮೂವರು ಬಾಡಿ ಬಿಡ್ಡರ್‌ನಲ್ಲಿ ಅತ್ಯಂತ ಕಿರಿಯನಾಗಿದ್ದ ಜರ್ಮನಿ ಮೂಲದ ಜೋ ಲಿಂಡ್ನೆರ್ ದಿಢೀರನೇ ಕೊನೆಯುಸಿರೆಳೆದಿದ್ದಾರೆ.

ಜೋ ಲಿಂಡ್ನರ್ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಜರ್ಮನಿ ಮೂಲದವರಾದರೂ ಜೋ ಲಿಂಡ್ನರ್ ಹಲವು ವರ್ಷಗಳಿಂದ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ದೇಹದಾರ್ಢ್ಯತೆಯ ವಿಡಿಯೊಗಳನ್ನು ಶೇರ್ ಮಾಡುತ್ತಿದ್ದರು. ಈ ವಿಡಿಯೊಗಳಿಂದಲೇ ವಿಶ್ವದಾದ್ಯಂತ ಹಲವರ ಗಮನ ಸೆಳೆದಿದ್ದರು. ಇಷ್ಟೊಂದು ಫಿಟ್ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಸಾವನ್ನಪ್ಪಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿರೋ ಫಿಟ್ನೆಸ್ ಕಮ್ಯೂನಿಟಿಗೆ ಜೋ ಲಿಂಡ್ನೆರ್ ಪ್ರೇರಣೆಯಾಗಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಜೋ ಲಿಂಡ್ನೆರ್ ಸ್ಪೂರ್ತಿಯಾಗಿದ್ದರು.

ಜೋ ಲಿಂಡ್ನರ್‌ಗೆ ಕಳೆದ ಮೂರು ದಿನಗಳಿಂದ ಕತ್ತಿನಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ವಿಷಯವನ್ನು ತನ್ನ ಗರ್ಲ್‌ಫ್ರೆಂಡ್ (Jo lindner girlfriend) ನಿಚಾ ಬಳಿ ಹೇಳಿಕೊಂಡಿದ್ದರು. ಈ ನೋವು ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಏನೂ ಪ್ರಯೋಜನ ಆಗಲಿಲ್ಲ ಎಂದು ಜೋ ಲಿಂಡ್ನರ್ ಗರ್ಲ್‌ಫ್ರೆಂಡ್ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhruva Sarja: ದೇವತೆಯ ಚೆಲುವ ನೋಡಲು, ಮಾಯಗಾತಿ ನಗುವ ಕಲಿಯಲು ಹೊರಟ ಧ್ರುವ ಸರ್ಜಾ!

ಜೋ ಲಿಂಡ್ನರ್ ಗರ್ಲ್‌ಫ್ರೆಂಡ್ ಇನ್‌ಸ್ಟಾಗ್ರಾಮ್‌ ಪೋಸ್ಟ್‌

ಜೋ ಲಿಂಡ್ನರ್ ಸಾವಿಗೆ ಬ್ರೈನ್ ಎನ್ಯೂರಿಸಂ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಆದರೆ, ಗೆಳತಿ ಹೇಳಿದಂತೆ ಗುರುತು ಹಿಡಿಯಲು ಸಾಧ್ಯವಾಗದಂತಹ ಕತ್ತು ನೋವಿನಿಂದ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಧ್ರುವ ಸರ್ಜಾ ಕೂಡ ಫೋಸ್ಟ್‌ ಹಂಚಿಕೊಂಡಿದ್ದಾರೆ. ಲಿಂಡ್ನರ್‌ ತಮ್ಮದೇ ಯುಟ್ಯೂಬ್‌ ಚಾನೆಲ್‌ ಆರಂಭಿಸಿ ತಾನು ಅಭ್ಯಾಸ ಮಾಡುವ ವೇಳೆ ಫಿಟ್ನೆಸ್‌ ಸಲಹೆಗಳನ್ನ ಅದರಲ್ಲಿ ಹಂಚಿಕೊಳ್ಳುತ್ತಿದ್ದರು.

Exit mobile version