Site icon Vistara News

R.Chandru: ʻಕಬ್ಜʼ ಸೇರಿ 5 ಸಿನಿಮಾಗಳ ಘೋಷಣೆ ಮಾಡಿ, ಲೈಟ್ ಕಂಬಕ್ಕಲ್ಲ, ಚಂದ್ರಲೋಕಕ್ಕೆ ಕಲ್ಲು ಹೊಡಿಬೇಕು ಎಂದ ಆರ್‌.ಚಂದ್ರು!

Director R Chandru

ಬೆಂಗಳೂರು: ಆರ್​. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್‌ ಸೇರಿತ್ತು. ಭಾರಿ ಕಲೆಕ್ಷನ್‌ ಮಾಡಿರುವ ಸಿನಿಮಾವನ್ನು ಅದೆಷ್ಟೋ ಜನ ಇಷ್ಟ ಪಟ್ಟಿರಲಿಲ್ಲ. ಹೀಗಾಗಿ ʻಕಬ್ಜʼ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಆದರೀಗ ಆರ್​. ಚಂದ್ರು ಈ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಜನವರಿ 23ರಂದು ಚಂದ್ರು ಅವರು ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಅದರಲ್ಲಿ ‘ಕಬ್ಜ 2’ ಸಿನಿಮಾ ಕೂಡ ಇದೆ. R.C. ಸ್ಟುಡಿಯೋಸ್ ಶುಭಾರಂಭದ ವೇಳೆ ಅನೌನ್ಸ್‌ ಮಾಡಿದ್ದಾರೆ.

ಮತ್ತೊಂದು ಸಾಹಸಕ್ಕೆ ಕೈ ಹಾಕಿದ ಆರ್.ಚಂದ್ರು

ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿದೆ. ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಆನಂದ್ ಪಂಡಿತ್, ಅಲಂಕಾರ್ ಪಾಂಡಿಯನ್, ಡಾರ್ಲಿಂಗ್ ಕೃಷ್ಣ ಭಾಗಿಯಾಗಿದ್ದರು.

ಇದೀಗ ಆರ್‌ ಚಂದ್ರು ಅವರು ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಎಲ್ಲಾ ಸಿನಿಮಾಗಳಿಗೂ ಅವರು ನಿರ್ದೇಶನ ಮಾಡುತ್ತಿಲ್ಲ. ಕೆಲ ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ.

ಉಪೇಂದ್ರ ಮಾತನಾಡಿ ʻʻನಾನು 35 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ. 5 ಸಿನಿಮಾ ಒಂದೇ ಸಲ ಲಾಂಚ್ ಆಗಿದ್ದು ನೋಡಿಲ್ಲ. ಬಹಳ ಹೆಮ್ಮೆ ಅನಿಸುತ್ತದೆ. ಆರ್ ಚಂದ್ರು ಜತೆ 3 ಸಿನಿಮಾ ಮಾಡಿದ್ದೇನೆ. ನೆಗೆಟಿವ್ ಮಾತನಾಡುವವರು ತುಂಬಾ ಜನ ಇದ್ದಾರೆ. ಅವರ ನಡುವೆ ಜ್ಯೋತಿ ತರ ಬೆಳಗಿ. ಬರೀ ನೆಗೆಟಿವಿಟಿ ತುಂಬಿರೂ ಸಿನಿಮಾ ಇಂಡಸ್ಟ್ರಿಯಲ್ಲಿ ಇಂತ ಪಾಸಿಟೀವ್ ವ್ಯಕ್ತಿ ಸಿಗೋದು ತುಂಬಾ ಅಪರೂಪʼʼಎಂದರು.

ಇದನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆ ದಿನವೇ ʻಶ್ರೀ ರಾಮ್, ಜೈ ಹನುಮಾನ್ʼ ಸಿನಿಮಾ ಅನೌನ್ಸ್‌!

ಆರ್‌ ಚಂದ್ರು ಮಾತನಾಡಿ ʻʻಯಾವುದೇ ಕೆಲಸ ಮಾಡಬೇಕು ಅಂದರೆ ಯೋಗಬೇಕು. ಯೋಗ್ಯತೆ ಬೇಕು. 10 ತಿಂಗಳು ನಾನು ಸುಮ್ನೆ ಕೂತಿರಲಿಲ್ಲ. ಕೈ ಹಾಕಿದರೆ ಕರಂಟ್ ಕಂಬಕ್ಕೆ ಕೈ ಹಾಕಬಾರದು. ಚಂದ್ರಲೋಕಕ್ಕೆ ಕೈ ಹಾಕಬೇಕು. ಕಬ್ಜ’ ಸಿನಿಮಾದ ಕಲೆಕ್ಷನ್ ಫೇಕ್ ಎಂದು ಅನೇಕರು ಹೇಳಿದ್ದರು.‘ಕಬ್ಜ ಸಿನಿಮಾದಿಂದ ನಾನು ಸರ್ಕಾರಕ್ಕೆ 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ. ಕನ್ನಡ ಸಿನಿಮಾಗಳನ್ನು ನೋಡ್ಬೇಕು ಅಂದ್ರೆ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡ್ಬೇಕು. ಬಾಯಿ ಇದೆ ಎಂದು ಮಾತನಾಡಿದರೆ ಐದು ಸಿನಿಮಾ, ಹತ್ತು ಸಿನಿಮಾ ಆಗಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ.

ಕಬ್ಜ ಸಿನಿಮಾದ ಮೊದಲ ಭಾಗದಲ್ಲಿ ಸುದೀಪ್‌, ಉಪೇಂದ್ರ ಹಾಗೂ ಶ್ರೀಯಾ ಶರಣ್ ಪಾತ್ರ ಹೈಲೈಟ್ ಆಗಿತ್ತು. ಪೊಲೀಸ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಶಿವರಾಜ್‌ಕುಮಾರ್‌ ಅವರು ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದರು. ಮುಂದಿನ ಭಾಗದಲ್ಲಿ ಶಿವಣ್ಣ ಹೈಲೈಟ್‌ ಆಗ್ತಾರಾ ಎಂಬುದು ಕಾದು ನೋಡಬೇಕಿದೆ.

Exit mobile version