Site icon Vistara News

Disha Patani: ಟೈಗರ್ ಶ್ರಾಫ್ ಸಹೋದರಿ ಜತೆ ವೀಕೆಂಡ್‌ ಎಂಜಾಯ್‌ ಮಾಡಿದ್ರಾ ದಿಶಾ ಪಟಾನಿ?

Disha Patani Chills With Tiger Shroff's Sister

ಬೆಂಗಳೂರು: ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಮಾಜಿ ಗೆಳೆಯ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಅವರೊಂದಿಗೆ ವೀಕೆಂಡ್‌ ಎಂಜಾಯ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಪೂರಕವಾಗಿ ಮುಂಬೈನ ಅದ್ಧೂರಿ ರೆಸ್ಟೊರೆಂಟ್‌ನಿಂದ ದಿಶಾ ಪಟಾನಿ ಮತ್ತು ಕೃಷ್ಣ ಹೊರಬರುತ್ತಿರುವ ವಿಡಿಯೊ ವೈರಲ್‌ ಆಗಿದೆ. ದಿಶಾ ಪಟಾನಿ ಕಪ್ಪು ಬಟ್ಟೆ ಧರಿಸಿರುವುದನ್ನು ಕಾಣಬಹುದು. ನೈಟ್‌ಔಟ್‌ಗಾಗಿ ಕಾರ್ಸೆಟ್ ರವಿಕೆ ಮತ್ತು ಲ್ಯಾಸಿ LBD ಉಡುಪನ್ನು ದಿಶಾ ಧರಿಸಿದ್ದರು. ಮತ್ತೊಂದೆಡೆ, ಕೃಷ್ಣ ಶ್ರಾಫ್ ಹಳದಿ ಕ್ರಾಪ್ ಟಾಪ್ ಧರಿಸಿದ್ದರು.

ದಿಶಾ ಪಟಾನಿ ಮತ್ತು ಕೃಷ್ಣ ಶ್ರಾಫ್ ಅವರ ಸಹೋದರ ಟೈಗರ್ ಶ್ರಾಫ್ ಸುಮಾರು ಒಂದೆರಡು ವರ್ಷಗಳ ಡೇಟಿಂಗ್ ಬಳಿಕ ಬ್ರೇಕಪ್‌ ಮಾಡಿಕೊಂಡರು ಎಂದು ವರದಿಯಾಗಿದೆ. ಈ ಬಗ್ಗೆ ಜೋಡಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ನಟಿ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ವೈರಲ್‌ ಆಗಿವೆ.

ದಿಶಾ ಪಟಾನಿ ಅವರು ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಭ್‌ ಬಚ್ಚನ್ ಜತೆಗಿನ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಜತೆ ʻಯೋಧಾʼ ಸಿನಿಮಾ ಕೂಡ ಹೊಂದಿದ್ದಾರೆ. ಇದಲ್ಲದೆ, ʻಕಂಗುವʼ ತಮಿಳು ಸಿನಿಮಾದಲ್ಲಿಯೂ ಸೂರ್ಯ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಟೈಗರ್ ಶ್ರಾಫ್ ಸಹೋದರಿ ಜತೆ ದಿಶಾ ಪಟಾನಿ

ಇದನ್ನೂ ಓದಿ: Disha Patani: ವಾರಾಣಸಿಯಲ್ಲಿ ಹೊಸ ಅವತಾರದಲ್ಲಿ ಕಂಡ ದಿಶಾ ಪಟಾನಿ!

ಈ ಚಿತ್ರವನ್ನು ಸಿರುತೈ ಶಿವ ನಿರ್ದೇಶಿಸಿದ್ದಾರೆ. ರಜನಿಕಾಂತ್ ನಾಯಕತ್ವದ ಆ್ಯಕ್ಷನ್ ಡ್ರಾಮಾ ʻಅಣ್ಣಾತ್ತೆʼ ಸಿನಿಮಾ ಬಳಿಕ ಈ ಸಿನಿಮಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಿನಿಮಾವನ್ನು 2ಡಿ ಮತ್ತು 3ಡಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಸೂರ್ಯ 42 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಕೆ.ಇ.ಜ್ಞಾನವೇಲ್ ರಾಜಾ ಅವರ ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ.

Exit mobile version