Site icon Vistara News

Dhruva Sarja | ಧ್ರುವ ಸರ್ಜಾ-ಪ್ರೇಮ್‌ ಕಾಂಬಿನೇಶನ್‌ ಸಿನಿಮಾದ ಟೈಟಲ್‌ ರಿವೀಲ್‌!

Dhruva Sarja

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಸಿನಿಮಾದ ಶೀರ್ಷಿಕೆ ಅಕ್ಟೋಬರ್‌ 20ರಂದು ಅನಾವರಣಗೊಂಡಿದೆ. ಸಂಜಯ್ ದತ್ ಮೊದಲಾದ ಪರಭಾಷೆಯ ಸ್ಟಾರ್​ಗಳು ಆಗಮಿಸಿ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ. ʻಕೆಡಿ (KD)ʼಎಂದು ಸಿನಿಮಾಗೆ ಟೈಟಲ್‌ ಇಡಲಾಗಿದೆ. ʻದಿ ಡೆವಿಲ್‌ʼ ಎಂಬ ಅಡಿ ಬರಹ ಕೂಡ ಇದೆ.

ʻಸತ್ತರೆ ವೀರ ಮರಣ, ಗೆದ್ದರೆ ಸಿಂಹಾಸನ, ಯುದ್ಧ ಶುರು ಮಾಡಣʼ ಎಂಬ ಮಾಸ್‌ ಡೈಲಾಗ್‌ ಮೂಲಕ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅದ್ಧೂರಿ’, ‘ಭರ್ಜರಿ’ ಮೊದಲಾದ ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಇದನ್ನೂ ಓದಿ | Dhruva Sarja | ಪ್ರಿನ್ಸೆಸ್‌ಗೆ ತಂದೆಯಾದ ಆಕ್ಷ್ಯನ್‌ ಪ್ರಿನ್ಸ್‌ ಧ್ರುವ ಸರ್ಜಾ; ತಾಯಿ-ಮಗು ಇಬ್ಬರು ಕ್ಷೇಮ

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಈ ಟೀಸರ್ ಕೇವಲ 15 ನಿಮಿಷದಲ್ಲಿ 40 ಲಕ್ಷ ವೀಕ್ಷಣೆ ಕಂಡಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

ಧ್ರುವ ಸರ್ಜಾ ʻಮಾರ್ಟಿನ್‌ʼ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ. ಎ.ಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ | Keerthi Suresh | ರಿವೀಲ್‌ ಆಯ್ತು ʻದಸರಾʼ ಸಿನಿಮಾದ ಕೀರ್ತಿ ಸುರೇಶ್ ಖಡಕ್‌ ಲುಕ್‌!

Exit mobile version