Site icon Vistara News

Dhruva Sarja: ಪ್ರೀತಿಯ ಅಣ್ಣ ಚಿರು ಸಮಾಧಿಯ ಪಕ್ಕದಲ್ಲಿ ಮಲಗಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Dhruva Sarja

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಪ್ರೀತಿಯ ಅಣ್ಣ ಚಿರು ಸರ್ಜಾ ಸ್ಮಾರಕದ ಮುಂದೆ ಮಲಗಿರುವ ವಿಡಿಯೊ ವೈರಲ್‌ ಆಗಿದೆ. ಶೂಟಿಂಗ್ ಇಲ್ಲದಿದ್ದಾಗ ಚಿರು ಸರ್ಜಾ ಸಮಾಧಿಯ ಬಳಿ ಆಗಾಗ ಧ್ರುವ ಹೋಗುತ್ತಿರುತ್ತಾರೆ. ಬಿಡುವಿನ ಸಮಯದಲ್ಲಿ ಎಲ್ಲೋ ಹೋಗದೇ ಅಣ್ಣನ ಸಮಾಧಿಗೆ ಭೇಟಿ ನೀಡುತ್ತಾರೆ. ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್‌ ಹಾಕಿಕೊಂಡು ಮಲಗಿದ್ದಾರೆ. ಧ್ರುವ ಸರ್ಜಾಗೆ ತಿಳಿಯದ ಹಾಗೆ ಆಪ್ತರು ವಿಡಿಯೊ ಸೆರೆ ಹಿಡಿದಿದ್ದಾರೆ.

ಧ್ರುವ ಸರ್ಜಾ ಜನುಮದಿನದಂದೇ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್‌!

ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ರಾಜಮಾರ್ತಾಂಡ ಸಿನಿಮಾ, ಧ್ರುವ ಸರ್ಜಾ (Dhruva Sarja) ಅವರ ಜನುಮದಿನದ ನಿಮಿತ್ತ ರಿಲೀಸ್‌ ಆಗಲಿದೆ. ಅಕ್ಟೋಬರ್‌ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದೀಗ ಚಿತ್ರತಂಡ ಪ್ರಚಾರ ಕಣಕ್ಕಿಳಿದಿದೆ.

ಚಿರಂಜೀವಿ ಸರ್ಜಾ (chiranjeevi sarja) ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ (rangamarthanda). ಇದೀಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ವಿಶೇಷ ಏನೆಂದರೆ, ಧ್ರುವ ಸರ್ಜಾ ಅವರ ಬರ್ತ್‌ಡೇ ದಿನವೇ ಈ ಸಿನಿಮಾ ರಿಲೀಸ್‌ ಆಗಲಿದೆ. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್‌ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇದನ್ನೂ ಓದಿ: Dhruva Sarja: ʻಯುವʼ, ʻಮಾರ್ಟಿನ್‌ʼ ನಡುವೆ ಕ್ಲ್ಯಾಶ್‌; ರಿಲೀಸ್‌ ಡೇಟ್‌ ಅನೌನ್ಸ್‌!

ವೈರಲ್‌ ವಿಡಿಯೊ

ಡಿಸೆಂಬರ್‌ 22ರಂದು ಮಾರ್ಟಿನ್‌ ತೆರೆಗೆ

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಟೀಸರ್‌ ಈಗಾಗಲೇ ಬಿಡುಗಡೆಗೊಂಡಿದ್ದು ನೋಡುಗರು ಮೆಚ್ಚಿದ್ದಾರೆ. ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ‘ಮಾರ್ಟಿನ್ (‘MARTIN’ TEASER) ಇದೀಗ ಮತ್ತೆ ಸಿಹಿ ಸುದ್ದಿಯನ್ನು ನೀಡಿದೆ. ಡಿಸೆಂಬರ್‌ 22ರಂದು ಅದ್ಧೂರಿಯಾಗಿ ʻಮಾರ್ಟಿನ್‌ʼ ತೆರೆಗೆ ಬರುತ್ತಿದೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಇದೀಗ ಪಂಚ ಭಾಷೆಗಳಲ್ಲಿ, ಮಾರ್ಟಿನ್‌ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಜತೆ ಹೆಜ್ಜೆ ಹಾಕಿದ ಇಟಲಿ‌ ಮೂಲದ ನಟಿ!

ಇದೇ ಸಮಯಕ್ಕೆ ಯುವ ಸಿನಿಮಾ ಕೂಡ ತೆರೆಗೆ ಅಪ್ಪಳಿಸುತ್ತಿದೆ. ಈ ಸಿನಿಮಾದಲ್ಲಿ ಯುವ ರಾಜಕುಮಾರ್ (Yuvraj Kumar) ನಾಯಕನಾಗಿ ನಟಿಸುತ್ತಿದ್ದಾರೆ. ಸಪ್ತಮಿ ಗೌಡ ಅವರು ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ. 

Exit mobile version