ಬೆಂಗಳೂರು: ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 14 ವರ್ಷಗಳು ಕಳೆದಿವೆ. ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರವಾದ ಅಭಿಮಾನ್ ಸ್ಟುಡಿಯೋ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಈ ಸಂಬಂಧವಾಗಿ ಇಂದು (ಡಿ.17) ವಿಷ್ಣುವರ್ಧನ್ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಅವರು ಭಾಗಿಯಾಗಿದ್ದರು. ಈ ವೇಳೆ ಕ್ರಾಂತಿರಾಜು, ಚಂದ್ರಶೇಖರ ಸ್ವಾಮಿಜಿ ಬಿಜಿಎಸ್, ಪ್ರಕಾಶ್ ಮೂರ್ತಿ, ದಲಿತ ಸಂಘದ ಅಧ್ಯಕ್ಷರು ಸೇರಿದಂತೆ ಅನೇಕ ವಿಷ್ಣು ಸಂಘಟನೆಗಳು ಭಾಗಿಯಾಗಿತ್ತು.
ನಾರಾಯಣ ಗೌಡ ಈ ಬಗ್ಗೆ ಮಾತನಾಡಿ ʻʻಬೇಡಿಕೆಯನ್ನು ಇಡೇರಿಸುವುದಾಗಿ ಡಿಕೆಶಿ ಅವರು ಭರವಸೆ ಕೊಟ್ಟಿದ್ದಾರೆ .ವಿಷ್ಣುವರ್ಧನ್ ಅವರ ಪುಣ್ಯಭೂಮಿ ಅಲ್ಲೇ ಇರಲಿದೆ. ಯಾರು ನೆಲಸಮ ಮಾಡಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಅಪ್ಪಟ ಕನ್ನಡ ಪ್ರೇಮಿ. ನಾಡು ನುಡಿ ವಿಚಾರ ಬಂದಾಗ ಎದೆಗಾರಿಕೆಯಿಂದ ಮಾತಾಡ್ತಾರೆ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಕೋಟಿ ಕೋಟಿ ಕನ್ನಡಿಗರ ಮನಸ್ಸನ್ನು ಸೆಳೆದ ಸಾಹಸ ಸಿಂಹ ವಿಷ್ಣು ವರ್ದನ್ ಅಭಿಮಾನಿಗಳಿಗೆ ನಮಸ್ಕಾರಗಳು. ವೀರಕ ಪುತ್ರ ಶ್ರಿನಿವಾಸ್ ಅವರು ನಿಮ್ಮನ್ನೆಲ್ಲ ಈ ವಿಚಾರವಾಗಿ ಇಲ್ಲಿ ಸೇರಿಸಿದ್ದಾರೆ. ಡಿಕೆ ಶಿವಕುಮರ್ 10ಗುಂಟೆ ಜಾಗ ಕೊಡಿಸುವ ಭರವಸೆ ಕೊಟ್ಟಿದ್ದಾರೆʼʼಎಂದರು.
ಅಭಿಮಾನಿಯೊಬ್ಬರು ಈ ಬಗ್ಗೆ ಮಾತನಾಡಿ ʻʻಕನ್ನಡ ಕಲಾವಿದರು ವಿಷ್ಣುವರ್ಧನ್ ಅವರ ಪರವಾಗಿ ಟ್ವೀಟ್ ಮಾಡಿರುವುದು ಖುಷಿ ಇದೆ. ಆದರೂ ಹೋರಾಟದಲ್ಲಿ ಕಲಾವಿದರು ಭಾಗಿಯಾಗಬೇಕು. ದಾದಾ ಅವರ ಪುಣ್ಯಭೂಮಿ ಬಾಲಣ್ಣ ಅವರದ್ದು ಅಲ್ಲಾ. ಸರ್ಕಾರ ಅವರಿಗೆ ನೀಡಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕುʼʼಎಂದರು.
ಇದನ್ನೂ ಓದಿ: Dr Vishnuvardhan: ವಿಷ್ಣು ಸ್ಮಾರಕ ವಿವಾದ; ಹೋರಾಟಕ್ಕೆ ಕಿಚ್ಚನ ಬೆಂಬಲ!
42 ಕ್ಕೂ ಹೆಚ್ಚು ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದವು. ನಟರಾದ ಸುದೀಪ್, ಧನಂಜಯ್ ಸೇರಿದಂತೆ ಹಲವರ ಬೆಂಬಲ ಕೂಡ ಇದೆ. “ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ”ಎಂದು ಧನಂಜಯ್ ಅವರು ಟ್ವೀಟ್ ಹಂಚಿಕೊಂಡಿದ್ದಾರೆ.
ಪ್ರತಿಭಟನೆ ಯಾಕೆ?
ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರವಾದ ಅಭಿಮಾನ್ ಸ್ಟುಡಿಯೋ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಅಭಿಮಾನ್ ಸ್ಟುಡಿಯೋದ ಮಾಲೀಕರಿಂದ ಈ ರೀತಿ ಆಗುತ್ತಿದೆ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಆಚರಿಸಲು ಹಲವಾರು ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದು, ಈ ಸಂಬಂಧವಾಗಿ ಪ್ರತಿಭಟನೆ ಮಾಡಲಾಗುತ್ತಿದೆ.