Site icon Vistara News

Dolly Dhananjay | ಇನ್ನು ಎರಡೇ ದಿನದಲ್ಲಿ ಡಾಲಿ ಧನಂಜಯ ಅಭಿನಯದ ʻಹೆಡ್‌ ಬುಷ್‌ʼ ಒಟಿಟಿಗೆ!

Dolly Dhananjay

ಬೆಂಗಳೂರು : ಸೂಪರ್ ಹಿಟ್ ಸಿನಿಮಾಗಳಾದ ‘ವಿಕ್ರಾಂತ್ ರೋಣ’, ‘ಗಾಳಿಪಟ 2, ‘ಗುರು ಶಿಷ್ಯರು’ ನಂತರ ಜೀ5 ನಲ್ಲಿ ಮತ್ತೊಂದು ಸಿನಿಮಾ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ ‘ಹೆಡ್ ಬುಷ್’ (Dolly Dhananjay) ಸಿನಿಮಾ ಜೀ5 ಒಟಿಟಿಗೆ ಜನವರಿ 13 ರಂದು ಬರಲಿದೆ.

ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್’ ಸಿನಿಮಾ ಜನವರಿ 13 ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಅಗ್ನಿ ಶ್ರೀಧರ್ ಬರೆದ ಪುಸ್ತಕ ಆಧರಿಸಿದ ಈ ಚಿತ್ರ ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ತೆರೆ ಮೇಲೆ 70ರ ದಶಕದ ಭೂಗತ ಜಗತ್ತನ್ನು ಕಟ್ಟಿಕೊಟ್ಟ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಎಂ.ಪಿ.ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | Head Bush Movie | ʻನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲʼ: ಕ್ಷಮೆ ಕೇಳಿದ ʻಹೆಡ್‌ ಬುಷ್‌ʼ ತಂಡ!

ಧನಂಜಯ್ ಜತೆ ಪಾಯಲ್ ರಜಪೂತ್ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಲೂಸ್ ಮಾದ ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ಶ್ರುತಿ ಹರಿಹರನ್ ಒಳಗೊಂಡ ಬಹು ತಾರಾಗಣ ಈ ಚಿತ್ರದಲ್ಲಿದೆ. ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ, ಚರಣ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ | Dolly Dhananjay | ʻಹೆಡ್‌ ಬುಷ್‌ʼ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

Exit mobile version