Site icon Vistara News

ʼಬಿಗ್‌ ಬಾಸ್‌ʼ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಸಿನಿಮಾ ಲೋಕಕ್ಕೆ  

ದಿವ್ಯಾ ಉರುಡುಗ

ಬೆಂಗಳೂರು : ʼಬಿಗ್‌ ಬಾಸ್‌ ಸೀಸನ್‌ 8ʼರಲ್ಲಿ ಅರವಿಂದ್‌ ಕೆ.ಪಿ ಹಾಗೂ ದಿವ್ಯಾ ಉರುಡುಗ ಸ್ಫರ್ಧಿಸಿದ್ದರು. ಅಷ್ಟೇ ಅಲ್ಲದೇ ಲವ್‌ ಬರ್ಡ್ಸ್‌ ಆಗಿ ಮಿಂಚಿದ್ದರು. ಗೆಳತನ ಮಧ್ಯೆ ಪ್ರೀತಿಗೆ ತಿರುಗಿದ ಜೋಡಿ ಮನೆಯಿಂದ ಹೊರ ಬಂದ ನಂತರ ತುಂಬಾ ಅನ್ಯೋನ್ಯವಾಗಿದ್ದಾರೆ.

ಸುದೀಪ್‌ ಅವರ ʼರಕ್ಕಮ್ಮಾ ʼ ಸಾಂಗ್‌ಗೆ ಜೋಡಿ ಭಲೇ ಸ್ಟೆಪ್‌ ಹಾಕಿದ್ದರು. ಕಾಮೆಂಟ್‌ನಲ್ಲಿ ಜನರು ಫುಲ್‌ ಖುಷಿ ಆಗಿ ರೆಸ್ಪಾನ್ಸ್‌ ಕೂಡ ಮಾಡಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರುವ ಈ ಜೋಡಿ, ಇದೀಗ ದಿವ್ಯಾ ಉರುಡುಗ ಫ್ಯಾನ್ಸ್‌ಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದೆ. ಇದೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿರುವ ದಿವ್ಯಾ ಉರುಡುಗ ಯಾರ ಜೊತೆ ಸಿನಿಮಾ ಮಾಡಲಿದ್ದೇನೆ ಎನ್ನುವುದನ್ನು ಹಂಚಿಕೊಂಡಿದ್ದಾರೆ.

ಸುದೀರ್ಘ ವಿರಾಮದ ನಂತರ ಮಾಜಿ ʼಬಿಗ್‌ ಬಾಸ್‌ʼ ಸ್ಫರ್ಧಿ ದಿವ್ಯಾ ಉರುಡುಗ ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರ ಚಿತ್ರಕ್ಕೆ ನಟಿಸಲಿದ್ದಾರೆ. ಈ ಹಿಂದೆ ದಿವ್ಯಾ ಉರುಡುಗ ಅವರ ‘ಹುಲಿರಾಯ’ ಚಿತ್ರಕ್ಕೂ ಕೂಡ ಇವರೇ ನಿರ್ದೇಶಕರಾಗಿದ್ದು, ದಿವ್ಯಾ ಅವರ ಈ ಸಿನಿಮಾಕ್ಕೂ ಇವರೇ ನಿರ್ದೇಶಕರು ಎಂಬುದು ವಿಶೇಷ.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಈಗಾಗಲೇ ದಿವ್ಯಾ ಚಿತ್ರಕ್ಕೆ ಸಹಿ ಹಾಕಿದ್ದು, ಜೂನ್‌ ಮೊದಲ ವಾರದಿಂದ ಶೂಟಿಂಗ್‌ ಪ್ರಾರಂಭವಾಗಲಿದೆ. ʼಅರವಿಂದ್‌ ಕೌಶಿಕ್‌ ಒಬ್ಬ ಪ್ರತಿಭಾನ್ವಿತ ನಿರ್ದೇಶಕ ಮತ್ತು ಔಟ್‌ ಆಪ್‌ ದಿ ಬಾಕ್ಸ್‌ ಥಿಂಕ್‌ ಮಾಡುತ್ತಾರೆ. ಸ್ಕ್ರಿಪ್ಟ್‌ ಕೂಡ ತುಂಬಾ ಯುನಿಕ್‌ ಆಗಿದ್ದು, ರೋಮಾಂಚನಕಾರಿಯಾದ ಕಥಾ ಹಂದರವನ್ನು ಹೊಂದಿದೆʼ ಎನ್ನುತ್ತಾರೆ ದಿವ್ಯಾ.

