Site icon Vistara News

Dolly Dhananjay: ಡಾಲಿ ಧನಂಜಯ್-ಸತ್ಯದೇವ್ ಕಾಂಬಿನೇಶನ್‌ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್

Dolly Dhananjay New pan India cinema

ಬೆಂಗಳೂರು : ಡಾಲಿ ಧನಂಜಯ್ (Dolly Dhananjay) ಮತ್ತು ತೆಲುಗು ನಟ ಸತ್ಯದೇವ್ (Satyadev) ಜತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾಗೆ ‘ಝೀಬ್ರಾ’ ಎಂದು ಹೆಸರನ್ನು ಇಡಲಾಗಿದೆ. ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೋಲ್ಕೊತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಝೀಬ್ರಾ’ ಚಿತ್ರತಂಡಕ್ಕೆ ಇದೀಗ ‘ಕೆಜಿಎಫ್ 1 ಮತ್ತು 2’ ಮುಂತಾದ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ ‘ಭೋಲಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು, ಇದೀಗ ‘ಝೀಬ್ರಾ’ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರತಂಡಕ್ಕೆ ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, ‘ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಸನ್ನಿವೇಶಗಳನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dolly Dhananjay | ಇನ್ನು ಎರಡೇ ದಿನದಲ್ಲಿ ಡಾಲಿ ಧನಂಜಯ ಅಭಿನಯದ ʻಹೆಡ್‌ ಬುಷ್‌ʼ ಒಟಿಟಿಗೆ!

ಇದನ್ನೂ ಓದಿ: Dolly Dhananjay | ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ ಅಂದಿದ್ಯಾಕೆ ಡಾಲಿ ಧನಂಜಯ್‌?

ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.

Exit mobile version