Site icon Vistara News

Dhruva Sarja: ಮಗಳ ಜತೆ  ಧ್ರುವ ಸರ್ಜಾ ತುಂಟಾಟದ ಪೋಟೊ ವೈರಲ್‌

Dhruva Sarja

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಮಗಳ ಜತೆ ಸಮಯ ಕಳೆಯುತ್ತಿರುವ ಫೋಟೊವನ್ನು ಮೊದಲ ಬಾರಿ ಹಂಚಿಕೊಂಡಿದ್ದಾರೆ. ಮಗಳ ಮುಖವನ್ನು ರಿವೀಲ್‌ ಮಾಡದ ನಟ ,ʻʻನನ್ನ ಮಗಳು,
ಲವ್ ಯು ಮಗಳೇʼʼ ಎಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಪತ್ನಿ ಪ್ರೇರಣಾ ತಮ್ಮ ಮಗಳ ಫೋಟೊವನ್ನು ಹಂಚಿಕೊಂಡಿದ್ದರು. ಅಕ್ಟೋಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪ್ರೇರಣಾ, ತಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಬರೆದುಕೊಂಡಿದ್ದರು. ಈ ಹಿಂದೆ ಬೇಬಿ ಬಂಪ್‌ ಫೋಟೋವನ್ನು ಹಂಚಿಕೊಡಿದ್ದ ಧ್ರುವ, ‘ನಾವು ಜೀವನದ ಹೊಸ ಹಂತಕ್ಕೆ ಏರುತ್ತಿದ್ದೇವೆ. ಅದೊಂದು ದೈವತ್ವದ ಹಂತ. ಶೀಘ್ರದಲ್ಲೇ ಬರುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ, ಜೈ ಹನುಮಾನ್​’ ಎಂದು ಅಡಿಬರಹದ ಮೂಲಕ ಗಮನ ಸೆಳೆದಿದ್ದರು.

ಧ್ರುವ ಸರ್ಜಾ ಮತ್ತು ಪ್ರೇರಣಾ ವಿವಾಹ 2019ರ ನವೆಂಬರ್​​ನಲ್ಲಿ ನಡೆದಿತ್ತು. ಇದೀಗ ನಟ ಮಗಳ ಫೋಟೊ ಹಂಚಿಕೊಂಡದ್ದು, ಮುಖ ತೋರಿಸಿಲ್ಲ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಸದ್ಯ ಕೆ.ಡಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

ಇದನ್ನೂ ಓದಿ: Dhruva Sarja: ಮತ್ತೆ ಚಂದನವನಕ್ಕೆ ಎಂಟ್ರಿ ಕೊಡ್ತಾರಾ ನಟಿ ಶಿಲ್ಪಾ ಶೆಟ್ಟಿ?

ಧ್ರುವ ಸರ್ಜಾ ʻಮಾರ್ಟಿನ್‌ʼ ಸಿನಿಮಾದಲ್ಲಿಯೂ ಬ್ಯಸಿಯಾಗಿದ್ದಾರೆ. ಎ.ಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

Exit mobile version