Site icon Vistara News

Dolly Dhananjay | ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ ಅಂದಿದ್ಯಾಕೆ ಡಾಲಿ ಧನಂಜಯ್‌?

Dolly Dhananjay

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ (Dolly Dhananjay) ಅಭಿನಯದ ಹಲವು ಸಿನಿಮಾಗಳು 2022ರಲ್ಲಿ ತೆರೆ ಕಂಡವು. ಆದರೆ ಯಾವ ಸಿನಿಮಾಗಳಲ್ಲಿಯೂ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಇದೀಗ ಡಾಲಿ ಧನಂಜಯ್ ಹತ್ತು ಸಾಲಿನ ಕವಿತೆಯೊಂದನ್ನು ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಧನಂಜಯ್ ಬರೆದ ಈ 10 ಸಾಲುಗಳೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಡಾಲಿ ಪ್ರತಿಭೆ ಬಗ್ಗೆ ಗುಣಗಾನ ಮಾಡುತ್ತಿದ್ದರೆ, ಮತ್ತೆ ಕೆಲವರು ಧನಂಜಯ್ ಹೀಗೆ ಯಾಕೆ ಬರೆದಿರಬಹುದು? ಅಂತ ಲೆಕ್ಕಚಾರ ಹಾಕುತ್ತಿದ್ದಾರೆ.

“ಸುಟ್ಟು ಸುಟ್ಟು ಸುಟ್ಟಾರು ನನ್ನ ಸುಟ್ಟು ಬೆಳಕಾಗಿ ಉರಿವೆ. ಮುಚ್ಚಾರು ಮಣ್ಣಲ್ಲೇ ನನ್ನ ಮರವಾಗಿ ಬೆಳೆವೆ. ಹಾರಾಡೋ ಹಕ್ಕಿಗೆ ಇಲ್ಲಿ ಯಾವುದೇ ಗಡಿಯ ಹಂಗು, ಹಸಿದಂತ ಮಂದಿಗೆ ಇಲ್ಲಿ ಗೆಲ್ಲೋದೊಂದೇ ಗುಂಗು.. ಧಮ್ ಇದ್ರೆ ಹೊಡಿ ನನ್ನ ದಿಲ್ ಇದ್ರೆ ತಡಿ ನಿನ್ನ” ಎಂದು ಬರೆದುಕೊಂಡಿದ್ದಾರೆ.

ಇದೀಗ ಡಾಲಿ ನೋವಿನಿಂದ ಈ ಸಿನಿಮಾ ಬರೆದಿದ್ದಾರಾ ಅಥವಾ ಸಿನಿಮಾಗಾಗಿ ಬರೆದಿದ್ದಾರಾ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ | Dolly Dhananjay | ಮದುವೆ ಬಗ್ಗೆ ಡಾಲಿ ಧನಂಜಯ್‌ ಹೇಳಿದ್ದೇನು?

ಡಾಲಿ ಮುಂದಿನ ಸಿನಿಮಾಗಳಿವು!
ಒಂದೆಡೆ ಜನವರಿ 13ರಂದು ಹೆಡ್ ಬುಷ್ ಒಟಿಟಿಯಲ್ಲಿ ಬಿಡುಗಡೆಯಾದರೆ ಧನಂಜಯ್ ಸಾಹಿತ್ಯ ಬರೆದಿರುವ ಆರ್ಕೆಸ್ಟ್ರಾ ಮೈಸೂರು ಚಿತ್ರ ಜನವರಿ 12ರಂದು ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಬಳಿಕ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಹೊಯ್ಸಳ ಚಿತ್ರ ಮಾರ್ಚ್ 30ರಂದು ತೆರೆಗೆ ಬರಲಿದೆ.

ಇದನ್ನೂ ಓದಿ | Dolly Dhananjay | ಡಾಲಿ ಧನಂಜಯ್‌ ನಟನೆಯ ʻಹೆಡ್ ಬುಷ್ʼ ಸಿನಿಮಾ ಒಟಿಟಿ ದಿನಾಂಕ ಪ್ರಕಟ

Exit mobile version