Site icon Vistara News

Dr Bro: ಗೋಮೂತ್ರದಲ್ಲೇ ತಲೆ ತೊಳ್ಕೋತಾರೆ; ಆಫ್ರಿಕನ್ ಮುಂಡಾರಿಗಳ ಹಸು ಪ್ರೀತಿ ತೆರೆದಿಟ್ಟ ಡಾ. ಬ್ರೋ!

Dr Bro with AFrican tribal People

‘ನಮಸ್ಕಾರ ದೇವ್ರು’ ಎಂದು ಯೂಟ್ಯೂಬ್‌ನಲ್ಲಿ ವಿಡಿಯೊ ಆರಂಭಿಸುವ ಡಾ. ಬ್ರೋ (Dr Bro) ನಿಜವಾದ ಹೆಸರು ಗಗನ್‌ ಶ್ರೀನಿವಾಸ್‌. ವಿದೇಶಗಳಿಗೆ ಹೋಗಿ ಅಲ್ಲಿ ಅದ್ಭುತ ಸಾಹಸಗಳನ್ನು ಮಾಡುವ, ಅಲ್ಲಿನ ಪರಿಸರ, ಜನರ ಬದುಕು, ರೀತಿ ನೀತಿಗಳನ್ನು ಪರಿಚಯಿಸುವ ಕಾರ್ಯವನ್ನು ಅವರು ಮಾಡುತ್ತ ಬಂದಿದ್ದಾರೆ. ಡಾ. ಬ್ರೋಗೆ ಈಗಾಗಲೇ ದೊಡ್ಡ ಅಭಿಮಾನಿ ವರ್ಗವಿದೆ. ಇದೀಗ ಹೊಸ ವಿಚಾರವನ್ನು ಹೊತ್ತು ತಂದಿದ್ದಾರೆ ಡಾ. ಬ್ರೋ. ಗೋವುಗಳನ್ನು ಭಾರತದಲ್ಲಿ ಮಾತ್ರ ಪೂಜ್ಯಭಾವೆನಯಿಂದ ನೋಡುವುದಿಲ್ಲ. ಆಫ್ರಿಕಾದಲ್ಲಿಯೂ ಈ ರೀತಿ ನೋಡುತ್ತಾರೆ ಎಂದು ವಿಡಿಯೊ ಮೂಲಕ ತೋರಿಸಿಕೊಟ್ಟಿದ್ದಾರೆ. ಆಫ್ರಿಕಾದ ಮುಂಡಾರಿ ಆದಿವಾಸಿಗಳು ಗೋಮೂತ್ರದಲ್ಲೇ ಸ್ನಾನ ಮಾಡುತ್ತಾರೆ. ಬೆಳಗ್ಗೆ ಬೇಗ ಎದ್ದು ಅದರಲ್ಲೇ ಸ್ನಾನ ಮಾಡುತ್ತಾರೆ.

ವಿಡಿಯೊದಲ್ಲಿ ಹೇಳುವಂತೆ ಆಫ್ರಿಕಾ ದೇಶದಲ್ಲಿ ಹಸುಗಳು ಜಾಸ್ತಿ. ಗುಂಪು ಗುಂಪಾಗಿ ಮೇಯಿಸುತ್ತಾರೆ. ವಿಶೇಷ ಏನೆಂದರೆ ಈ ಹಸುಗಳು ಭಾರತದಿಂದ ಬಂದವು! ಸುಮಾರು 500 ವರ್ಷಗಳ ಹಿಂದೆ ಈ ಹಸುಗಳನ್ನು ವ್ಯಾಪಾರ ಮಾಡಿ ಇಲ್ಲಿಗೆ ತರಲಾಗಿದೆ. ಆಗ ಬೆರಳೆಣಿಕೆಯಲ್ಲಿ ಇಲ್ಲಿಗೆ ಬಂದ ಹಸುಗಳ ಸಂಖ್ಯೆ ಇವತ್ತು ಕೋಟಿ ಹತ್ತಿರ ಇದೆ ಎಂದಿದ್ದಾರೆ ಡಾ. ಬ್ರೋ.

ಹಸುಗಳಿಗಾಗಿ ದೊಡ್ಡ ದೊಡ್ಡ ಮೈದಾನ ಇದೆ. ಮೈದಾನವನ್ನು ಬಹಳ ಸ್ವಚ್ಛವಾಗಿ ಇಟ್ಟಿದ್ದಾರೆ. ಇಲ್ಲೇ ಅವರ ಆಟ, ಪಾಠ, ನಿದ್ದೆ ಎಲ್ಲ. ಇಲ್ಲಿನ ಜನ ಕೈಯಿಂದಲೇ ಸೆಗಣಿ ಸಾರಿಸಿ, ನೆಲವನ್ನು ಸ್ವಚ್ಛಗೊಳಿಸುತ್ತಾರೆ. ತಾವು ಶೇಖರಿಸಿ ಒಣಗಿಸಿಟ್ಟ ಹಸುಗಳ ಸೆಗಣಿಗೆ ಬೆಂಕಿ ಹಾಕಿ ಹೊಗೆ ಬರುವ ಹಾಗೆ ಮಾಡುತ್ತಾರೆ. ಇದು ಇವರಿಗೂ ಹಸುಗಳಿಗೂ ಸೊಳ್ಳೆ ಕಾಟದಿಂದ ಮುಕ್ತಿ ಕೊಡುತ್ತದೆ. ಇಲ್ಲಿ ಕೊಟ್ಟಿಗೆಗೆ ಗೊಂಟಲು ಅಂತಾರೆ. ಈ ಗೊಂಟಲುಗಳಿರುವ ಜಾಗದಲ್ಲೇ ಈ ಮುಂಡಾರಿ ಜನರ ವಾಸ. ಹಸುಗಳ ಜತೆಗೇ ಸಣ್ಣ ಜೋಪಡಿ ಒಳಗೆ ಇವರು ವಾಸಿಸುತ್ತಾರೆ.

ಇದನ್ನೂ ಓದಿ: Hostel Hudugaru Bekagiddare: ಭಾರಿ ಕಲೆಕ್ಷನ್‌ನತ್ತ ʻಹಾಸ್ಟೆಲ್‌ ಹುಡುಗರುʼ ಸಿನಿಮಾ!

ಈ ಬುಡಕಟ್ಟು ಜನ ಹಸುವಿನ ಹಾಲು, ಮೊಸರು ಸೇವಿಸಿ ಗಟ್ಟಿಮುಟ್ಟಾಗಿದ್ದಾರೆ. ಅಷ್ಟೇ ಅಲ್ಲ ಗಂಜಲವನ್ನು ನಿರಂತರವಾಗಿ ಸೇವಿಸುತ್ತ ಅದರಲ್ಲೇ ಸ್ನಾನ ಮಾಡುತ್ತ ಇರುವ ಕಾರಣ ರೋಗಗಳು ಇವರ ಸಮೀಪ ಸುಳಿಯುವುದಿಲ್ಲ. ಅನಾರೋಗ್ಯ ಸಮಸ್ಯೆ ಕಾಡುತ್ತಿಲ್ಲ. ಚರ್ಮರೋಗದಿಂದ ಹಿಡಿದು ಅಸ್ತಮಾವರೆಗೆ ಇಲ್ಲಿನ ಜನ ಎಲ್ಲ ರೋಗಗಳಿಂದ ಮುಕ್ತರಾಗಿದ್ದಾರೆ ಎಂದಿದ್ದಾರೆ ಡಾ. ಬ್ರೋ.

Exit mobile version