Site icon Vistara News

Dolly Dhananjay: ಡಾಲಿ ಧನಂಜಯ್‌ ಅಭಿನಯದ ʻಉತ್ತರಕಾಂಡʼ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌!

Dolly Dhananjay Gabru Sathya

ಬೆಂಗಳೂರು: ಕೆ.ಆರ್.ಜಿ ಸ್ಟುಡಿಯೋಸ್‌ ಸಂಸ್ಥೆಯ ಕಾರ್ತಿಕ್‌ ಮತ್ತು ಯೋಗಿ ಜಿ. ರಾಜ್ ನಿರ್ಮಾಣದ ʼಉತ್ತರಕಾಂಡʼ (uttra kaanda Cinema) ಚಿತ್ರದಲ್ಲಿ ಡಾಲಿ ಧನಂಜಯ್‌ (Dolly Dhananjay) ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿ ಬರಲಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ಖೇಲ್‌ ಶುರು, ನಾಟಕ್‌ ಚಾಲು ಎಂಬ ಟ್ಯಾಗ್‌ಲೈನ್‌ ಅನ್ನು ಚಿತ್ರತಂಡ ನೀಡಿದ್ದು ಸಖತ್‌ ಸೌಂಡ್‌ ಮಾಡಿತ್ತು. ಆಗಾಗ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತ ಸಿನಿಮಾದ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ. ಇದೀಗ ಉತ್ತರಕಾಂಡ (Uttara kaanda) ಹೊಸ ಅಪ್‌ಡೇಟ್‌ ಹಂಚಿಕೊಂಡಿದೆ. ಆಗಸ್ಟ್ 22ರಂದು ಗಬ್ರು ಸತ್ಯ ಪಾತ್ರದ (gabru Sathya) ಲುಕ್‌ ಹೊರ ಬರಲಿದೆ.

ಆ ಲುಕ್ ಹೇಗೆ ಇರಲಿದೆ ಎನ್ನುವ ಕುತೂಹಲ ಡಾಲಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ʼರತ್ನನ್ ಪ್ರಪಂಚʼ ಯಶಸ್ಸಿನ ನಂತರ ಕೆ.ಆರ್.ಜಿ ಸ್ಟುಡಿಯೋಸ್, ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಅವರ ತಂಡದ ಜತೆ ಮತ್ತೊಮ್ಮೆ ಕೈ ಜೋಡಿಸುತ್ತಿದೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ.

ಡಾಲಿ ಧನಂಜಯ್ ನಟನೆಯ ಉತ್ತರಕಾಂಡ (Uttarkanda) ಸಿನಿಮಾ ಮೂಲಕ ಮೋಹಕ ತಾರೆ ರಮ್ಯಾ ಮತ್ತೆ ನಟಿಯಾಗಿ ಸ್ಯಾಂಡಲ್‌ವುಡ್ ಪ್ರವೇಶ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರು ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ಅವರು ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ʼಟಗರುʼ ಚಿತ್ರದ ನಂತರ ತೆಲುಗಿನ ʼಪುಷ್ಟʼ ಸಿನಿಮಾದಲ್ಲಿ ಡಾಲಿ ಕಾಣಿಸಿಕೊಂಡರು. ʼರತ್ನನ್‌ ಪ್ರಪಂಚʼ ಮೂಲಕ ಮತ್ತೆ ಹೆಸರು ಪಡೆದರು. ʼಉತ್ತರಕಾಂಡʼ ಚಿತ್ರವನ್ನು ವಿಜಯ್‌ ಕಿರಂಗದೂರು ಅವರು ಪ್ರಸ್ತುತಪಡಿಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ಚಿತ್ರೀಕರಣದ ಬಿಡುವಿನಲ್ಲಿ ಹುಟ್ಟೂರಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಡಾಲಿ ಧನಂಜಯ್‌!

`ಅಭಿಮಾನದ ತೇರು ಎಳೆಯಲುʼ ಸಜ್ಜಾಗುತ್ತಿದೆ ‘ಡಾಲಿ ಉತ್ಸವ’

ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿ ಗಳಿಸಿರುವ ನಟ ಧನಂಜಯ್ (Dolly Dhananjay) ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಆಗಸ್ಟ್‌ 23 ಡಾಲಿ ಧನಂಜಯ್‌ ಅವರಿಗೆ ಜನುಮದಿನದ ಸಂಭ್ರಮ. ‘ಕಾಮನ್ ಮ್ಯಾನ್ ಹೀರೊʼʼ ಎಂದೇ ಖ್ಯಾತಿ ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ (Dali Utsav) ಅಭಿಮಾನಿಗಳು ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಈಗಿನಿಂದಲೇ ಅಭಿಮಾನಿಗಳ ಸಂಭ್ರಮ ಪ್ರಾರಂಭವಾಗಿದೆ. ಧನಂಜಯ್ ಹುಟ್ಟುಹಬ್ಬವನ್ನು ‘ಡಾಲಿ ಉತ್ಸವ’ವೆಂದು ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಇದನ್ನೂ ಓದಿ: Dolly Dhananjay: 10 ವರ್ಷದ ಪಯಣದಲ್ಲಿ ಹೆಗಲಾಗಿ ನಿಂತ ಜೀವಗಳಿಗೆ ನಮನ ಸಲ್ಲಿಸಿದ ನಟ ರಾಕ್ಷಸ!

ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ʼಡಾಲಿ ಉತ್ಸವʼ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇವತ್ತಿಗೆ ಸರಿಯಾಗಿ 25 ದಿನಗಳು ಬಾಕಿ ಉಳಿದಿದ್ದು, ಇಂದಿನಿಂದಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬಾನೇ ವಿಶೇಷ. 4 ವರ್ಷಗಳ ಬಳಿಕ ಅವರು ಅದ್ಧೂರಿಯಾಗಿ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.

Exit mobile version