Site icon Vistara News

Dhruva Sarja: ಮೊದಲ ಬಾರಿಗೆ ಮಗಳ ಫೇಸ್‌ ರಿವೀಲ್‌ ಮಾಡಿದ ಧ್ರುವ ಸರ್ಜಾ

Dhruva Sarja Reveal Her daughter Face

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇರಣ ದಂಪತಿ, ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ದಾರೆ.

7 ತಿಂಗಳ ಬಳಿಕ ಮಗಳ ಮೊದಲ ಫೋಟೊ ಶೇರ್ ಮಾಡಿದ್ದಾರೆ. ಇದು 7 ತಿಂಗಳ ಮಗಳ ಫೋಟೊವಲ್ಲ. ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೊ ಇದಾಗಿದೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಧ್ರುವ ಸರ್ಜಾ ಪೋಸ್ಟ್‌ ಹಂಚಿಕೊಂಡು ʻʻಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಮಗಳಿಗೆ ಈಗ 7 ತಿಂಗಳು. ಮಗಳ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಮಗಳು ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೊಗಳುʼʼಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಮೊದಲ ಬಾರಿಗೆ ಧ್ರುವ ಮಗಳ ಫೋಟೊ ಶೇರ್ ಮಾಡಿದ್ದು, ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

‘ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೊಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್’ ಎಂದು ಹೇಳಿದ್ದಾರೆ.

Exit mobile version