ಬೆಂಗಳೂರು: ಹಿರಿಯ ನಟಿ ಸುಷ್ಮಾ ಸೇಠ್ (Sushma Seth) ಅವರ ಮೊಮ್ಮಗಳು, ನಟಿ ದಿವ್ಯಾ ಸೇಠ್ ಶಾ (Divya Seth) ಅವರ ಪುತ್ರಿ ಮಿಹಿಕಾ ಶಾ (Mihika Shah) ಸೋಮವಾರ ನಿಧನರಾದರು. ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಕೆಲವು ವರದಿಗಳ ಪ್ರಕಾರ ಅನಾರೋಗ್ಯದಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ದುಃಖದ ಸುದ್ದಿಯನ್ನು ದಿವ್ಯಾ ಅವರು ಮಂಗಳವಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ದಿವ್ಯಾ ಬರೆದುಕೊಂಡಿದ್ದಾರೆ, “ಆಗಸ್ಟ್ 8 ರಂದು ಮಿಹಿಕಾ ಸೇಠ್ ಗೌರವ ನಮನ ಪ್ರಾರ್ಥನೆ ನಡೆಯಲಿದೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ. .” ನೋಟಿನಲ್ಲಿ ದಿವ್ಯಾ ಮತ್ತು ಆಕೆಯ ಪತಿ ಸಿದ್ಧಾರ್ಥ್ ಶಾ ಸಹಿ ಕೂಡ ಇದೆ. ಮಗಳ ಸಾವಿಗೆ ಕಾರಣವನ್ನು ಅವರು ಟಿಪ್ಪಣಿಯಲ್ಲಿ ಬಹಿರಂಗಪಡಿಸಿಲ್ಲ.
ವರದಿಯು ಪ್ರಕಾರ ಮಿಹಿಕಾಗೆ ಮೊದಲು ಜ್ವರ ಮತ್ತು ನಂತರ ಮೂರ್ಛೆ ರೋಗ ಇತ್ತು ಎಂದು ವರದಿಯಾಗಿದೆ. ಇದೀಗ ಮಗಳ ಸಾವಿನಿಂದ ಕುಟುಂಬ ಇನ್ನೂ ಆಘಾತದಲ್ಲಿದೆ. ಕಳೆದ ವಾರವಷ್ಟೇ, ಕುಟುಂಬದ ಮೂರು ತಲೆಮಾರಿನ ಫೋಟೊವನ್ನು ದಿವ್ಯಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಚಿತ್ರದಲ್ಲಿ, ತನ್ನ ಮಗಳೊಂದಿಗೆ ಹಸಿರು ಉಡುಪಿನಲ್ಲಿ ಮತ್ತು ಅವರ ತಾಯಿ ಕೆಂಪು ಉಡುಪಿನಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಮಿಹಿಕಾ ಹಿರಿಯ ನಟಿ ಸುಷ್ಮಾ ಸೇಠ್ ಅವರ ಮೊಮ್ಮಗಳು, ʻಕಭಿ ಖುಷಿ ಕಭಿ ಗಮ್ …, ಚಲ್ ಮೇರೆ ಭಾಯ್, ಕಲ್ ಹೋ ನ ಹೋ, ನಾಗಿನಾ ಮತ್ತು ಸ್ಟೂಡೆಂಟ್ ಆಫ್ ದಿ ಸ್ಟೂಡೆಂಟ್ ಮುಂತಾದ ಚಿತ್ರಗಳಲ್ಲಿ ಜನಪ್ರಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ.
ದಿವ್ಯಾ ಸೇಠ್ ಅವರು ʻಜಬ್ ವಿ ಮೆಟ್ʼ, ʻಲ್ ಧಡಕ್ನೆ ದೋʼ, ʻಆರ್ಟಿಕಲ್ 370ʼ ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬನೇಗಿ ಅಪ್ನಿ ಬಾತ್ ಮತ್ತು ದೇಖ್ ಭಾಯಿ ದೇಖ್‌ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 1978ರಲ್ಲಿ ಬಾಲಿವುಡ್‌ನ ಜೂನೂನ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಸುಷ್ಮಾ ಸೇಟ್, ಸಿಲ್ಸಿಲಾ, ಪ್ರೇಮ್ ರೋಗ್, ರಾಮ್ ತೇರಿ ಗಂಗಾ ಮೈಲಿ, ದೀವಾನಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.