ಬೆಂಗಳೂರು : ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Dolly Dhananjay) ಅವರು ಈ ಹಿಂದೆ ಅಷ್ಟೇ ಮೋಹಕ ತಾರೆ ರಮ್ಯಾ ಜತೆ ʻಉತ್ತರಕಾಂಡʼ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದರು. ಈ ಸಿಹಿ ಸುದ್ದಿ ಬೆನ್ನಲ್ಲೇ ಇದೀಗ ʻಸಿಂಧೂರ ಲಕ್ಷ್ಮಣʼನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ʻರಾಬರ್ಟ್ʼ ಚಿತ್ರದ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ʻಸಿಂಧೂರ ಲಕ್ಷ್ಮಣʼ ಅವರನ್ನು ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ʻಸಿಂಧೂರ ಲಕ್ಷ್ಮಣʼ ಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರಿಗೆ ಸಿಂಧೂರ ಲಕ್ಷ್ಮಣ ತಕ್ಕ ಪಾಠ ಕಲಿಸಿದ್ದರು. ಈ ಐತಿಹಾಸಿಕ ಕಥೆಯನ್ನು ಮಾಡುವುದಾಗಿ ನಿರ್ಮಾಪಕ ಉಮಾಪತಿ ಅವರು ಪ್ಲ್ಯಾನ್ ಮಾಡಿಕೊಂಡಿದ್ದರು. ಇದೀಗ ಈ ಪಾತ್ರಕ್ಕೆ ಡಾಲಿ ಅವರು ಸೆಲೆಕ್ಟ್ ಆಗಿದ್ದು, ಅವರು ಈ ಪಾತ್ರವನ್ನು ನಿಭಾಯಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Dolly Dhananjay | ರಮ್ಯಾ-ಧನಂಜಯ್ ಕಾಂಬಿನೇಷನ್‌ನಲ್ಲಿ ಉತ್ತರಕಾಂಡ!
ಉತ್ತರ ಕರ್ನಾಟದ ಶೈಲಿಗೆ ಹೆಚ್ಚು ಒತ್ತು ನೀಡುತ್ತಿದ್ದಾರಾ ಡಾಲಿ?
ʻಉತ್ತರಕಾಂಡʼ ಚಿತ್ರದ ಕುರಿತು ಈ ಹಿಂದೆ ಅಷ್ಟೇ ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಉತ್ತರ ಕರ್ನಾಟಕದ ಶೈಲಿಯಲ್ಲಿ ʻಖೇಲ್ ಶುರು, ನಾಟಕ್ ಚಾಲುʼ ಎಂದು ಪೋಸ್ಟರ್‌ಗೆ ಟ್ಯಾಗ್‌ಲೈನ್ ಚಿತ್ರತಂಡ ನೀಡಿತ್ತು. ʼಉತ್ತರಕಾಂಡʼ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದೀಗ ಉತ್ತರ ಕರ್ನಾಟಕದ ಹೋರಾಟಗಾರ ʻವೀರ ಸಿಂಧೂರ ಲಕ್ಷ್ಮಣ’ನಾಗಿ ಮಿಂಚಲಿದ್ದಾರಂತೆ ಡಾಲಿ.
ಯಾರು ಈ ಸಿಂಧೂರ ಲಕ್ಷ್ಮಣ?
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಿಂಧೂರ ಗ್ರಾಮದ ಈ ಲಕ್ಷ್ಮಣ ಬಾಲ್ಯದಿಂದಲೂ ಪರಾಕ್ರಮಿ. ಹಿಮ್ಮುಖವಾಗಿಯೂ ವೇಗವಾಗಿ ಓಡುವಂತಹ ಚಾತುರ್ಯ ಈ ಲಕ್ಷ್ಮಣನಲ್ಲಿತ್ತು ಎನ್ನಲಾಗಿದೆ. 1920ರ ಅವಧಿಯಲ್ಲಿ ಈತನನ್ನು ಭಾರತದ ರಾಬಿನ್ ಹುಡ್ ಎಂದೇ ಕರೆಯುತ್ತಿದ್ದರು. ಆ ಸಮಯದಲ್ಲಿ ಅಸಹಕಾರ ಚಳವಳಿಯಲ್ಲಿ ತನ್ನದೇ ಆದ ಗೆರಿಲ್ಲಾ ಪಡೆಯನ್ನು ಕಟ್ಟಿಕೊಂಡು ಆಂಗ್ಲರು ಕೂಡಿಟ್ಟುಕೊಂಡ ಹಣ, ಸಂಪತ್ತನ್ನು ದೋಚಿ ಬಡಬಗ್ಗರಿಗೆ ಹಂಚುತ್ತಿದ್ದ ಎನ್ನುವ ಐತಿಹಾಸಿಕ ಕಥೆ ಇದೆ.
ಇದನ್ನೂ ಓದಿ | Dolly Dhananjay | ರಮ್ಯಾ-ಧನಂಜಯ್ ಕಾಂಬಿನೇಷನ್‌ನ ಉತ್ತರಕಾಂಡಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ?