ಬೆಂಗಳೂರು: ಈಗಾಗಲೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ನಟ ವಿನೋದ್ ರಾಜ್ (Vinod Raj) ಅವರ ಕುಟುಂಬದ ಕುಟುಂಬದ ವೈಯಕ್ತಿಕ ವಿಚಾರಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎಂಬ ಒಂದು ಸತ್ಯಾಂಶವಾದರೆ, ಮತ್ತೊಂದು ಸತ್ಯವನ್ನು ಒಪ್ಪಿಕೊಂಡುಬಿಡಿ ಎಂದು ಮತ್ತೆ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರಕಾಶ್ ಮೇಹು ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ ಪ್ರಕಾಶ್ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ʻʻಒಂದು ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ. ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರೂ ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲʼʼ ಎಂದು ಬರೆದುಕೊಂಡಿದ್ದಾರೆ. ಇದೀಗ ಮಾಧ್ಯಮದೊಂದಿಗೆ ಪ್ರಕಾಶ್ ರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದ್ವಾರಕೀಶ್ ನೀಡಿದ ಹೇಳಿಕೆಯೇ ವಿವಾದ ಹುಟ್ಟಲು ಕಾರಣ
ʻʻಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಪುತ್ರ ಎನ್ನುವ ಗಾಸಿಪ್ ವಿವಾದ ಹುಟ್ಟಿಕೊಳ್ಳಲು ‘ಡ್ಯಾನ್ಸ್ ರಾಜ ಡ್ಯಾನ್ಸ್’ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ದ್ವಾರಕೀಶ್ ನೀಡಿದ ಹೇಳಿಕೆಯೇ ಕಾರಣʼʼ ಎಂದು ಪ್ರಕಾಶ್ ಹೇಳಿದ್ದಾರೆ. ಮಾತು ಮಂದುವರಿಸಿ ʻʻ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧ ಕಡಿದು ಹೋಗಿತ್ತು. ಮಹಾಲಿಂಗ ಭಾಗವತರ್ ಜತೆ ಲೀಲಾವತಿ ಮತ್ತೆ ಬದುಕಲು ಆರಂಭಿಸುತ್ತಾರೆ. ಸಿಪಾಯಿ ರಾಮು’ ಹಾಗೂ ‘ಭಕ್ತ ಕುಂಬಾರ’ ಸಿನಿಮಾಗಳಲ್ಲಿ ಅಣ್ಣಾವ್ರ ಜತೆಗೆ ನಟಿಸುತ್ತಾರೆ. ಆ ಸಿನಿಮಾ ಸೆಟ್‌ಗಳಿಗೂ ಮಹಾಲಿಂಗ ಭಾಗವತರ್ ಮಗನನ್ನು ಕರೆದುಕೊಂಡು ಬಂದಿರುತ್ತಾರೆ. ನನ್ನ ಮಗ ವಿನೋದ್ ಎಂದು ಹೇಳಿಕೊಂಡಿದ್ದನ್ನು ನೋಡಿರುವ ಜನ ಈಗಲೂ ಇದ್ದಾರೆʼʼ ಎಂದರು.
ವಿನೋದ್ ರಾಜ್ ಸಿನಿಮಾ ಎಂಟ್ರಿ
80ರ ದಶಕದಲ್ಲಿ ಶಿವರಾಜ್‌ಕುಮಾರ್ ಇಂಡಸ್ಟ್ರಿಗೆ ಬಂದು ‘ಆನಂದ್’ ಸಿನಿಮಾ ಹಿಟ್ ಆಯ್ತು. ದ್ವಾರಕೀಶ್ ಅವರು ಅಣ್ಣಾವ್ರ ಜತೆ ಮೇಯರ್ ಮುತ್ತಣ್ಣ ಮತ್ತು ಭಾಗ್ಯವಂತರು ಸಿನಿಮಾ ಮಾಡಿದರು. ನಂತರ ದ್ವಾರಕೀಶ್ ಗೆ ಡೇಟ್ ಕೊಟ್ಟಿಲ್ಲ, ಅವರ ಡೇಟ್‌ಗಾಗಿ ದ್ವಾರಕೀಶ್ ಪ್ರಯತ್ನ ಪಟ್ಟರು. ಅವರ ಡೇಟ್ ಕೂಡ ಸಿಗಲ್ಲ. ಆಗ ದ್ವಾರಕೀಶ್ ನೇರವಾಗಿ ಲೀಲಾವತಿ ಮನೆಗೆ ಹೋಗಿ ಮಗನನ್ನು ಹೀರೊ ಮಾಡುತ್ತೇನೆ ಎಂದು ಅವರಿಗೆ ಸಿನಿಮಾ ಮಾಡಿದರು” ಎಂದು ವಿನೋದ್ ರಾಜ್ ಸಿನಿಮಾ ಎಂಟ್ರಿ ಬಗ್ಗೆ ಹೇಳಿದರು. ‘ಡ್ಯಾನ್ಸ್ ರಾಜ್ ಡ್ಯಾನ್ಸ್’ ಸಿನಿಮಾವನ್ನು ದ್ವಾರಕೀಶ್ ಮಾಡಿದ್ದಾರೆ.
ಇದನ್ನೂ ಓದಿ: Vinod Raj: ಮದುವೆಯಾಗಿದ್ದೇನೆ ಏನಿವಾಗ? ಭಯೋತ್ಪಾದನೆ ಮಾಡಿದ್ದೇನಾ?; ವಿನೋದ್ ರಾಜ್ ಖಡಕ್ ಪ್ರತಿಕ್ರಿಯೆ
ಪ್ರಕಾಶ್ ರಾಜ್ ಮೇಹು ಪೋಸ್ಟ್
ವಿನೋದ್, ವಿನೋದ್ ರಾಜ್ ಆಗಿದ್ದು ಹೇಗೆ?
ಪ್ರಕಾಶ್ ರಾಜ್ ಮಾತು ಮುಂದುವರಿಸಿ “ವಿನೋದ್ ಎನ್ನುವ ಹೆಸರನ್ನು ವಿನೋದ್ ರಾಜ್ ಮಾಡಿ ಸಿನಿಮಾ ಮಾಡಿದರು ದ್ವಾರಕೀಶ್. ಅದಕ್ಕೂ ಮುನ್ನ ಎಲ್ಲ ದಾಖಲೆಗಳಲ್ಲೂ ಹೆಸರು ವಿನೋದ್ ಅಂತಲೇ ಇತ್ತು. ರಾಜ್ ಅಂತ ಸೇರಿಸಿದ್ದು ನಾನು ಅಪರಾಧ ಎನ್ನುವುದಿಲ್ಲ. ಆ ಕಾಲದಲ್ಲಿ ಚರಣ್ ರಾಜ್, ಸುಂದರ್ ರಾಜ್ ಅಂತೆಲ್ಲಾ ಇದ್ದರು. ದ್ವಾರಕೀಶ್ ಪತ್ರಿಕಾಗೋಷ್ಠಿಯಲ್ಲಿ ʻʻವಿನೋದ್ ರಾಜ್ ಹುಟ್ಟಿನ ಬಗ್ಗೆ ಗುಟ್ಟೊಂದು ಇದೆ. ‘ಡ್ಯಾನ್ಸ್ ರಾಜ ಡ್ಯಾನ್ಸ್’ ಸಿನಿಮಾ ಬಿಡುಗಡೆಯ ನಂತರ ಆ ಗುಟ್ಟನ್ನು ಬಹಿರಂಗ ಪಡಿಸುತ್ತೇನೆ” ಎಂದು ಹೇಳಿಕೆ ಕೊಡುತ್ತಾರೆ. ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಎನನ್ನೂ ಹೇಳದೆ ಇದ್ದ ಕಾರಣ ಈ ಗಾಸಿಪ್‌ಗಳು ಹುಟ್ಟಿಕೊಂಡವು. ʻʻರಾಜ್‌ಕುಮಾರ್ ಹಾಗೂ ಲೀಲಾವತಿಯವರಿಗೆ ಸಂಬಂಧ ಎಂದು ಕೆಲವರಿಗೆ ಗೊತ್ತಿದ್ದರಿಂದ ಎರಡನ್ನು ಲಿಂಕ್ ಮಾಡಿ ಅವರ ಮಗ ವಿನೋದ್ ರಾಜ್ ಅನ್ನೋದು ತಾನೇ ತಾನಾಗಿ ಬೆಳೆದುಕೊಂಡು ಹೋಯಿತು”. ರವಿ ಬೆಳಗೆರೆಯವರ ಬಳಿ ಲೀಲಾವತಿ ಅವರು ‘ರಾಜ್ ಲೀಲಾ ವಿನೋದ’ ಪುಸ್ತಕ ಬರೆಸಿದರೋ ಆಗ ಆ ಸುಳ್ಳನ್ನು ಸತ್ಯ ಮಾಡಲು ಹೋದರು. ಅಣ್ಣಾವ್ರು ಇಲ್ಲ ಎನ್ನುವ ಒಂದೇ ಒಂದು ಧೈರ್ಯದಿಂದ ಹಾಗೆ ಮಾಡಿದರು” ಎಂದು ಪ್ರಕಾಶ್ ರಾಜ್ ಮೇಹು ವಿವರಿಸಿದ್ದಾರೆ.
ಪ್ರಕಾಶ್ ರಾಜ್ ಪೋಸ್ಟ್ ಹಂಚಿಕೊಂಡಿದ್ದೇನು?
ಲೀಲಾವತಿಯವರ ಜತೆಗೆ ಕುಳಿತಿರುವ ವಿನೋದ್ ರಾಜ್ ಕುಟುಂಬದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಮೇಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಆತನ ಮಾರ್ಕ್ಸ್ ಕಾರ್ಡ್ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ.