ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಹಾಟ್ ನಟಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ನಟಿ ಶುಕ್ರವಾರ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ನಟಿ ಕಾಣಿಸಿಕೊಂಡ ಬಗೆ ನೋಡಿ ಆಕೆಯ ಅಭಿಮಾನಿಗಳು ಅಬ್ಬಬ್ಬಾ ಎಂದು ಉದ್ಗರಿಸಿದ್ದಾರೆ..
ದಿಶಾ ಅವರು ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಫೋಟೊಗ್ರಾಫರ್‌ಗಳಿಗೆ ಫೋಸ್ ನೀಡಿದ್ದಾರೆ. ನಟಿ ಕಡು ಗುಲಾಬಿ ಬಣ್ಣದ ಡ್ರೆಸ್ ಅನ್ನು ತೊಟ್ಟಿದ್ದರು. ಒಂದು ರೀತಿಯಲ್ಲಿ ನೋಡಿದರೆ ಸೀರೆಯಂತೆ ಕಾಣುವ ಡ್ರೆಸ್ ಅದಾಗಿತ್ತು. ಥೈ ಹೈ ಸ್ಲಿಟ್ ಇದ್ದಂತಹ ಡ್ರೆಸ್‌ನಲ್ಲಿ ಉದ್ದದ ಸೆರಗಿನಂತೆ ಕಾಣುವಂತೆ ಬಟ್ಟೆಯನ್ನು ಬಳಸಲಾಗಿತ್ತು. ಕರ್ಲ್ ಆಗಿದ್ದ ಕೂದಲನ್ನು ಫ್ರೀ ಆಗಿ ಹಾರಾಡಲು ಬಿಟ್ಟಿದ್ದ ನಟಿ ಬಟ್ಟೆ ಹೈಲೈಟ್ ಆಗಲೆಂದು ಯಾವುದೇ ಒಡವೆಯನ್ನು ತೊಟ್ಟಿರಲಿಲ್ಲ. ಮಿನಿಮಮ್ ಮೇಕಪ್‌ನೊಂದಿಗೆ ನಟಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್
ನಟಿಯ ಹಾಟ್ ಲುಕ್‌ನ ವಿಡಿಯೊ ಮತ್ತು ಫೋಟೊಗಳನ್ನು ಬಾಲಿವುಡ್ ಮಾಧ್ಯಮದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ನೋಡಿರುವ ಅಭಿಮಾನಿಗಳು, “ಅಬ್ಬಬ್ಬಾ ಎಷ್ಟೊಂದು ಹಾಟ್ ನಮ್ಮ ದಿಶಾ” ಎಂದು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಬೆಂಕಿಯ ಇಮೋಜಿಗಳನ್ನು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಸದ್ಯ ದಿಶಾ ಪಟಾನಿಯವರು ಕರಣ್ ಜೋಹರ್ ನಿರ್ದೇಶನದಲ್ಲಿ ಬರಲಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ʼಯೋಧʼದಲ್ಲಿ ನಟಿಸಲಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ನಟಿ ದಿಶಾ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಈ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ಅದಲ್ಲದೆ ದಿಶಾ ಅವರು ನಾಗ್ ಅಶ್ವಿನ್ ಅವರ ಬಹು ನಿರೀಕ್ಷಿತ ʼಪ್ರಾಜೆಕ್ಟ್ ಕೆʼ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಜತೆ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಸೇರಿ ಅನೇಕ ನಟರು ಬಣ್ಣ ಹಚ್ಚುತ್ತಿದ್ದಾರೆ.