Site icon Vistara News

Dolly Dhananjay: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಟೈಮ್ಸ್‌ ಸ್ಕ್ವೇರ್‌ನಲ್ಲಿ ಪೋಸ್ಟರ್‌ ರಿಲೀಸ್

dolly poster in times squre

ಬೆಂಗಳೂರು: ಸ್ಯಾಂಡಲ್‌ವುಡ್ ನಟರಾಕ್ಷಸ ಡಾಲಿ ಧನಂಜಯ್ (Dolly Dhananjay) ಅವರಿಗೆ ಇಂದು ಹುಟ್ಟು ಹಬ್ಬದ (Dolly Dhananjay birthday) ಸಂಭ್ರಮ. ಒಂದು ದಿನ ಮುಂಚಿತವಾಗಿಯೇ ನ್ಯೂಯಾರ್ಕಿನ ಟೈಮ್ಸ್‌ ಸ್ಕ್ವೇರ್‌ನಲ್ಲಿ (times square) ಪೋಸ್ಟರ್‌ ರಿಲೀಸ್‌ (poster release) ಮಾಡುವ ಮೂಲಕ ಶುಭ ಕೋರಲಾಗಿದೆ.

37ನೇ ವಸಂತಕ್ಕೆ ಕಾಲಿಟ್ಟ ಡಾಲಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿಯುತ್ತಿದೆ. ನಿನ್ನೆ ರಾತ್ರಿ ಅಮೆರಿಕದ ನ್ಯೂಯಾರ್ಕಿನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಡಾಲಿ ಅವರ 15 ಸೆಕೆಂಡ್‌ನ ಪೋಸ್ಟರ್‌ ರಿಲೀಸ್‌ ಅನ್ನು ಕನ್ನಡದ ಪಿಂಕ್‌ ಟಿಕೆಟ್ಸ್‌ ಪಿಆರ್‌ಒ ಟೀಮ್‌ ಮಾಡಿದ್ದು, ಡಾಲಿಗೆ ಶುಭ ಹಾರೈಸಿದೆ. ಸೂಪರ್ ಸ್ಟಾರ್ ರಜಿನಿ ನಂತರ ಭಾರತದ ಎರಡನೆ ನಟನಿಗೆ ಟೈಂ ಸ್ವ್ಕೇರ್‌ನಲ್ಲಿ ಹೀಗೊಂದು ಗೌರವ ದೊರೆತಿದೆ.

ಮೊದಲ ಕನ್ನಡ ನಟನ ಹುಟ್ಟುಹಬ್ಬಕ್ಕೆ ಸಂಬಂಧಿಸಿ ಟೈಂ ಸ್ವ್ಕೇರ್‌ನಲ್ಲಿ ವಿಡಿಯೋ ಪ್ರಸಾರ ಮಾಡಲಾಗಿದ್ದು, ಕರ್ನಾಟಕದ ಪಿಂಕ್ ಟಿಕೇಟ್ಸ್ ಪಿಆರ್‍ಓ ತಂಡದಿಂದ ಶುಭಾಶಯ ಕೋರಿಕೆ ಸಂದಿದೆ. ಜೈಲರ್ ಬಿಡುಗಡೆಗೂ ಮುನ್ನ ಇಲ್ಲಿ ರಜಿನಿ ವಿಡಿಯೋ ಪ್ರಸಾರ ಮಾಡಲಾಗಿತ್ತು.

ಇಂದು ಹುಟ್ಟುಹಬ್ಬ ಕಾರ್ಯಕ್ರಮ

ಇಂದು ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ರೋಡಲ್ಲಿ ಡಾಲಿ ಹುಟ್ಟು ಹಬ್ಬದ ಕಾರ್ಯಕ್ರಮ ನಡೆಯಲಿದೆ. ನಿನ್ನೆ ರಾತ್ರಿ ಅಭಿಮಾನಿಗಳ ನಡುವೆ ಡಾಲಿ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದ ಡಾಲಿ ಧನಂಜಯ ಅವರಿಗೆ ಡಾಲಿ ಉತ್ಸವ ಎಂದು ನೂರಾರು ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ ನಡೆಯಿತು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧನಂಜಯ್‌ ಅಭಿನಯದ ಚಿತ್ರಗಳ ಒಂದು ಟೀಸರ್ ಹಾಗು ಮತ್ತೊಂದು ಸಿನಿಮಾದ ಪೋಸ್ಟರ್ ಲಾಂಚ್ ಆಗುತ್ತಿದೆ. ʼಉತ್ತರಾಖಂಡʼ ಸಿನಿಮಾದಲ್ಲಿ ಗಬ್ರು ಸತ್ಯನಾಗಿ ಮಿಂಚಿರುವ ಡಾಲಿ, ʼಅಣ್ಣ ಫ್ರಮ್ ಮೆಕ್ಸಿಕೋʼ ಎಂಬ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ʼʼನಾನು ಸೆಲೆಬ್ರೇಶನ್ ಮಾಡ್ಕೊಂಡು ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ 3- 4 ವರ್ಷಗಳಿಂದ ಮಾಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು ತುಂಬಾ ಖುಷಿಯಾಗಿದೆ. ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2 ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೇವೆ. ತುಂಬಾ ಜನ ಶುಭ ಹಾರೈಸಿದ್ದಾರೆ. ಜನ ನೀನು ಚೆನ್ನಾಗಿ ಬೆಳೀಬೇಕು ಅಂತ ಹಾರೈಸಿದ್ದಾರೆ. ಅದಕ್ಕಿಂತ ದೊಡ್ಡ ಸಂಪಾದನೆ ಯಾವುದೂ ಇಲ್ಲ. ಅದನ್ನು ಕಾಪಾಡಿಕೊಳ್ಳೋಕೆ ಕೆಲಸ ಮಾಡುತ್ತೇನೆ. ಜನರ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಆಗಲ್ಲʼʼ ಎಂದು ಡಾಲಿ ಹೇಳಿದ್ದಾರೆ.

ʼʼಅಣ್ಣಾ ಫ್ರಮ್ ಮೆಕ್ಸಿಕೋ ಸಿನೆಮಾ ಬಹಳ ಡಿಫರೆಂಟ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಾತ್ರವನ್ನ ಕೊಡ್ತಾ ಇದ್ದೇನೆ. ಅಭಿಮಾನಿಗಳಿಗೆ ಪಾತ್ರಗಳಿಂದ ಒಂದಿಷ್ಟು ವಿಷಯಗಳನ್ನು ಹೇಳ್ತಾ ಇದ್ದೇನೆ. ನನ್ನ ಹುಟ್ಟುಹಬ್ಬದ ದಿನ ಚಂದ್ರಯಾನ ಲ್ಯಾಂಡ್ ಆಗ್ತಾ ಇರೋದು ತುಂಬಾ ಖುಷಿ ತಂದಿದೆʼʼ ಎಂದು ಧನಂಜಯ್‌ ಖುಷಿಪಟ್ಟರು.

Exit mobile version