Site icon Vistara News

Dhruva Sarja: ಧ್ರುವ ಸರ್ಜಾ ಹುಟ್ಟುಹಬ್ಬದ ಸಿಡಿಪಿಗಳು ವೈರಲ್, ಫ್ಯಾನ್ಸ್‌ ಫುಲ್‌ ಖುಷ್‌!

dhruva sarjas birthday cdp

ಬೆಂಗಳೂರು: ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ನೋವಿನಲ್ಲೇ ಇದ್ದ ಧ್ರುವ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. 3 ವರ್ಷಗಳ ಬಳಿಕ ಈ ಬಾರಿ ಹುಟ್ಟುಹಬ್ಬದ ದಿನ(ಅಕ್ಟೋಬರ್ 6) ಅಭಿಮಾನಿಗಳ ಜತೆ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹುಟ್ಟುಹಬ್ಬ ಆಚರಣೆ ಶುರುವಾಗಿದೆ. ಬರ್ತ್‌ಡೇ ಕಾಮನ್ ಸಿಡಿಪಿಗಳು (common display picture – CDP) ಸಖತ್ ವೈರಲ್ ಆಗುತ್ತಿದೆ. ಧ್ರುವ ಕಡೆಯಿಂದ ವಿಐಪಿಗಳಲ್ಲಿ ವಿಶೇಷ ಮನವಿ ಕೂಡ ಈ ಹಿಂದ ಮಾಡಿದ್ದರು.

ಮನವಿ ಏನು?

ಈ ತಮ್ಮ ಹುಟ್ಟುಹಬ್ಬದ ದಿನ ಧ್ರುವ ಕಡೆಯಿಂದ ವಿಐಪಿಗಳಲ್ಲಿ ವಿಶೇಷ ಮನವಿ ಇದೆ. “ಧ್ರುವ ಸರ್ಜಾ ಅವರ ಎಲ್ಲಾ ವಿಐಪಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ತಿಳಿಸುವುದೇನೆಂದರೆ, ಇದೇ ಅಕ್ಟೋಬರ್ 05, 2023 ರಂದು ರಾತ್ರಿ 11.00 ರಿಂದ ಧ್ರುವ ಸರ್ಜಾರವರ ಹುಟ್ಟುಹಬ್ಬವನ್ನು ಅವರ ಮನೆಯ ಬಳಿ ಅದ್ಧೂರಿಯಾಗಿ ಆಚರಿಸುತ್ತೇವೆ. ಚಿರು ಅಣ್ಣನವರ ನಿಧನ ನಂತರ ಧ್ರುವ ಸರ್ಜಾರವರ ಹುಟ್ಟು ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. 3 ವರ್ಷಗಳ ನಂತರ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳ ಕೋರಿಕೆಯ ಮೇರೆಗೆ ಆಚರಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿಕೊಂಡಿದ್ದರು.

“ಹುಟ್ಟು ಹಬ್ಬದ ಆಚರಣೆಗೆ ಆಗಮಿಸುತ್ತಿರುವ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳು ಯಾವುದೇ ರೀತಿಯ ಕೇಕ್‌ಗಳು, ಹೂಗುಚ್ಚಗಳು ಹಾಗೂ ಉಡುಗೊರೆಗಳನ್ನು ತರದೆ, ಬದಲಿಗೆ ಶಾಲಾ ಮಕ್ಕಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳು, ಪೆನ್ನುಗಳು ಹಾಗೂ ಶಾಲಾ ಬ್ಯಾಗ್‌ಗಳನ್ನು ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಕೋರಿಕೊಳ್ಳುತ್ತೇವೆ, ಹಾಗೂ ನಾವು ಅವುಗಳನ್ನು ನೇರವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ತಲುಪಿಸುತ್ತೇವೆ. ಜೈ ಆಂಜನೇಯ” ಎಂದು ಧ್ರುವ ತಂಡದ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆಯಾಗಿತ್ತು.

ಮಾರ್ಟಿನ್’ ಚಿತ್ರತಂಡ ಧ್ರುವ ಬರ್ತ್‌ಡೇ ಸಿಡಿಪಿ ರಿಲೀಸ್ ಮಾಡಿದೆ. ಹನುಮಂತನ ದೊಡ್ಡ ಅಭಿಮಾನಿ ಧ್ರುವ. ಹಾಗಾಗಿ ಹನುಮಂತನ ಚಿತ್ರದ ಮುಂದೆ ಧ್ರುವ ಖಡಕ್ ಲುಕ್‌ನಲ್ಲಿ ಯುವರಾಜನಂತೆ ಕಾಣಿಸಿಕೊಂಡಿರುವ ಸಿಡಿಪಿ ಡಿಸೈನ್ ಮಾಡಲಾಗಿದೆ.

ಧ್ರುವ ಸರ್ಜಾ ‘ಮಾರ್ಟಿನ್’ ಹಾಗೂ ‘ಕೆಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ‘ಮಾರ್ಟಿನ್’ ಆರ್ಭಟ ಶುರುವಾಗಲಿದೆ.

ಇದನ್ನೂ ಓದಿ: Dhruva Sarja: ಸಮಾಜಮುಖಿ ಕಾರ್ಯದಲ್ಲಿ ಕಾರುಣ್ಯ ರಾಮ್‌: ಅಶ್ವಿನಿ ಪುನೀತ್, ಧ್ರುವ ಸರ್ಜಾ ಸಾಥ್!

ಧ್ರುವ ಸರ್ಜಾ ಜನುಮದಿನದಂದೇ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್‌!

ಧ್ರುವ ಸರ್ಜಾ (Dhruva Sarja) ಅವರ ಜನುಮದಿನದ ನಿಮಿತ್ತ ರಿಲೀಸ್‌ ಆಗಲಿದೆ. ಅಕ್ಟೋಬರ್‌ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿರಂಜೀವಿ ಸರ್ಜಾ (chiranjeevi sarja) ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ (rangamarthanda).

ವಿಶೇಷ ಏನೆಂದರೆ, ಧ್ರುವ ಸರ್ಜಾ (rajamarthanda release date) ಅವರ ಬರ್ತ್‌ಡೇ ದಿನವೇ ಈ ಸಿನಿಮಾ ರಿಲೀಸ್‌ ಆಗಲಿದೆ. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್‌ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Exit mobile version