Site icon Vistara News

Actor Darshan: ದರ್ಶನ್‌ರನ್ನು ಧ್ರುವ ಮಾತನಾಡಿಸದಿರಲು ಸುಳ್ಳು ಕಾರಣ ಹೇಳಿದ್ರಾ ಪ್ರಥಮ್‌? ರುಬ್ಬಿದ ಫ್ಯಾನ್ಸ್!

Pratham Dhruva Darshan

ಬೆಂಗಳೂರು: ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್‌ (Actor Darshan) ಹಾಗೂ ತಮ್ಮ ನಡುವೆ ಎದ್ದು ತೋರಿದ ಮನಸ್ತಾಪದ ವಿಚಾರದಲ್ಲಿ ಧ್ರುವ ಸರ್ಜಾ (Dhruva Sarja) ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದಾರೆ. ಧ್ರುವ ಅವರು ಕಾವೇರಿ ಹೋರಾಟದ ಸಂದರ್ಭದಲ್ಲಿ ದರ್ಶನ್‌ ಅವರ ಆಗಮನವಾದರೂ, ಧ್ರುವ ಕುಳಿತ ಸೀಟಿನಿಂದ ಮೇಲೆಳಲಿಲ್ಲ. ಧ್ರುವ ಅವರ ಈ ವರ್ತನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಾದ ಕೂಡಲೇ ಒಳ್ಳೆ ಹುಡಗ ಪ್ರಥಮ್‌ ಕಾರಣವನ್ನೂ ಬಿಚ್ಚಿಟ್ಟಿದ್ದರು. ಆದರೆ ಇದೀಗ ಧ್ರುವ ಸರ್ಜಾ ಅವರು ದರ್ಶನ್‌ ಬಳಿ ಕೇಳಬೇಕಾದ ಪ್ರಶ್ನೆಗಳು ನನ್ನ ಬಳಿ ಇದ್ದು, ಅದನ್ನು ಅವರ ಬಳಿಯೇ ಕೇಳಬೇಕಿದೆ ಎಂದಿದ್ದಾರೆ. ಇದೀಗ ನೆಟ್ಟಿಗರು ಪ್ರಥಮ್‌ ಅವರ ಕಾಲೆಳೆಯುತ್ತಿದ್ದಾರೆ.

ಪ್ರಥಮ್‌ ಹೇಳಿದ್ದೇನು?

ಕಾವೇರಿ ಹೋರಾಟದಿನವೇ ಧ್ರುವ ಅವರ ಅಭಿಮಾನಿಯೊಬ್ಬರು ಮೃತಪಟ್ಟಿದ್ದರು. ಅವರ ದೊಡ್ಡ ಅಭಿಮಾನಿಯಾಗಿದ್ದ ರಘುನಾಥ ಭಜಂತ್ರಿ, ಬಂದ್‍ಗಿಂತ ಒಂದು ದಿನ ಮುಂಚಿತವಾಗಿ ತೀರಿ ಹೋದರು. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ಅಪಘಾತದಲ್ಲಿ ಕಾರು-ಬಸ್ಸಿನ ನಡುವೆ ಅಪಘಾತ ಸಂಭವಿಸಿತ್ತು. ಈ ಕಾರಣಕ್ಕೆ ಧ್ರುವ ಸಪ್ಪೆಯಾಗಿದ್ದರು. ಅದೇ ವಿಷಯವನ್ನು ನೆನಪಿಸಿಕೊಂಡು ಕೊರಗುತ್ತಿದ್ದಾರೆ. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ. ಬಹಳ ಡಿಪ್ರೆಸ್‍ ಆಗಿಬಿಟ್ಟಿದ್ದರು. ಮೂರು ದಿನಗಳ ಕಾಲ ಅವರು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು. ಕಾವೇರಿ ಬಂದ್‍ ದಿನ ಅವರ ಮುಖದಲ್ಲಿ ನಗುವಿಲ್ಲ, ಚೈತನ್ಯವಿಲ್ಲ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ತಮಗೆ ಬೇಕಾಗಿದ್ದನ್ನು ಹೇಳುತ್ತಿದ್ದಾರೆ. ಇವತ್ತಿಗೂ ಅದೇ ನೋವಿನಲ್ಲಿದ್ದಾರೆ. ಸರಿಯಾಗಿ ಮಾತನಾಡುತ್ತಿಲ್ಲʼʼಎಂದಿದ್ದರು ಪ್ರಥಮ್‌.

ಇದನ್ನೂ ಓದಿ: Actor Darshan : ಕಾವೇರಿ ಹೋರಾಟಕ್ಕೆ ನಾನು, ಸುದೀಪ್‌, ಶಿವಣ್ಣ, ಯಶ್ ಮಾತ್ರಾ ಕಾಣ್ಸೋದಾ?; ನಟ ದರ್ಶನ್‌ ಆಕ್ರೋಶ

ಆಗಿದ್ದೇ ಬೇರೆ!

ಇಷ್ಟೆಲ್ಲ ಹೇಳಿಕೆ ನೀಡಿದ್ದ ಪ್ರಥಮ್‌ ಮಾತಿಗೂ ಇದೀಗ ಧ್ರುವ ಹೇಳಿಕೆಗೂ ಮ್ಯಾಚ್‌ ಆಗುತ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇದೀಗ ಹುಟ್ಟು ಹಬ್ಬದ ದಿನದಂದು ಧ್ರುವ ಸರ್ಜಾ ಮಾತನಾಡಿ ʻʻದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕುʼ ಎಂದರು.

ʼನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸ್ಸಲ್ಲೊಂದು, ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲʼ ಎಂದಿದ್ದಾರೆ ಧ್ರುವ.

ಇಷ್ಟೆಲ್ಲ ಆದಮೇಲೆ ನೆಟ್ಟಿಗರು ʻʻಅದೇನೆ ಇಬ್ಬರ ಮಧ್ಯೆ ವೈಮನಸ್ಸು ಇದ್ದರೂ ಎಲ್ಲವೂ ಸರಿ ಆಗಲಿ ಎಂಬುದೇ ನಮ್ಮ ಆಶಯ. ಡಿ-ಬಾಸ್ ದರ್ಶನ್ ಅವರು ಧ್ರುವ ಸರ್ಜಾ ಹಾಗೂ ಅವರ ಫ್ಯಾಮಿಲಿಗೆ ಬಹಳಷ್ಟು ಬೆಂಬಲವಾಗಿ ನಿಂತವರು. ಅವರ ವೈಯಕ್ತಿಕ ಹಾಗೂ ಸಿನಿಮಾಗೆ ಸಂಬಂಧಿಸಿದಂತೆ ಯಾವದನ್ನೂ ಇಬ್ಬರೂ ಮರೆಯಬಾರದು. ಆದಷ್ಟು ಬೇಗ ಸುಖಾಂತ್ಯ ಕಾಣಲಿ ಈ ವಿಷಯʼʼಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡಿದ್ದಾರೆ.

Exit mobile version