ಬೆಂಗಳೂರು: ಸಂಸದೆ, ನಟಿ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಯುಎಸ್ಎ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಹೈದರಾಬಾದ್ನ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಸಮಾಜ ಸೇವೆ, ರಾಜಕೀಯ ಮತ್ತು ಚಲನಚಿತ್ರಗಳಲ್ಲಿನ ಸೇವೆಗಾಗಿ ಈ ಗೌರವ ನಟಿಗೆ ಸಿಕ್ಕಿದೆ. 2017 ರಲ್ಲಿ ನಟ ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು.
ಇದೀಗ ಸಮಲತಾ ಅವರು ಈ ಬಗ್ಗೆ ಪೋಸ್ಟ್ ಮಾಡಿ ʻʻಸಮಾಜ ಸೇವೆ ಮತ್ತು ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಸೇವೆಗಾಗಿ ಅಮೆರಿಕಾದ, ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಹೈದರಾಬಾದ್‌ನಿಂದ ಗೌರವ ಡಾಕ್ಟರೇಟ್ ಪಡೆದಿರುವುದಕ್ಕೆ ಅತ್ಯಂತ ವಿನಮ್ರ ಮತ್ತು ಗೌರವ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ.
ಇದನ್ನೂ ಓದಿ: Sumalatha Ambareesh: ಅಂಬರೀಷ್ ಥರವೇ ಅಭಿಷೇಕ್‌ಗೂ ಆಶೀರ್ವದಿಸಿ: ಸುಮಲತಾ
ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು ಮತ್ತು ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ. ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.