Site icon Vistara News

Dilip Kumar : ದಿಲೀಪ್‌ ಕುಮಾರ್‌ ಬಂಗಲೆ ನೆಲಸಮ ಮಾಡಲು ಮುಂದಾದ ಕುಟುಂಬ! ಏನು ಕಾರಣ?

dilip kumar Bungalow

ಮುಂಬೈ: ಬಾಲಿವುಡ್‌ನ ಲೆಜೆಂಡ್‌ ಎಂದು ಕರೆಸಿಕೊಳ್ಳುತ್ತಿದ್ದವರು ದಿಲೀಪ್‌ ಕುಮಾರ್‌ (Dilip Kumar). ಅವರು ನಿಧನರಾಗಿ ಎರಡು ವರ್ಷಗಳು ಕಳೆದಿವೆಯಾದರೂ ಅವರ ನೆನಪುಗಳ ಮಾತ್ರ ಬಾಲಿವುಡ್‌ ಪ್ರಿಯರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡಿದೆ. ಹೀಗಿರುವಾಗ ಮುಂಬೈನಲ್ಲಿ ಅವರು ವಾಸವಿದ್ದ ಪಾಲಿ ಹಿಲ್‌ ಬಂಗಲೆಯನ್ನು ನೆಲಸಮ ಮಾಡುವ ನಿರ್ಧಾರವನ್ನು ಅವರ ಕುಟುಂಬ ತೆಗೆದುಕೊಂಡಿದೆ. ಆ ಬಂಗಲೆಯ ಜಾಗದಲ್ಲಿ ದೊಡ್ಡದೊಂದು ಕಟ್ಟಡವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಹೌದು. ದಿಲೀಪ್‌ ಕುಮಾರ್‌ ವಾಸವಿದ್ದ ಬಂಗಲೆಯನ್ನು ನೆಲಸಮ ಮಾಡಲಾಗುತ್ತಿದೆ. ರಿಯಾಲಿಟಿ ಡೆವಲಪರ್‌ ಆಗಿರುವ ಅಶರ್‌ ಗ್ರೂಪ್‌ನೊಂದಿಗೆ ದಿಲೀಪ್‌ ಕುಮಾರ್‌ ಅವರ ಕುಟುಂಬ ಒಪ್ಪಂದ ಮಾಡಿಕೊಂಡಿದ್ದು, ಆ ಬಂಗಲೆಯ ಜಾಗದಲ್ಲಿ 11 ಮಹಡಿಯ ಕಟ್ಟಡವನ್ನು ನಿರ್ಮಿಸಲು ಮುಂದಾಗಿದೆ. ಈ ಕಟ್ಟಡದ ಕೆಲಸವನ್ನು 2027ರ ಸಮಯಕ್ಕೆ ಸಂಪೂರ್ಣಗೊಳಿಸಲಾಗುವುದು ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?
ಈ ಜಾಗದ ಬಗ್ಗೆ ಪ್ರಕರಣವೊಂದು ದಾಖಲಾಗಿತ್ತು. ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಈ ಬಂಗಲೆಯ ಜಾಗವನ್ನು ತಮ್ಮದೆಂದು ಹೇಳಿತ್ತು. ಈ ಬಗ್ಗೆ ದಿಲೀಪ್‌ ಕುಮಾರ್‌ ಅವರ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸದ್ಯ ಎಲ್ಲ ಸಮಸ್ಯೆ ಬಗೆಹರಿದಿದೆ. ಜಾಗವು ದಿಲೀಪ್‌ ಕುಮಾರ್‌ ಕುಟುಂಬಕ್ಕೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದ್ದರಿಂದಾಗಿ ಆ ಜಾಗದಲ್ಲಿ ಬೇರೆ ಕಟ್ಟಡ ಕಟ್ಟಲು ಕುಟುಂಬ ನಿರ್ಧರಿಸಿದೆ.

ಕಟ್ಟಡದಲ್ಲಿ ಕೆಳ ಮಹಡಿಯನ್ನು ದಿಲೀಪ್‌ ಕುಮಾರ್‌ ಅವರಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯ ಮಾಡಲಾಗುವುದು. ಅರ್ಧ ಎಕರೆ ಜಾಗದಲ್ಲಿರುವ ಈ ಕಟ್ಟಡದಿಂದ ಒಟ್ಟು 900 ಕೋಟಿ ರೂ. ಆದಾಯ ಬರುವಂತೆ ಮಾಡಲಾಗುವುದು. ಒಟ್ಟಾರೆಯಾಗಿ ಕಟ್ಟಡದಲ್ಲಿ 1.75 ಲಕ್ಷ ಚದರ ಅಡಿ ಜಾಗ ಸಿಗುವಂತೆ ಮಾಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಶರ್‌ ಗ್ರೂಪ್‌ ಸದ್ಯದಲ್ಲೇ ಬಂಗಲೆಯನ್ನು ನೆಲಸಮ ಮಾಡಲಿದ್ದು, ಕಟ್ಟಡದ ಕಾಮಗಾರಿಯನ್ನು ಆರಂಭಿಸಲಿದೆ.

ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ
ದಿಲೀಪ್‌ ಕುಮಾರ್‌ ಅವರು ಬಾಲಿವುಡ್‌ನಲ್ಲಿ ಹಲವಾರು ಸಿನಿಮಾಗಳನ್ನು ಮಾಡಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಅದರ ಅವರು ನಟಿಸಿದ ಹಲವಾರು ಸಿನಿಮಾದಲ್ಲಿ ದುರಂತ ಅಂತ್ಯವನ್ನೇ ಕಥೆಯನ್ನಾಗಿಸಲಾಗಿತ್ತು. ಹಾಗಾಗಿ ದಿಲೀಪ್‌ ಕುಮಾರ್‌ ಅವರಿಗೆ ಟ್ರಾಜಿಡಿ ಹೀರೋ ಎನ್ನುವ ಹೆಸರೂ ಬಂದಿತ್ತು. ಅವರ ನಟನೆಯ ಮೇಳ (1948), ಅಂದಾಜ್ (1949), ದೀದಾರ್ (1951), ದೇವದಾಸ್ (1955), ಯಹೂದಿ (1958) ಮತ್ತು ಮಧುಮತಿ (1958) ಸಿನಿಮಾಗಳೆಲ್ಲವೂ ದುರಂತ ಅಂತ್ಯದಲ್ಲೇ ಮುಗಿದಿದ್ದವು. ದಿಲೀಪ್‌ ಕುಮಾರ್‌ ಅವರನ್ನು ಬಾಲಿವುಡ್‌ನ ಸೂಪರ್‌ ಸ್ಟಾರ್‌ ಆಗಿ ಮಾಡಿದ್ದು 1960 ರ ಮುಘಲ್-ಎ-ಆಜಮ್ ಸಿನಿಮಾ. ಈ ಸಿನಿಮಾದಲ್ಲಿ ದಿಲೀಪ್‌ ಕುಮಾರ್‌ ಅವರೊಂದಿಗೆ ನಟಿ ಮಧುಬಾಲಾ ಅವರು ನಟಿಸಿದ್ದರು. ಅವರಿಬ್ಬರು ಸಿನಿಮಾದಿಂದಾಗಿ ಪರಸ್ಪರ ಪ್ರೀತಿಯಲ್ಲೂ ಬಿದ್ದಿದ್ದಾರೆ ಎಂದು ಆಗ ವರದಿಗಳಾಗಿದ್ದವು. ದಿಲೀಪ್‌ ಕುಮಾರ್‌ ಅವರು 2021ರ ಜುಲೈ 7ರಂದು ನಿಧನರಾದರು. 98 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಸಾವಿಗೀಡಾದರು.

Exit mobile version