ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅವರು ತಮ್ಮ ಫ್ಯಾಮಿಲಿಗೂ ಸಮಯ ಕೊಡುತ್ತಿದ್ದು, ತಮ್ಮ ಮುದ್ದು ಮಗಳ ಜತೆ ಸಮಯ ಕಳೆಯುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನಮ್ಮ ಜೀವನಕ್ಕೆ ದೇವತೆಯಂತೆ ಬಂದಿರುವ ಮಗಳ ಚೆಲುವು ನೋಡಿ ಎಂದು ಪುಟ್ಟ ವಿಡಿಯೊ ತುಣುಕು ಹಾಕಿದ್ದಾರೆ. ಮಗಳು ಬಂದ ಮೇಲೆ ನಮ್ಮ ಜೀವನವು ಇನ್ನಷ್ಟು ಬೆಳಕಾಗಿದೆ ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.
ಕಳೆದ ಅಕ್ಟೋಬರ್ 2ರಂದು ಹೆಣ್ಣು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದರು. ಆಗ, ತಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದರು.
ಈ ಹಿಂದೆ ಬೇಬಿ ಬಂಪ್ ಫೋಟೊವನ್ನು ಹಂಚಿಕೊಡಿದ್ದ ಧ್ರುವ, ‘ನಾವು ಜೀವನದ ಹೊಸ ಹಂತಕ್ಕೆ ಏರುತ್ತಿದ್ದೇವೆ. ಅದೊಂದು ದೈವತ್ವದ ಹಂತ. ಶೀಘ್ರದಲ್ಲೇ ಬರುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ, ಜೈ ಹನುಮಾನ್’ ಎಂಬ ಅಡಿಬರಹದ ಮೂಲಕ ಗಮನ ಸೆಳೆದಿದ್ದರು.
ಧ್ರುವ ದಂಪತಿಗೆ ಮಗಳ ನಗು, ತುಂಟಾಟ ಹೊಸ ಪ್ರಪಂಚವಾಗಿದೆ. ಈಗ ಆಕೆಯ ಜತೆಗೆ ಆಟವಾಡುತ್ತಾ, ಆಕೆಯ ಆಟ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಗಳ ಜತೆ ಧ್ರುವ ಸರ್ಜಾರ ತುಂಟಾಟದ ಫೋಟೊ ಈ ಹಿಂದೆ ವೈರಲ್ ಆಗಿತ್ತು. ಹನುಮನ ಭಕ್ತನಾಗಿರುವ ಧ್ರುವ ಸರ್ಜಾ ಮಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಆಶೀರ್ವಾದ ಕೊಡಿಸಿದ್ದಾರೆ.
ರಾಮಾಚಾರಿ ಸಿನಿಮಾದ ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು ಎಂಬ ಗೀತೆಯ ಸಾಲುಗಳಿಗೆ ಮಗಳ ಫೋಟೊ ಸೇರಿಸಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ. ಧ್ರುವ ಸರ್ಜಾರ ಮಗಳ ಫೋಟೊಗೆ ಅಭಿಮಾನಿಗಳು ಖಷ್ ಆಗಿದ್ದಾರೆ.
ಪಂಚ ಭಾಷೆಯಲ್ಲಿ ಮಾರ್ಟಿನ್ ಸಿನಿಮಾ
ಎ.ಪಿ ಅರ್ಜುನ್ ಡೈರೆಕ್ಷನ್, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಮಾರ್ಟಿನ್ ಸಿನಿಮಾದಲ್ಲಿ ಮಾಸ್ ಆಗಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ.
ಇದನ್ನೂ ಓದಿ: Parineeti and Raghav : ರಾಘವ್ ಜತೆ ಪರಿಣಿತಿ ಚೋಪ್ರಾ ಲವ್ವಲ್ಲಿ ಬಿದ್ದಿದ್ದು ಹೇಗೆ? ಇದು ಒಂದು ತಿಂಡಿಯ ಕಥೆ!
ಅದ್ಧೂರಿ ಬಜೆಟ್ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ಮಾರ್ಟಿನ್ (MARTIN TEASER), ಕ್ಲೈಮ್ಯಾಕ್ಸ್‌ನ ಆ್ಯಕ್ಷನ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