Site icon Vistara News

Drishyam 2 | ದೃಶ್ಯಂ-2 ಸಿನಿಮಾ ಮೂರನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು?

Drishyam 2

ಬೆಂಗಳೂರು : ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಅಭಿನಯದ ದೃಶ್ಯಂ 2 (Drishyam 2) ಸಿನಿಮಾ ಹಲವು ಭಾಷೆಗಳಲ್ಲಿ ರಿಮೇಕ್‌ ಆಗಿದ್ದು, ನೋಡುಗರ ಪ್ರಶಂಸೆಗೆ ವ್ಯಕ್ತವಾಗಿದೆ. ಹಿಂದಿಯಲ್ಲಿ ಅಜಯ್‌ ದೇವಗನ್‌ ನಟಿಸಿದ್ದು, ಇದೀಗ ಈ ಸಿನಿಮಾ ಬಾಲಿವುಡ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ನವೆಂಬರ್‌ 20ರಂದು ಸುಮಾರು 27.17 ಕೋಟಿ.ರೂ ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ.

ಹಿಂದಿಯಲ್ಲಿ ಮೊದಲ ದಿನ 15.38 ಕೋಟಿ.ರೂ ಕಲೆಕ್ಷನ್‌ ಮಾಡಿದರೆ, ಮೂರನೇ ದಿನ 27.17 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಈ ಮೂರು ದಿನಗಳಲ್ಲಿ ‘ದೃಶ್ಯಂ 2’ 64.14 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಬಾಲಿವುಡ್‌ನಲ್ಲಿ ರಣಬೀರ್‌ ಕಪೂರ್‌ ಅಭಿನಯದ ʻಬ್ರಹ್ಮಾಸ್ತ್ರʼ ಸಿನಿಮಾಕ್ಕಿಂತಲೂ ಹೆಚ್ಚು ಕಲೆಕ್ಷನ್‌ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

ದೃಶ್ಯಂ -2 ಈ ವಾರ ಕಳೆದರೆ 100 ಕೋಟಿ ಕ್ಲಬ್‌ ಸೇರಬಹುದು ಎಂದು ಟ್ರೇಡ್‌ ವರದಿ ಮಾಡಿದೆ. ಹಿಂದಿ ಬೆಲ್ಟ್‌ಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಇದೀಗ ‘ದೃಶ್ಯಂ 2’ ಸಖತ್‌ ಸದ್ದು ಮಾಡುತ್ತಿದೆ. ಅಭಿಷೇಕ್ ಪಾಠಕ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ತಬು, ಇಶಿತಾ ದತ್ತಾ ಮತ್ತು ಮೃಣಾಲ್ ಜಾಧವ್ ನಟಿಸಿದ್ದಾರೆ.

ಇದನ್ನೂ ಓದಿ | Drishyam 2 | ದೃಶ್ಯಂ-2 ಪ್ರೀಮಿಯರ್‌ ಶೋ ವೇಳೆ ಪತಿಗೆ ಲಿಪ್ ಲಾಕ್ ಮಾಡಿದ ನಟಿ ಶ್ರೀಯಾ ಸರನ್!

Exit mobile version