Site icon Vistara News

Hoysala Movie: ಡಾಲಿ ಧನಂಜಯ್‌ ಅಭಿನಯದ `ಹೊಯ್ಸಳ’ ಸಿನಿಮಾ ರಿಲೀಸ್‌: ರಶ್ಮಿಕಾ, ರಮ್ಯಾ ಶುಭ ಹಾರೈಕೆ

Dolly Dhananjay starrer Hoysala movie release Rashmika Mandanna Ramya Wishes

ಬೆಂಗಳೂರು: ಡಾಲಿ ಧನಂಜಯ್‌ ಅಭಿನಯದ ಬಹು ನಿರೀಕ್ಷಿತ ಹೊಯ್ಸಳ ಸಿನಿಮಾ (Hoysala Movie) ಮಾರ್ಚ್‌ 30ರಂದು ಬಿಡುಗಡೆಗೊಂಡಿದೆ. ಬಡವ ರಾಸ್ಕಲ್‌ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ಅನೇಕ ಗಣ್ಯರು ಡಾಲಿ ಧನಂಜಯ್‌ ಅವರಿಗೆ ವಿಶ್‌ ಮಾಡಿದ್ದಾರೆ. ವಿಜಯ್‌ ಎನ್‌. ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿ ಗುರುದೇವ್‌ ಹೊಯ್ಸಳನಾಗಿ ಮಿಂಚಿದ್ದಾರೆ ಧನಂಜಯ್‌.

ಧನಂಜಯ್‌ ಜತೆಗೆ ಉತ್ತರಕಾಂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಸಿನಿರಂಗಕ್ಕೆ ಮರಳಿರುವ ಮೋಹಕ ತಾರೆ ರಮ್ಯಾ, ಹೊಯ್ಸಳ ಸಿನಿಮಾಗೆ ಶುಭ ಹಾರೈಸಿದ್ದಾರೆ. ʻʻರತ್ನನ್‌ ಪ್ರಪಂಚ ಸಿನಿಮಾ ನೋಡಿ ಮನಸೋತಿದ್ದೆ. ಈಗ ತಂಡದೊಂದಿಗೆ ಸಂತೋಷ್ ಥಿಯೇಟರ್‌ನಲ್ಲಿ ಡಾಲಿ ಅವರನ್ನು ಗುರುದೇವ ಹೊಯ್ಸಳರನ್ನಾಗಿ ವೀಕ್ಷಿಸಲು ಬರುತ್ತಿದ್ದೇನೆʼʼಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧನಂಜಯ್, ನೀವ್‌ ಬರ್ತೀರಾ ಅಂದಮೇಲೆ ಸೆಲೆಬ್ರೇಷನ್‌ ಇನ್ನೂ ಜೋರು ಬಿಡಿʼʼ ಎಂದಿದ್ದಾರೆ.

ಇದನ್ನೂ ಓದಿ: Hoysala Movie: ಡಾಲಿ ಧನಂಜಯ್‌ ಅಭಿನಯದ ಹೊಯ್ಸಳ ಸಿನಿಮಾದ ಮೆಲೋಡಿ ಲವ್ ಸಾಂಗ್ ಔಟ್‌

ರಮ್ಯಾ ಟ್ವೀಟ್‌

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕೂಡ ನಾನಿ ಅಭಿನಯದ ದಸರಾ ಸಿನಿಮಾ ಹಾಗೇ ಡಾಲಿ ಅವರ ಹೊಯ್ಸಳ ಸಿನಿಮಾಗೆ ಹಾರೈಸಿದ್ದಾರೆ. ʻʻಹೊಯ್ಸಳ ಚಿತ್ರಕ್ಕೆ ಒಳ್ಳೆಯದಾಗಲಿʼʼ ಎಂದು ರಶ್ಮಿಕಾ ಟ್ವಿಟ್‌ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಟ್ವೀಟ್‌

ಸಿನಿಮಾ ಬಿಡುಗಡೆಗೆ ಒಂದು ದಿನದ ಮೊದಲು ಮಾ. 29ರಂದು ಕಿಚ್ಚ ಸುದೀಪ್‌ ಅವರಿಗೆ ಸಿನಿಮಾ ತೋರಿಸಿದೆ ಚಿತ್ರತಂಡ. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಹಿಟ್‌ ಎಂಬ ಪಟ್ಟಿಯನ್ನೂ ನೀಡಿದ್ದಾರೆ. ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ ಕಿಚ್ಚ ಸುದೀಪ್‌.

ಹೊಂಬಾಳೆ ಸಂಸ್ಥೆಯ ವಿಜಯ್‌ ಕಿರಗಂದೂರ್‌ ಅರ್ಪಿಸುವ, ಕೆ.ಆರ್‌.ಜಿ. ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್‌ ಹಾಗೂ ಯೋಗಿ ಜಿ. ರಾಜ್‌ ಅವರು ಚಿತ್ರ ನಿರ್ಮಿಸಿದ್ದಾರೆ. ಕಾರ್ತಿಕ್‌ ಎಸ್‌. ಚಿತ್ರದ ಛಾಯಾಗ್ರಾಹಕರಾದರೆ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿದೆ.

ಧನಂಜಯ್‌ ಅವರು ಗುರುದೇವ್‌ ಪಾತ್ರಧಾರಿಯಾದರೆ, ಗಂಗಾ ಆಗಿ ಅಮೃತಾ ಅಯ್ಯಂಗಾರ್‌ ಬಣ್ಣ ಹಚ್ಚಿದ್ದಾರೆ. ಇನ್ನು ನವೀನ್‌ ಶಂಕರ್‌, ಅವಿನಾಶ್‌ ಸೇರಿ ಹಲವು ನಟರು ಸಿನಿಮಾದ ಭಾಗವಾಗಿದ್ದಾರೆ.

Exit mobile version