Site icon Vistara News

Palanku Movie: 17 ವರ್ಷ ಪೂರೈಸಿದ ಮಮ್ಮುಟ್ಟಿ ಅಭಿನಯದ ʻಪಲುಂಕುʼ ಸಿನಿಮಾ, ಇದರ ಕತೆ ಹೃದಯಸ್ಪರ್ಶಿ

Director Blessy Palunku

ಬೆಂಗಳೂರು: ಮಮ್ಮುಟ್ಟಿ ಅಭಿನಯದ ಪಲುಂಕು (Palanku Movie) ಚಿತ್ರಕ್ಕೆ ಇಂದಿಗೆ 17 ವರ್ಷಗಳು ಸಂದಿವೆ. 2006ರ ಡಿಸೆಂಬರ್ 22ರಂದು ಸಿನಿಮಾ ಬಿಡುಗಡೆಗೊಂಡು ಹಿಟ್‌ ಕಂಡಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲೆಸ್ಸಿ (Director Blessy) ಬರೆದು, ನಿರ್ದೇಶಿಸಿದ್ದರು. ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪಲುಂಕು ಒಬ್ಬ ರೈತನ ಕಥೆಯಾಗಿದೆ. ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರವಾಗಿದ್ದು, ಪಲುಂಕು ‘ನೋಡಲೇಬೇಕಾದ ಚಿತ್ರ’ ಎಂದು ಪ್ರಶಂಸಿಸಲ್ಪಟ್ಟಿತ್ತು. ಈ ಚಿತ್ರಕ್ಕೆ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು. ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ಕೂಡ ದೊರಕಿತ್ತು. ನಿರ್ದೇಶಕ ಬ್ಲೆಸ್ಸಿ ಈ ಬಗ್ಗೆ ಮಾತನಾಡಿ ʻʻಹದಿನೇಳು ವರ್ಷಗಳ ಹಿಂದೆ, ಒಂದು ಅಂಗಡಿಯ ಮುಂದೆ ಎರಡೂವರೆ ವರ್ಷದ ಮಗುವನ್ನು ಕ್ರೂರವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು. ಪಲುಂಕು ಚಿತ್ರ ಆ ಘಟನೆ ಆಧಾರಿತ ಸಿನಿಮಾವಾಗಿದೆ. ಆ ದುರಂತ ಈಗಲೂ ನನಗೆ ಮರೆಯಲಾಗುವುದಿಲ್ಲ. ವ್ಯವಸ್ಥೆಯ ವಿರುದ್ಧ ಮೊನಿಚೆನ್ (ಪಾತ್ರ) ಅವರ ಬಂಡಾಯ ಕೂಗಿಗೆ ಇಂದಿಗೆ ಹದಿನೇಳು ವರ್ಷಗಳುʼʼ ಎಂದು ಹೇಳಿದರು.

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಬ್ಲೆಸ್ಸಿ ಅವರ ಮುಂದಿನ ಚಿತ್ರ ʼಆಡುಜೀವಿತಂʼ 2024ರ ಏಪ್ರಿಲ್ 10ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ʼಪಲುಂಕುʼ ಈಗ ಅಮೇಜಾನ್‌ ಪ್ರೈಂನಲ್ಲಿ ಲಭ್ಯವಿದೆ.

ಇದನ್ನೂ ಓದಿ: Turbo Movie: ಮಮ್ಮುಟ್ಟಿ ಅಭಿನಯದ ʻಟರ್ಬೊʼ ಫಸ್ಟ್‌ ಲುಕ್‌ ಔಟ್‌!

ಟರ್ಬೊʼ ಫಸ್ಟ್‌ ಲುಕ್‌ ಔಟ್‌!

ಮಮ್ಮುಟ್ಟಿ ಅವರು ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ಟರ್ಬೋ ಕೂಡ ಒಂದು. ರಾಜ್ ಬಿ ಶೆಟ್ಟಿ ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುವ ಸಾಧ್ಯತೆಯಿದೆ ಎಂತಲೂ ವರದಿಯಾಗಿದೆ. ಇದರಲ್ಲಿ ಫೈಟ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಜೀಪಿನಿಂದ ಹೊರಬರುವ ಮಮ್ಮುಟ್ಟಿಯ ಸ್ಟೈಲಿಶ್ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಮಮ್ಮುಟ್ಟಿ ಅವರು ಕೊಟ್ಟಾಯಂ ಕುಂಜಚ್ಚನ್ 2 ಸಿನಿಮಾ ಹೊಂದಿದ್ದಾರೆ. ಮಹಿ ವಿ ರಾಘವ್ ಮತ್ತು ಕಣ್ಣೂರು ಸ್ಕ್ವಾಡ್ ನಿರ್ದೇಶನದ ಯಾತ್ರಾ 2 ಸಿನಿಮಾ ಕೂಡ ಅವರ ಕೈಯಲ್ಲಿದೆ.

ಆಡು ಜೀವಿತಂ ಏಪ್ರಿಲ್ 10ರಂದು ತೆರೆಗೆ

ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾ 2024ರ ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ.

ಇದನ್ನೂ ಓದಿ: Pant And Dhoni: ದುಬೈನಲ್ಲಿ ಟೆನಿಸ್​ ಆಡಿದ ಪಂತ್​-ಧೋನಿ; ವಿಡಿಯೊ ವೈರಲ್​

ಆಡು ಜೀವಿತಂ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

Exit mobile version