Site icon Vistara News

Shahrukh Khan | ʻಪಠಾಣ್‌ʼನಲ್ಲಿ ಶಾರುಖ್‌ ಸಂಭಾವನೆ 100 ಕೋಟಿ ರೂ: ದೀಪಿಕಾ ಪಡುಕೋಣೆ ಪಡೆದಿದ್ದೆಷ್ಟು?

Shahrukh Khan

ಬೆಂಗಳೂರು : ಶಾರುಖ್ ಖಾನ್‌ (Shahrukh Khan) ಅವರ ‘ಪಠಾಣ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್‌ ಖಾನ್‌ ʻಪಠಾಣ್‌ʼ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ. ಇದೀಗ ಪಠಾಣ್‌ ಸಿನಿಮಾದ ಹಾಡು ಬಿಡುಗಡೆಗೊಂಡಿದ್ದು, ವಿವಾದಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ತಾರೆಯರ ಸಂಭಾವನೆ ರಿವೀಲ್‌ ಆಗಿದೆ.

ದೀಪಿಕಾ ಪಡುಕೋಣೆ ಸಿನಿಮಾದ ʻಬೇಷರಮ್‌ ರಂಗ್ʼ ಸಾಂಗ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಜಾನ್ ಅಬ್ರಹಾಂ ʻಪಠಾಣ್ʼ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದಿದ್ದಾರೆ ಎನ್ನಲಾಗಿದೆ.

ಸಿದ್ಧಾರ್ಥ್ ಆನಂದ್ ಸಿದ್ಧಾರ್ಥ್ ಬಾಲಿವುಡ್‌ನ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರು. ಅವರು ಈ ಹಿಂದೆ ʻಬ್ಯಾಂಗ್ ಬ್ಯಾಂಗ್ʼ ಮತ್ತು ʻವಾರ್ʼನಂತಹ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ʻಪಠಾಣ್‌ʼ ಸಿನಿಮಾ ನಿರ್ದೇಶನಕ್ಕೆ ಅವರು 6 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Shahrukh Khan | ʻಪಠಾಣ್‌ʼ ಸಿನಿಮಾ ಸಾಂಗ್‌ ಔಟ್‌: ಸಖತ್‌ ಹಾಟ್‌ ಆಗಿ ಮಿಂಚಿದ ದೀಪಿಕಾ ಪಡುಕೋಣೆ!

ಶಾರುಖ್ ಖಾನ್ 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ವರದಿ ಹೇಳುವಂತೆ ಪಠಾಣ್‌ ಸಿನಿಮಾಗೆ ಶಾರುಖ್‌ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ. ʻಪಠಾಣ್’ ಸಿನಿಮಾವನ್ನು ಭಾರತ, ಇಟಲಿ, ಯುಎಇ, ಫ್ರಾನ್ಸ್, ಟರ್ಕಿ, ಸ್ಪೇನ್, ರಷ್ಯಾ ಹಾಗೂ ಅಫಘಾನಿಸ್ತಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಕೆಲವು ಸ್ಟಿಲ್‌ಗಳನ್ನು ನಿರ್ಮಾಪಕ ಆದಿತ್ಯ ಚೋಪ್ರಾ ಹಂಚಿಕೊಂಡಿದ್ದು, ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿದ್ದು, ಹಲವು ಮೈನವಿರೇಳಿಸುವ ದೃಶ್ಯಗಳು ಸಿನಿಮಾದಲ್ಲಿರಲಿವೆʼʼ ಎಂದಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

Exit mobile version