Site icon Vistara News

Pooja Hegde: ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ?

Pooja Hegde

ಬೆಂಗಳೂರು: ನಟಿ ಪೂಜಾ ಹೆಗ್ಡೆ ಅವರಿಗೆ ಕೊಲೆ ಬೆದರಿಕೆ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು. ಜನಪ್ರಿಯ ಪಾಪರಾಜಿ (ಪೋಟೊಗ್ರಾಫರ್‌) ಖಾತೆ ವೈರಲ್ ಭಯಾನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ದುಬೈನಲ್ಲಿ ನಟಿಗೆ ಬೆದರಿಕೆಗಳು ಬಂದಿದೆ ಎಂದು ಹೇಳಿಕೊಂಡಿತ್ತು. ದುಬೈನಲ್ಲಿ ಪೂಜಾ ಹೆಗ್ಡೆ ಅವರು ಉದ್ಘಾಟನಾ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಆಗ ನಟಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗಿತ್ತು. ಇದಾದ ಬಳಿಕ ಈ ಸುದ್ದಿ ಸಖತ್‌ ವೈರಲ್‌ ಆಗಿದ್ದು, ಪೂಜಾ ಹೆಗ್ಡೆ ಫ್ಯಾನ್ಸ್‌ ಕಮೆಂಟ್‌ ಮೂಲಕ ಗಾಬರಿ ವ್ಯಕ್ತಪಡಿಸಿದ್ದರು. ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಪಾಪರಾಜೋ ಖಾತೆಯು ಈ ಮಾಹಿತಿಯನ್ನು ಹಂಚಿಕೊಂಡ ಕೂಡಲೇ, ಪೂಜಾ ಹೆಗ್ಡೆ ಅವರ ಹಲವಾರು ಅಭಿಮಾನಿಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. “ದಯವಿಟ್ಟು ಭಾರತಕ್ಕೆ ಸುರಕ್ಷಿತವಾಗಿ ತಲುಪಿ” ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದರು. ಹಲವರು ನಟಿಯ ಕ್ಷೇಮವನ್ನು ವಿಚಾರಿಸಿದ್ದರು. ಇದೀಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಟಿಯ ತಂಡ ಸ್ಪಷ್ಟಪಡಿಸಿದೆ. ನಟಿಯ ಪ್ರತಿನಿಧಿಯೊಬ್ಬರು ಮಾಧ್ಯಮವೊಂದಕ್ಕೆ ಈ ಬಗ್ಗೆ “ಈ ಫೇಕ್‌ ಸುದ್ದಿಯನ್ನು ಯಾರು ಶುರು ಮಾಡಿದರು ಎಂದು ನಮಗೆ ತಿಳಿದಿಲ್ಲ. ಇದು ಸುಳ್ಳು. ಯಾವುದೇ ಕೊಲೆ ಬೆದರಿಕೆ ಕರೆ ಬಂದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದಾದ ಬಳಿಕ ವೈರಲ್ ಭಯಾನಿ ಕೂಡ ಪೋಸ್ಟ್ ಅನ್ನು ಡಿಲೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Pooja Hegde: ಶಾಹಿದ್ ಕಪೂರ್ ಜತೆ ಪೂಜಾ ಹೆಗ್ಡೆ ರೊಮ್ಯಾನ್ಸ್‌!

ಸಿನಿಮಾ ವಿಚಾರಕ್ಕೆ ಬಂದರೆ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಜತೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆದರೆ ಹೀನಾಯವಾಗಿ ಸೋತಿತು. ಪೂಜಾ ಇದೀಗ ಶಾಹಿದ್ ಕಪೂರ್ ಅವರೊಂದಿಗೆ ʻದೇವʼ ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಚಿತ್ರವನ್ನು ರೋಶನ್ ಆಂಡ್ರ್ಯೂಸ್ ನಿರ್ದೇಶಿಸಿದ್ದಾರೆ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ್ದಾರೆ. ಈ ಚಿತ್ರವು ಮುಂದಿನ ವರ್ಷ ಅಕ್ಟೋಬರ್ 11 ರಂದು ಚಿತ್ರಮಂದಿರಗಳಿಗೆ ಬರಲಿದೆ.

ದೇವ ಜೊತೆಗೆ ಪೂಜಾ ಹೆಗ್ಡೆ ಅವರ ಕಿಟ್ಟಿಯಲ್ಲಿ ಹೌಸ್‌ಫುಲ್ 5 ಕೂಡ ಇದೆ. ಫ್ರಾಂಚೈಸಿಯ 5ನೇ ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್, ಬಾಬಿ ಡಿಯೋಲ್, ಕೃತಿ ಸನೋನ್, ಕೃತಿ ಖರ್ಬಂದ, ಜಾಕ್ವೆಲಿನ್ ಫರ್ನಾಂಡೀಸ್, ದಿಶಾ ಪಟಾನಿ ಮತ್ತು ಚಂಕಿ ಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Exit mobile version