Site icon Vistara News

Tamannaah Bhatia: ಪ್ರೇಮಿಗಳ ದಿನದಂದು ವಿಶೇಷ ಫೋಟೊ ಹಂಚಿಕೊಂಡ ವಿಜಯ್ ವರ್ಮಾ: ತಮನ್ನಾ ಕಾಲು ಎಂದ ನೆಟ್ಟಿಗರು!

Tamannaah Bhatia

ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ನಟಿ ತಮನ್ನಾ (Tamannaah Bhatia) ಹಾಗೂ ಬಾಲಿವುಡ್‌ ನಟ ವಿಜಯ್ ವರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಚುಂಬಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಪ್ರೇಮಿಗಳ ದಿನದಂದು ವಿಶೇಷವಾಗಿ ವಿಶ್ ಮಾಡುವ ಮೂಲಕ ತನ್ನ ಪ್ರೇಮಿಯ ಜತೆಗಿನ ಫೋಟೊವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದಾರೆ. ಫೋಟೊ ನೋಡಿ ನೆಟ್ಟಿಗರು ವಿಜಯ್ ವರ್ಮಾ ಶೇರ್ ಮಾಡಿರುವ ಕಾಲಿನ ಫೋಟೊ ತಮನ್ನಾ ಅವರದ್ದೇ ಎಂದು ಹೇಳುತ್ತಿದ್ದಾರೆ.

ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೊ ಮತ್ತು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ವಿಜಯ್‌ ವರ್ಮಾ ಶೇರ್‌ ಮಾಡಿರುವ ಫೋಟೊದಲ್ಲಿ, ಶೂ ಮತ್ತು ಜರ್ಕಿನ್ ನೋಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎನ್ನುತ್ತಿದ್ದಾರೆ. ಈ ಮೂಲಕ ವಿಜಯ್ ವರ್ಮಾ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: Tamanna Bhatia | ಡೇಟಿಂಗ್‌ ಸುದ್ದಿ ಬೆನ್ನಲೇ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ?

ʻಲವ್‌ ಸ್ಟೋರಿಸ್‌ 2ʼ ಶೂಟಿಂಗ್‌ ವೇಳೆ ತಮನ್ನಾ ಅವರು ವಿಜಯ್‌ ವರ್ಮಾ ಅವರನ್ನು ಭೇಟಿಯಾಗಿದ್ದರು. ಆಲಿಯಾ ಭಟ್‌ ʻಡಾರ್ಲಿಂಗ್ಸ್‌ʼ ಸಿನಿಮಾದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

Exit mobile version