ತಮ್ಮ ರೋಲ್‌ ಬಗ್ಗೆ ವಿವರಿಸಿ, ʼಇದರಲ್ಲಿ ಪಕ್ಕಾ ಪ್ರ್ಯಾಕ್ಟಿಕಲ್‌ ಹುಡುಗಿ ನಾನು, ವಾಸ್ತವಕ್ಕೆ ಹೆಚ್ಚು ಆದ್ಯತೆ ಕೊಡುವ ಮತ್ತು ಯಾವುದೇ ಕನಸುಗಳನ್ನು ಹೊಂದಿರುವುದಿಲ್ಲ. ಪ್ರೇಮ ಕಥೆಯನ್ನು ಹೊಂದಿದ್ದು, ಹಲವಾರು ಆಸಕ್ತಿದಾಯಕ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆʼ ಎಂದರು.

ಇನ್ನೂ ಚಿತ್ರತಂಡ ನಾಯಕ ನಟನನ್ನು ಶೀಘ್ರದಲ್ಲೇ ಬಹಿರಂಗ ಪಡಿಸಲಿದ್ದು, ದಿವ್ಯಾ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 3 BHK, ರಾಂಚಿ, ಜೂರು, ಗಿರ್ಕಿ ಮತ್ತು ವೆಬ್‌ ಸಿರೀಸ್‌ ಕೂಡ ಮಾಡುವ ಹಂಬಲವನ್ನೂ ಹೊಂದಿದ್ದಾರೆ. ಯೋಗರಾಜ್‌ ಭಟ್‌ ಅವರ ಬ್ಯಾನರ್‌ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದ ದಿವ್ಯಾ ಸದ್ಯ ʼಪದವಿ ಪೂರ್ವʼ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ.

ಈಗಾಗಲೇ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೂಟಿಂಗ್‌ ನಡೆದಿದ್ದು, ಯೋಗರಾಜ್‌ ಭಟ್‌ ಸಾಹಿತ್ಯಕ್ಕೆ ಅರ್ಜುನ್‌ ಜನ್ಯಾ ಹಾಡುಗಳಿಗೆ ಸಂಯೋಜನೆ ಮಾಡಿದ್ದಾರೆ.

ಕೋವಿಡ್‌ ಇದ್ದ ಸಂದರ್ಭದಲ್ಲಿ ಯಾವುದೇ ಪ್ರಾಜೆಕ್ಟ್‌ಗಳನ್ನು ನಾನು ಒಪ್ಪಿರಲಿಲ್ಲ. ಹಲವಾರು ಇಂಟ್ರೆಸ್ಟಿಂಗ್‌ ಪ್ರಾಜೆಕ್ಟ್‌ಗಳು ನನ್ನ ಬಳಿ ಇದೆ ಎನ್ನುತ್ತಾರೆ ದಿವ್ಯಾ ಉರುಡುಗ.

ಸದಾ ಅಭಿಮಾನಿಗಳು ಅರವಿಂದ್‌ ಕೆ.ಪಿ ಅವರೊಂದಿಗೆ ಮದುವೆ ಯಾವಾಗ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಕಮೆಂಟ್‌ ಹಾಕುತ್ತಲೇ ಇರುತ್ತಾರೆ, ಇದಕ್ಕೆ ಜೋಡಿ ಇನ್ನೂ ಉತ್ತರ ನೀಡಿಲ್ಲ. ಇನ್ನೂ ದಿವ್ಯಾ ಉರುಡುಗ ಚಿತ್ರ ಆದಷ್ಟು ಬೇಗ ಬರಲಿ ಎಂಬುವುದೇ ಅಭಿಮಾನಿಗಳ ಆಸೆ.

ಇದನ್ನೂ ಓದಿ | ʼ19.20.21ʼ | ಮಂಸೋರೆ ಹೊಸ ಚಿತ್ರ ಶೂಟಿಂಗ್‌ ಕಂಪ್ಲೀಟ್‌

Exit mobile version