Site icon Vistara News

Dolly Dhananjay: ಈ ಸಲ ʻಹೊಯ್ಸಳʼ! ಹೊಸ ಅಪ್ಡೇಟ್‌ ಕೊಟ್ಟ ಡಾಲಿ ಧನಂಜಯ್‌

Dolly Dhananjay hoysala film

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ (Dolly Dhananjay) ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಬೆನ್ನಲ್ಲೇ ಇದೀಗ ಅವರು ಹೊಸ ಅಪ್ಡೇಟ್‌ ನೀಡಿದ್ದಾರೆ. ಹೊಯ್ಸಳ ಚಿತ್ರದಲ್ಲಿ ಡಾಲಿ ಧನಂಜಯ್ ಖಡಕ್ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ. ಗುರುದೇವ ಹೆಸರಿನ ಪೊಲೀಸ್ ಆಫೀಸರ್ ಆಗಿ ಡಾಲಿ ಧನಂಜಯ್ ಅಬ್ಬರಿಸಲಿದ್ದಾರೆ. ಇದೇ ಫೆಬ್ರವರಿ 5ರಂದು ಚಿತ್ರದ ಒಂದು ಸ್ಪೆಷಲ್ ವಿಷಯವನ್ನು ರಿವೀಲ್ ಮಾಡುತ್ತೇವೆ ಎಂದು ಡಾಲಿ ಹೇಳಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ವಿಜಯ್. ಎನ್ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರನ್ನು ವಿಭಿನ್ನವಾಗಿಯೇ ತೋರಿಸಿದ್ದಾರೆ. ಹೊಯ್ಸಳ ಸಿನಿಮಾ ಪೊಲೀಸ್ ಆಫೀಸರ್ ಒಬ್ಬರ ಲೈಫ್​​ಲ್ಲಿ ನಡೆದ ರಿಯಲ್ ಘಟನೆಯನ್ನೇ ಆಧರಿಸಿದೆ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: Dolly Dhananjay | ಡಾಲಿ ಧನಂಜಯ್‌ ನಟನೆಯ ʻಹೆಡ್ ಬುಷ್ʼ ಸಿನಿಮಾ ಒಟಿಟಿ ದಿನಾಂಕ ಪ್ರಕಟ

ಹೊಯ್ಸಳ ಇದೇ ಮಾರ್ಚ್ 30ಕ್ಕೆ ರಿಲೀಸ್ ಆಗುತ್ತಿದೆ. ಈ ವಿಷಯವನ್ನು ಚಿತ್ರ ತಂಡ ಈಗಾಗಲೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಧನಂಜಯ್ ನಟನೆಯ ಈ ಚಿತ್ರಕ್ಕೆ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ಹೊಯ್ಸಳ ಚಿತ್ರದ ಕುರಿತು ಡಾಲಿ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಹೊಯ್ಸಳ ಚಿತ್ರದ ಝಲಕ್ ರಿವೀಲ್ ಆಗಿದೆ. ಫೆ.5ರಂದು ಏನು ಎಂಬುದು ರಿವೀಲ್‌ ಆಗಲಿದೆ. ಡಾಲಿ ಧನಂಜಯ್‌ ಅಭಿನಯದ 25ನೇ ಸಿನಿಮಾ ಇದಾಗಿದೆ. ʼಬಡವ ರಾಸ್ಕಲ್ʼ ಬಳಿಕ ಧನಂಜಯ ಜತೆ ಮತ್ತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ.

Exit mobile version