ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ (Actor Vishnuvardhana ) ಅವರ ನಿವಾಸದ ಗೃಹಪ್ರವೇಶ ಜಯನಗರದ ಅವರ ಹಳೆಯ ಮನೆ ಜಾಗದಲ್ಲೇ ಭಾನುವಾರ (ನವೆಂಬರ್ 27) ನೆರವೇರಿದೆ. ಗೃಹ ಪ್ರವೇಶ ಸಮಾರಂಭದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಸೇರಿದಂತೆ ಸಿನಿ ತಾರೆಯರು ಭಾಗಿಯಾಗಿದ್ದಾರೆ. ಈ ಮನೆಗೆ ‘ವಲ್ಮೀಕ’ ಎಂಬ ಹೆಸರು ಇಡಲಾಗಿದೆ. ಗೃಹಪ್ರವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ಶುಭ ಹಾರೈಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ʻʻಸಾಹಸಸಿಂಹ ವಿಷ್ಣುವರ್ಧನ್ ಅವರು ನಮ್ಮೆಲ್ಲರ ಅಚ್ಚುಮ್ಮೆಚ್ಚಿನ ನಟ. ವಿಷ್ಣುವರ್ಧನ್ ಅವರ ಮನೆ ತುಂಬಾ ಸುಂದರವಾಗಿದೆ. ಮೈಸೂರಿನಲ್ಲಿ ವಿಷ್ಣು ಅವರ ಸ್ಮಾರಕದ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆ ಆಗಲಿದೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ಅವರ ಘನತೆಯನ್ನು ಎತ್ತಿಹಿಡಿಯುವ ಮ್ಯೂಸಿಯಂ ಮಾಡುತ್ತಿದ್ದೇವೆʼʼಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ | Rajinikanth | ಸುಶಾಂತ್ ಸಿಂಗ್ ಅಭಿನಯದ ಸಿನಿಮಾವನ್ನು ರಿಮೇಕ್ ಮಾಡ್ತಿದ್ದಾರಾ ರಜನಿಕಾಂತ್? ಯಾವ ಸಿನಿಮಾ?
ʻವಲ್ಮೀಕʼ ಅಂದರೆ ಏನು?
1976ರಲ್ಲಿ ಡಾ. ವಿಷ್ಣುವರ್ಧನ್ ಅವರು ಜಯನಗರದಲ್ಲಿ ಜಾಗ ತೆಗೆದುಕೊಂಡು ಮನೆ ನಿರ್ಮಾಣ ಮಾಡಿದ್ದರು. ನಾಗರಹಾವು ಚಿತ್ರ ಸಕ್ಸೆಸ್ ನಂತರ ʻವಲ್ಮೀಕʼ ಎಂದು ಮನೆಗೆ ಹೆಸರಿಡಲಾಗಿತ್ತು. ʻವಲ್ಮೀಕʼ ಎಂದರೆ ಹುತ್ತ ಎನ್ನುವ ಅರ್ಥ ಇದೆ. ಹಳೆ ಮನೆಗೆ ವಿಷ್ಣುವರ್ಧನ್ ತಾಯಿ ʻಕಾಮಾಕ್ಷಮ್ಮʼ ಎಂದು ಹೆಸರಿಡಲಾಗಿತ್ತು. ಈ ಮನೆಗೂ ʻವಲ್ಮೀಕʼ ಮತ್ತು ʻಕಾಮಾಕ್ಷಮ್ಮʼ ಎಂದು ಹೆಸರಿಡಲಾಗಿದೆ.ʻಕಂಚಿನಿಂದ ಮಾಡಿದ ಸಿಂಹದ ಮುಖವನ್ನು ಗೇಟ್‌ಗೆ ಅಳವಡಿಸಲಾಗಿದೆ. ಮನೆ ನಿರ್ಮಾಣ ಮಾಡಲು ಶುರುಮಾಡಿ ಅದಾಗಲೇ ಮೂರು ವರ್ಷ ಆಗಿತ್ತು. ಇನ್ನೂ ವಿಶೇಷ ಅಂದರೆ ಮನೆಯ ಮುಂದೆ ಕೃಷ್ಣನ ಮೂರ್ತಿ ಇದೆ. ಇದನ್ನು ಸ್ವತಃ ವಿಷ್ಣುವರ್ಧನ್ ಅವರೇ ಅಲ್ಲಿ ಸ್ಥಾಪನೆ ಮಾಡಿದ್ದರು.
ನಟ ಜಗ್ಗೇಶ್ ಮಾತನಾಡಿ ʻʻವಿಷ್ಣು ಅವರ ಮನೆಗೆ ಒಂದು ಬ್ಯುಟಿಫುಲ್ ಕಥೆಯಿದೆ. ಜಯನಗರದ ಮನೆ ವಿಷ್ಣು ಸರ್‌ಗೆ ಪ್ರಿಯವಾದ ಜಾಗ. ಇದು ಮನೆಯಲ್ಲ, ನಮ್ಮ ಪಾಲಿಗೆ ದೇವಸ್ಥಾನʼʼ ಎಂದು ಖುಷಿ ಹಂಚಿಕೊಂಡರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಗಂಧದ ಗುಡಿಯಲ್ಲಿ ಅಂದು ನಿಜಕ್ಕೂ ನಡೆದಿದ್ದೇನು? ವಿಷ್ಣುವರ್ಧನ್ ಅನುಭವಿಸಿದ ಯಾತನೆ ಎಷ್ಟು?