Site icon Vistara News

Dhruva Sarja | ʻಕೆ ಡಿʼ ಚಿತ್ರೀಕರಣಕ್ಕೂ ಮೊದಲೇ ವಿತರಣಾ ಹಕ್ಕು ಸೇಲ್!

Dhruva Sarja

ಬೆಂಗಳೂರು : ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರ ‘ಕೆ ಡಿ’ ಟೈಟಲ್‌ ಟೀಸರ್‌ ಲಾಂಚ್‌ ಆಗಿದೆ. ಈಗ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಚಿತ್ರದ ವಿತರಣಾ ಹಕ್ಕುಗಳು ಮಾರಾಟವಾಗಿವೆ.

ಕನ್ನಡದಲ್ಲಿ ನಿರ್ದೇಶಕ ಪ್ರೇಮ್‌, ಮಲಯಾಳಂನಲ್ಲಿ ಮೋಹನ್‌ ಲಾಲ್‌, ತಮಿಳಿನಲ್ಲಿ ವಿಜಯ್‌ ಸೇತುಪತಿ, ಹಿಂದಿಯಲ್ಲಿ ಸಂಜಯ್‌ ದತ್‌ ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಬಹುಭಾಷೆಯ ನಟರ ಖಡಕ್‌ ವಾಯ್ಸ್‌ನಲ್ಲಿ ‘ರಾಮಾಯಣದ ಯುದ್ಧ ನಡೆದಿದ್ದು ಹೆಣ್ಣಿಗಾಗಿ, ಕುರುಕ್ಷೇತ್ರ ಯುದ್ಧ ನಡೆದಿದ್ದು ಮಣ್ಣಿಗಾಗಿ. ಈ ಕಲಿಯುಗದ ಈ ಯುದ್ಧ ಬಿಸಿ ರಕ್ತಕ್ಕಾಗಿ’ ಎನ್ನುವ ಡೈಲಾಗ್‌ಗಳನ್ನು ಒಳಗೊಂಡ ಟೀಸರ್‌ ಬಿಡುಗಡೆ ಆಗಿ ಒಂದು ದಿನ ಮುಗಿಯುವ ಮುನ್ನವೇ 2 ಕೋಟಿ ಜನ ನೋಡಿದ್ದರು.

ಇದನ್ನೂ ಓದಿ | Dhruva Sarja | ಪ್ರಿನ್ಸೆಸ್‌ಗೆ ತಂದೆಯಾದ ಆಕ್ಷ್ಯನ್‌ ಪ್ರಿನ್ಸ್‌ ಧ್ರುವ ಸರ್ಜಾ; ತಾಯಿ-ಮಗು ಇಬ್ಬರು ಕ್ಷೇಮ

ಕೆಜಿಎಫ್ ಮತ್ತು ಕಾಂತಾರದಂತಹ ಚಲನಚಿತ್ರಗಳ ಪ್ರಸಿದ್ಧ ವಿತರಕರು ಆದ ಅನಿಲ್ ಥಡಾನಿ, ಉತ್ತರ ಭಾರತದಲ್ಲಿ ಕೆ ಡಿ ವಿತರಣೆಯ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ. ಸಾಯಿ ಕೊರಪಟ್ಟಿಯವರ ವಾರಾಹಿ ಚಲನ ಚಿತ್ರಂ ಈ ಚಿತ್ರವನ್ನು ತೆಲುಗಿನಲ್ಲಿ ವಿತರಿಸಲಿದೆ.

ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ತಮಿಳು ವರ್ಷನ್‌ ಉಸ್ತುವಾರಿ ವಹಿಸಿದೆ. ಮಲಯಾಳಂನಲ್ಲಿ ವಿತರಣೆಯನ್ನು ಮೋಹನ್ ಲಾಲ್ ಅವರ ಆಶೀರ್ವಾದ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಾಡಲಿದ್ದಾರೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ. ಕನ್ನಡದ ನಟಿಯರನ್ನೆ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾಗೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್‌ ಛಾಯಾಗ್ರಹಣ ಚಿತ್ರಕ್ಕಿದೆ. ಧ್ರುವ ಸರ್ಜಾ ಸದ್ಯಕ್ಕೆ ಮಾರ್ಟಿನ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವನ್ನು ಎ.ಪಿ ಅರ್ಜುನ್‌ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | Dhruva Sarja | ಧ್ರುವ ಸರ್ಜಾ-ಪ್ರೇಮ್‌ ಕಾಂಬಿನೇಶನ್‌ ಸಿನಿಮಾದ ಟೈಟಲ್‌ ರಿವೀಲ್‌!

Exit mobile version