ಬೆಂಗಳೂರು : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ (777 Charlie) ಜುಲೈ 29ಕ್ಕೆ 50 ದಿನ ಪೂರೈಸಲಿದೆ. ಹೀಗಾಗಿ ಚಿತ್ರವನ್ನು ವೂಟ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, 29 ಜುಲೈಗೆ ವೂಟ್‌ನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿದೆ. 150 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಚಾರ್ಲಿ ಹೆಸರಿನಲ್ಲಿ ಫಂಡ್ ಮಾಡುವ ಪ್ಲಾನ್ ನಡೆಯುತ್ತಾ ಇದ್ದು, 29ಕ್ಕೆ ಚಿತ್ರತಂಡ ಥೈಲ್ಯಾಂಡ್‌ಗೆ ಹೊರಡಲಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | 777 ಚಾರ್ಲಿ | ಸಿನಿಮಾ ನೋಡಿ ಕಾಲಿವುಡ್ ನಿಂದ ಸ್ಯಾಂಡಲ್‌ವುಡ್‌ಗೆ ಬಂತು ಕಾಲ್!
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಚಾರ್ಲಿ ಮತ್ತು ಧರ್ಮನ ಪಯಣವನ್ನು ಪ್ರೇಕ್ಷಕರು ನೋಡಿ ಕಣ್ತುಂಬಿಸಿಕೊಂಡಿದ್ದಾರೆ. ಚಿತ್ರ ಮಂದಿರಗಳಲ್ಲಿ ರಾರಾಜಿಸುತ್ತಿರುವ 777 ಚಾರ್ಲಿ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗುಲ್ಲು ಎಬ್ಬಿಸಿದೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಜನರು ನೋಡಿ ಹಾಡಿ ಹೊಗಳಿದ್ದಾರೆ.
777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಹಾಗೇ, ಕನ್ನಡ ಭಾಷೆಯ ಸೆಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ 21 ಕೋಟಿ ರೂಪಾಯಿಗೆ ಪಡೆದಿದೆ. ಡಿಜಿಟಲ್ ಹಕ್ಕು ಕೂಡ ಇದೇ ಸಂಸ್ಥೆಯ ವೂಟ್‌ಗೆ ಲಭಿಸಿದೆ. ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಂಡಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾ ಭಾಷೆಗಳ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.
ಇದನ್ನೂ ಓದಿ | 777 Charlie | ಒಟಿಟಿಯಲ್ಲಿ ಬರುತ್ತಿದೆ 777 ಚಾರ್ಲಿ, ಚಾರ್ಲಿಯಿಂದ ಬಂದ ಲಾಭ ಹಂಚಿಕೊಂಡ ಸಿಂಪಲ್ ಸ್ಟಾರ್