Site icon Vistara News

Guruprasad | ಸಿನಿಮಾ ಮಾಡಿ ಕೊಡುವುದಾಗಿ ನಿರ್ಮಾಪಕನಿಗೆ ಟೋಪಿ; ʻಮಠʼ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅರೆಸ್ಟ್‌

Guruprasad

ಬೆಂಗಳೂರು: ʻಮಠʼ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಅವರನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ಪೊಲೀಸರು ಶುಕ್ರವಾರ ಜನವರಿ 13ರಂದು ಬಂಧಿಸಿದ್ದಾರೆ. ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಶ್ರೀನಿವಾಸ್‌ ಎಂಬುವರಿಗೆ ಹಣ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಿರಿ‌ನಗರ ಠಾಣೆ ಪೋಲಿಸರು ಗುರು ಪ್ರಸಾದ್‌ ಅವರನ್ನು ಬಂಧಿಸಿದ್ದಾರೆ. ಅವರನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಸಿನಿಮಾ ಮಾಡುವುದಾಗಿ ಶ್ರೀನಿವಾಸ್‌ ಅವರನ್ನು ನಂಬಿಸಿ 30 ಲಕ್ಷ ರೂ. ಪಡೆದು ಗುರುಪ್ರಸಾದ್‌ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. NI ಆ್ಯಕ್ಟ್ ಅಡಿ ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರಂಟ್ ಜಾರಿಯಾಗಿತ್ತು.

ಇದನ್ನೂ ಓದಿ | Death News | ಸಾತ್ವಿಕ ಸಾಧಕಿ ತಂಗಮ್ಮ ಹಿರೇಮಠ ಇನ್ನಿಲ್ಲ, ವಯೋಸಹಜ ಅನಾರೋಗ್ಯದಿಂದ ವಿಧಿವಶ

Exit mobile version