Site icon Vistara News

Dolly Dhananjay | ಮದುವೆ ಬಗ್ಗೆ ಡಾಲಿ ಧನಂಜಯ್‌ ಹೇಳಿದ್ದೇನು?

Dolly Dhananjay

ಬೆಂಗಳೂರು: ನಟ ಡಾಲಿ ಧನಂಜಯ್‌ (Dolly Dhananjay) ಸಿನಿಮಾದಲ್ಲಿ ನಟನೆ ಹಾಗೂ ನಿರ್ಮಾಣ ಮಾಡುವುದರಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಈ ನಡುವೆ ಡಾಲಿ ಮದುವೆ ಯಾವಾಗ ಎಂಬ ಪ್ರಶ್ನೆ ಪ್ರತಿ ವೇದಿಕೆ ಮೇಲೆ ಕೇಳಿ ಬರುತ್ತಿದೆ. ʻಜಮಾಲಿಗುಡ್ಡ ಪ್ರೀ ರಿಲೀಸ್ ಇವೆಂಟ್ʼನಲ್ಲಿ ಆ್ಯಂಕರ್‌ ಅನುಶ್ರೀ ಈ ಪ್ರಶ್ನೆ ಕೇಳಿದಾಗ ಡಾಲಿ ಚಾಣಾಕ್ಷತನದಿಂದ ಉತ್ತರ ನೀಡಿದ್ದಾರೆ. ಇದೀಗ ಅವರ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೇದಿಕೆ ಮೇಲೆ ಅನುಶ್ರೀ ಅವರು ಡಾಲಿಗೆ ʻʻನಿಮ್ಮ ಗೆಳೆಯ ವಸಿಷ್ಠ ಸಿಂಹ ಇತ್ತೀಚೆಗೆ ಎಂಗೇಜ್ ಆದರು. ನಿಮ್ಮ ಮದುವೆ ಯಾವಾಗ’ ಎಂದು ಪ್ರಶ್ನೆ ಮಾಡಿದರು. ಮದುವೆ ಆಗಬೇಕಾ ಎಂದು ಫ್ಯಾನ್ಸ್ ಬಳಿ ಪ್ರಶ್ನೆ ಮಾಡಿದರು. ಬಳಿಕ ʻಫ್ಯಾನ್ಸ್ ಬೇಡ ಎನ್ನುತ್ತಿದ್ದಾರೆʼ ಎಂದು ಧನಂಜಯ್ ಉತ್ತರಿಸಿದರು. ʻʻಅನುಶ್ರೀ ಮದುವೆ ಅನೌನ್ಸ್ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ ʼʼಎಂದು ಧನಂಜಯ್ ಹೇಳಿದರು. ಈ ವೇಳೆ ಅನುಶ್ರೀ ʻʻಅದಕ್ಕೆ ನೀವು ತುಂಬಾ ಸಮಯ ಕಾಯಬೇಕಾಗುತ್ತದೆʼʼ ಎಂದರು!

ಇದನ್ನೂ ಓದಿ | Once Upon A Time In Jamaligudda | ಡಾಲಿ ಧನಂಜಯ್‌ ಅಭಿನಯದ ʻಜಮಾಲಿಗುಡ್ಡʼ ರಿಲೀಸ್‌ ಡೇಟ್‌ ಅನೌನ್ಸ್‌!

ಈ ಹಿಂದೆ ಟಾಲಿವುಡ್‌ ನಟ ಪ್ರಭಾಸ್‌ ಅವರಿಗೆ ಕಾರ್ಯಕ್ರಮವೊಂದರಲ್ಲಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾಗ ʻʻಸಲ್ಮಾನ್‌ ಖಾನ್‌ ಅವರು ಮದುವೆಯಾದ ನಂತರ ಮದುವೆ ಆಗುತ್ತೇನೆʼʼ ಎಂದು ಉತ್ತರ ನೀಡಿದ್ದರು. ಇದೇ ರೀತಿಯಲ್ಲಿ ಡಾಲಿ ಧನಂಜಯ್‌ ಮದುವೆ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Dolly Dhananjay | ಡಾಲಿ ಧನಂಜಯ್‌ ಅಭಿನಯದ ಈ ವರ್ಷದ ಕೊನೆಯ ಸಿನಿಮಾ ʻಜಮಾಲಿಗುಡ್ಡʼ ಟೀಸರ್‌ ಔಟ್‌

Exit mobile version