ಬೆಂಗಳೂರು : ಮಲಯಾಳಂ ನಟ ಮೋಹನ್ಲಾಲ್ ಅಭಿನಯದ ʻದೃಶ್ಯಂ 2ʼ (Drishyam 2) ಸಿನಿಮಾ ಹಲವು ಭಾಷೆಗಳಲ್ಲಿ ರಿಮೇಕ್ ಆಗಿದೆ. ಹಿಂದಿಯಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ 100 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.
ಅಭಿಷೇಕ್ ಪಾಠಕ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ತಬು, ಇಶಿತಾ ದತ್ತಾ ಮತ್ತು ಮೃಣಾಲ್ ಜಾಧವ್ ನಟಿಸಿದ್ದಾರೆ. ದೃಶ್ಯಂ ಮೋದಲನೇ ಭಾಗದಲ್ಲಿಯೂ ಅಜಯ್ ದೇವಗನ್ ನಟಿಸಿದ್ದರು. 2015ರಲ್ಲಿ ಮೊದಲನೇ ಭಾಗ ತೆರೆ ಕಂಡಿತ್ತು. ಇದೀಗ ಈ ಚಿತ್ರ ಮುಂದುವರಿದ ಭಾಗವಾಗಿದೆ.
ಈ ಸಿನಿಮಾ ಹಿಂದಿಯಲ್ಲಿ ಭಾರಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದ್ದು, ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ʻʻ18 ನವೆಂಬರ್ 15.38 ಕೋಟಿ ರೂ, 19 ನವೆಂಬರ್ 21.59 ಕೋಟಿ ರೂ, 20 ನವೆಂಬರ್ 27.17 ಕೋಟಿ ರೂ, 21 ನವೆಂಬರ್ 10.48 ಕೋಟಿ ರೂ, 22 ನವೆಂಬರ್ 9.55 ಕೋಟಿ ರೂ, 22 ನವೆಂಬರ್ 8.62 ಕೋಟಿ ಒಟ್ಟೂ 104.66 ಕೋಟಿ ರೂ. ಗಳಿಕೆ ಕಂಡಿದೆʼʼ ಎಂದು ಟ್ವೀಟ್ ಮಾಡಿದ್ದಾರೆ. ಹಿಂದಿ ಬೆಲ್ಟ್ಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಇದೀಗ ‘ದೃಶ್ಯಂ 2’ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ | Drishyam 2 | ದೃಶ್ಯಂ-2 ಪ್ರೀಮಿಯರ್ ಶೋ ವೇಳೆ ಪತಿಗೆ ಲಿಪ್ ಲಾಕ್ ಮಾಡಿದ ನಟಿ ಶ್ರೀಯಾ ಸರನ್!
ಬಾಲಿವುಡ್ನಲ್ಲಿ ರಣಬೀರ್ ಕಪೂರ್ ಅಭಿನಯದ ʻಬ್ರಹ್ಮಾಸ್ತ್ರʼ ಸಿನಿಮಾಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Drishyam 2 | ದೃಶ್ಯಂ-2 ಸಿನಿಮಾ ಮೂರನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?