ಬೆಂಗಳೂರು: 75ನೇ ಗಣರಾಜ್ಯೋತ್ಸವ (ಜನವರಿ 26) (Republic Day 2024) ಆಚರಣೆಯ ಸಂಭ್ರಮದಲ್ಲಿ ಸಿನಿರಸಿಕರಿಗೆ ಇದೆ ಸಿಹಿ ಸುದ್ದಿ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಸಿನಿಮಾ, ವೆಬ್ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ಅನಿಮಲ್ ಸಿನಿಮಾದಿಂದ ಹಿಡಿದು ದೇಶಭಕ್ತಿ ಹೆಚ್ಚಿಸುವ ʻಸ್ಯಾಮ್ ಬಹದ್ದೂರ್ʼ ವರೆಗೆ ಕೆಲ ಚಿತ್ರಗಳು ಒಟಿಟಿಗೆ ಕಾಲಿಡುತ್ತಿವೆ. ಯಾವೆಲ್ಲ ಸಿನಿಮಾಗಳು ರಿಲೀಸ್ ಎಂಬುದುನ್ನು ನೋಡೋಣ!
ಅನಿಮಲ್ ಸಿನಿಮಾ
ರಣಬೀರ್ ಕಪೂರ್ (Ranbir Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ (Animal OTT Release) ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಚಿತ್ರ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ. ಜನವರಿ 26ರಂದು ಗಣರಾಜ್ಯೋತ್ಸವದಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ನಟಿಸಿರುವ ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.
ಹಿಂದಿ ಜತೆಗೆ, ʻಅನಿಮಲ್ʼ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಲಭ್ಯವಿರುತ್ತದೆ. ಒಟಿಟಿ ಬಿಡುಗಡೆಯ ಕುರಿತು ರಣಬೀರ್ ಮಾತನಾಡಿ , “ಅನಿಮಲ್ ಚಿತ್ರಮಂದಿರಗಳಲ್ಲಿ ಪಡೆದ ಪ್ರತಿಕ್ರಿಯೆಯಿಂದ ನಾವು ಸಂತೋಷಗೊಂಡಿದ್ದೇವೆ. ಈಗ ಪ್ರಪಂಚದಾದ್ಯಂತದ ಪ್ರೇಕ್ಷಕರು ತಮ್ಮ ಮನೆಯಲ್ಲಿಯೇ ಕೂತು ಸಿನಿಮಾ ವೀಕ್ಷಿಸಬಹುದುʼʼಎಂದು ಹೇಳಿದ್ದಾರೆ.
ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.ʼಅನಿಮಲ್’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್ ಕಪೂರ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಹಿಂದೆ ʼಸಂಜುʼ ರಣಬೀರ್ ಕಪೂರ್ ನಟನೆಯ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿತ್ತು. ಕೇವಲ 8 ದಿನಗಳಲ್ಲಿಯೇ ಇದನ್ನು ʼಅನಿಮಲ್ʼ ಹಿಂದಿಕ್ಕಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು.
ʻಸ್ಯಾಮ್ ಬಹದ್ದೂರ್ʼ
ಬೆಂಗಳೂರಿನಲ್ಲಿರುವ ಮಾಣೆಕ್ ಶಾ ಪರೇಡ್ ಮೈದಾನ (Manekshaw Parade Ground) ಕನ್ನಡಿಗರಿಗೆಲ್ಲ ಚಿರ ಪರಿಚಿತ. ವಿಕ್ಕಿ ಕೌಶಲ್ (Vicky Kaushal) ಅಭಿನಯದ ʻಸ್ಯಾಮ್ ಬಹದ್ದೂರ್ʼ (Sam Bahadur) ಚಿತ್ರ ಸ್ಯಾಮ್ ಮಾಣೆಕ್ ಶಾ ಅವರ ಸಾಹಸಗಾಥೆಯನ್ನು ತೆರೆ ಮೇಲೆ ಅನಾವರಣಗೊಳಿಸಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಸಿನಿಮಾ ಜನವರಿ 26ರಂದು Zee5ನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಖ್ಯಾತ ಭಾರತೀಯ ಮಿಲಿಟರಿ ಅಧಿಕಾರಿ ಸ್ಯಾಮ್ ಮಾಣೆಕ್ ಶಾ ಅಸಾಧಾರಣ ನಾಯಕತ್ವ ಕೌಶಲ್ಯ ಮತ್ತು ಕಾರ್ಯತಂತ್ರಕ್ಕೆ ಹೆಸರಾದವರು. ಅವರು 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಇದನ್ನೂ ಓದಿ: Republic Day 2024: “ಸಂವಿಧಾನವನ್ನು ರಕ್ಷಿಸೋಣ…ʼʼ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಗಣರಾಜ್ಯೋತ್ಸವದ ಸಂದೇಶ
ಸ್ಯಾಮ್ ಮಾಣೆಕ್ ಶಾ (ಏಪ್ರಿಲ್ 3, 1914-ಜೂನ್ 27, 2008) ಅವರನ್ನು ಸ್ಯಾಮ್ ಬಹದ್ದೂರ್ (ಸ್ಯಾಮ್ ದಿ ಬ್ರೇವ್) ಎಂದೂ ಕರೆಯಲಾಗುತ್ತದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಭಾರತೀಯ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಪ್ರತಿಭಾವಂತ ನಿರ್ದೇಶಕಿ ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕರ್ಮ ಕಾಲಿಂಗ್
ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʻಕರ್ಮ ಕಾಲಿಂಗ್ʼ ಜನವರಿ 26, 2024 ರಂದು ಬಿಡುಗಡೆಯಾಗುತ್ತಿದೆ. ಡಿಸ್ನಿ+ ಹಾಟ್‌ಸ್ಟಾರ್ ನಿರ್ಮಾಣದ ಈ ಸಿನಿಮಾ ABC ಸರಣಿಯ ರಿವೆಂಜ್‌ನ ಅಧಿಕೃತ ರೂಪಾಂತರವಾಗಿದೆ.ರವೀನಾ ಟಂಡನ್ ಜತೆಗೆ ನಮ್ರತಾ ಶೇತ್, ರೋಹಿತ್ ರಾಯ್ ಮತ್ತು ವರುಣ್ ಸೂದ್ ನಟಿಸಿದ್ದಾರೆ.