ಬೆಂಗಳೂರು: ಮಲಯಾಳಂನ ʼದೃಶ್ಯಂ 1′ ಮತ್ತು ʼದೃಶ್ಯಂ 2′ (Drishyam Hollywood Remake) ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆ ಸೃಷ್ಟಿಸಿದಂತಹ ಸಿನಿಮಾಗಳು. ಕನ್ನಡ, ಹಿಂದಿಯಲ್ಲೂ ರಿಮೇಕ್ ಆಗಿರುವ ಈ ಸಿನಿಮಾ ಅಭಿಮಾನಿಗಳ ಮೆಚ್ಚುಗೆ ಪಡೆಯುವುದರ ಜತೆಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದೆ ಕೂಡ. ಇದೀಗ ಈ ಸಿನಿಮಾ ಭಾರತದಿಂದಾಚೆ, ವಿದೇಶಗಳಲ್ಲಿಯೂ ಮಿಂಚುವುದಕ್ಕೆ ಸಿದ್ಧವಾಗಿದೆ. ಇದೀಗ ಭಾರತೀಯ ಚಿತ್ರ ಹಾಲಿವುಡ್ಗೆ ರಿಮೇಕ್ ಆಗುತ್ತಿದೆ. ನಮ್ಮ ಭಾರತೀಯ ಕಥೆ ಹಾಲಿವುಡ್ ನಲ್ಲಿ ರಿಮೇಕ್ ಆಗುತ್ತಿರುವುದು ಇದೇ ಮೊದಲು.
ಚಿತ್ರದ ಕೊರಿಯನ್ ರಿಮೇಕ್ ನಂತರ, ತಯಾರಕರು ಈಗ ಫ್ರ್ಯಾಂಚೈಸ್‌ನ ಹೊಸ ಮೈಲುಗಲ್ಲನ್ನು ಘೋಷಿಸಿದ್ದಾರೆ. ಪನೋರಮಾ ಸ್ಟುಡಿಯೋಸ್ ಗಲ್ಫ್‌ಸ್ಟ್ರೀಮ್ ಪಿಕ್ಚರ್ಸ್ ಮತ್ತು JOAT ಫಿಲ್ಮ್‌ಗಳೊಂದಿಗೆ ಕೈಜೋಡಿಸಿ ಹಾಲಿವುಡ್‌ನಲ್ಲಿ ‘ದೃಶ್ಯಂ’ ಸಿನಿಮಾ ನಿರ್ಮಿಸಿದೆ.
ಪನೋರಮಾ ಸ್ಟುಡಿಯೋಸ್ ಮೂಲ ನಿರ್ಮಾಪಕರಾದ ಆಶೀರ್ವಾದ್ ಸಿನಿಮಾಸ್‌ನಿಂದ ‘ದೃಶ್ಯಂ’ ಮೊದಲ ಮತ್ತು ಎರಡನೇ ಭಾಗಗಳ ಅಂತಾರಾಷ್ಟ್ರೀಯ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್, ಕನ್ನಡದಲ್ಲಿ ರವಿಚಂದ್ರನ್ ನಟಿಸಿದ ಈ ಸಿನಿಮಾವನ್ನು ಯುಎಸ್ ಮತ್ತು ಕೊರಿಯಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಪ್ಯಾನಿಷ್ ಭಾಷೆಯ ಆವೃತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Drishyam 3 Movie : ಅಜಯ್ ದೇವಗನ್- ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಏಕಕಾಲಕ್ಕೆ ಬಿಡುಗಡೆ
#Mohanlal film #Drishyam made Rocord :
— Cinepedia (@TheCinepedia) February 29, 2024
Malayalam – Original – Released
Telugu – Remade – Released
Tamil – Remade – Released
Kannada – Remade – Released
Hindi – Remade – Released
Sinhalese, Chinese, Korean & Now in English 😱🔥#DrishyamFranchise #Barroz pic.twitter.com/fxaRDAL5XJ
ಫ್ರಾಂಚೈಸ್ ಹಕ್ಕುಗಳನ್ನು ಪಡೆದಿರುವ ಪನೋರಮಾ ಸ್ಟುಡಿಯೋಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಮಂಗತ್ ಪಾಠಕ್ ಮಾತನಾಡಿ ʻʻನಾವು ಈ ಕಥೆಯನ್ನು ವಿಶ್ವದಾದ್ಯಂತ ಪ್ರೇಕ್ಷಕರೊಂದಿಗೆ ಆಚರಿಸಲು ತಯಾರಾಗಿದ್ದೇವೆ. ಹಾಲಿವುಡ್‌ಗಾಗಿ ಇಂಗ್ಲಿಷ್‌ನಲ್ಲಿ ಈ ಕಥೆಯನ್ನು ರಚಿಸಲು ಗಲ್ಫ್‌ಸ್ಟ್ರೀಮ್ ಪಿಕ್ಚರ್ಸ್ ಮತ್ತು JOAT ಫಿಲ್ಮ್‌ಗಳೊಂದಿಗೆ ಸಹಯೋಗಿಸುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ. ಕೊರಿಯಾ ಮತ್ತು ಹಾಲಿವುಡ್ ನಂತರ, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ 10 ದೇಶಗಳಲ್ಲಿ ದೃಶ್ಯಂ ಸಿನಿಮಾ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆʼʼ ಎಂದು ಹೇಳಿಕೆ ನೀಡಿದರು.
ಸದ್ಯಕ್ಕೆ ಈ ಹಾಲಿವುಡ್ ರಿಮೇಕ್‌ನಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ತೆಲುಗಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ಕಮಲ್ ಹಾಸನ್, ಹಿಂದಿಯಲ್ಲಿ ಅಜಯ್ ದೇವಗನ್ ಮುಂತಾದವರು ನಟಿಸಿದ್ದರು.
ಹಾಗೆಯೇ ಚೀನಾ ಭಾಷೆಗೂ ರೀಮೇಕ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಕೋರಿಯಾ ಹಾಗೂ ಜಪಾನಿ ಭಾಷೆಗಳಲ್ಲಿ ರಿಮೇಕ್ ಮಾಡುವುದಕ್ಕೆ ಅನುಮತಿ ಪಡೆಯುವುದಕ್ಕೂ ಮಾತುಕತೆ ನಡೆಯುತ್ತಿರುವುದಾಗಿ ಹೇಳಲಾಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿರುವ ದೃಶ್ಯಂ ಅನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಅದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ದೃಶ್ಯಂ 2 ಸಿನಿಮಾದಲ್ಲಿ ಅಜಯ್ ದೇವಗನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ 250 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ.