Site icon Vistara News

Dia Mirza: ಮದುವೆ ವಾರ್ಷಿಕೋತ್ಸವದ ವಿಶೇಷ ವಿಡಿಯೊ ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ

Dia Mirza

ಬೆಂಗಳೂರು: ಬಾಲಿವುಡ್‌ ನಟಿ ದಿಯಾ ಮಿರ್ಜಾ (Dia Mirza) ತಮ್ಮ ಎರಡನೇ ವರ್ಷದ ಮದುವೆಯ ವಾರ್ಷಿಕೋತ್ಸವಕ್ಕೆ ಪತಿ-ಉದ್ಯಮಿ ವೈಭವ್ ರೇಖಿ ಅವರಿಗೆ ವಿಡಿಯೊ ಮೂಲಕ ವಿಶ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ದಿಯಾ ಅವರು ಮದುವೆಯ ಅನ್‌ಸೀನ್‌ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮದುವೆಯ ಕೆಲವು ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಇಬ್ಬರು ಸಪ್ತಪದಿ ತುಳಿದಿರುವ, ದಿಯಾಳ ಹಣೆಯ ಮೇಲೆ ಸಿಂಧೂರ ಇಡುವ, ಉಂಗುರಗಳನ್ನು ಬದಲಾಯಿಸಿಕೊಂಡಿರುವ, ಚುಂಬಿಸರುವ ಹೀಗೆ ಕೆಲವು ದೃಶ್ಯಗಳನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ದಿಯಾ ಪೋಸ್ಟ್‌ ಹಂಚಿಕೊಂಡು ʻʻಹ್ಯಾಪಿ ಆನಿವರ್ಸರಿ ವೈಭವ್. ನನಗೆ ಸಾರ್ವಕಾಲಿಕ ಶ್ರೇಷ್ಠ ಉಡುಗೊರೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ದಿಯಾ ಫೆಬ್ರವರಿ 2021ರಲ್ಲಿ ಉದ್ಯಮಿ ವೈಭವ್ ಅವರನ್ನು ವಿವಾಹವಾದರು. ಮೇ 14, 2021 ರಂದು ಅವರು ಅವ್ಯಾನ್ ಆಜಾದ್ ರೇಖಿ ಗಂಡು ಮಗುವನ್ನು ಸ್ವಾಗತಿಸಿದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಜರ್ಮನಿ ಮೂಲದ ಫ್ರಾಂಕ್‌ ಹ್ಯಾಂಡ್‌ರಿಚ್‌ ಹಾಗೂ ಬೆಂಗಾಲಿ ಇಂಟೀರಿಯರ್‌ ಡಿಸೈನರ್‌ ದೀಪಾ ದಂಪತಿಯ ಪುತ್ರಿ ದಿಯಾ ಮಿರ್ಜಾ. ಹೀಗಾಗಿ ದಿಯಾ ಮಿರ್ಜಾ ಹಾಫ್‌ ಜರ್ಮನ್‌ ಮತ್ತು ಕ್ರಿಶ್ಚಿಯನ್‌ ಇವಾರಾಗಿದ್ದಾರೆ.

ಇದನ್ನೂ ಓದಿ: Kajol Devgan: ಇಲ್ಲಿವೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಕಾಜೋಲ್ ಅವರ ಲೇಟೆಸ್ಟ್‌ ಬ್ಲಿಂಗಿ ಸೀರೆ ಫೋಟೊಗಳು

ರತ್ನ ಪಾಠಕ್ ಷಾ, ಫಾತಿಮಾ ಸನಾ ಶೇಖ್ ಮತ್ತು ಸಂಜನಾ ಸಂಘಿ ಜತೆಗೆ ದಿಯಾ ಮುಂದಿನ ʻಧಕ್ ಧಕ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತರುಣ್ ದುಡೇಜಾ ಅವರ ನಿರ್ದೇಶನವಿದೆ.

Exit mobile version