ಬೆಂಗಳೂರು: ದುಲ್ಕರ್ ಸಲ್ಮಾನ್ (Dulquer Salmaan) ಅಭಿನಯದ ʻಕಿಂಗ್ ಆಫ್ ಕೋಥಾʼ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದೆ. ದುಲ್ಕರ್ ಸಲ್ಮಾನ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ʻಕಿಂಗ್ ಆಫ್ ಕೋಥಾʼ (King of Kotha) ಚಿತ್ರದ ಪ್ರಮೋಷನ್ ವೇಳೆ ಅವರೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ‘ಕಲ್ಕಿ 2898 ಎಡಿ’ (Kalki 2898 – AD)ಚಿತ್ರದಲ್ಲಿ ಅವರು ನಟಿಸುವ ಸೂಚನೆ ಸಿಕ್ಕಿದೆ. ಈಗಾಗಲೇ ಈ ಚಿತ್ರದಲ್ಲಿ ಪ್ರಭಾಸ್ ಜತೆ ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್ (Kamal Haasan) ಮೊದಲಾದ ಸ್ಟಾರ್ ಹೀರೋಗಳು ಈ ಚಿತ್ರದಲ್ಲಿ ಇದ್ದಾರೆ. ಈ ಚಿತ್ರದ ಮೊದಲ ಗ್ಲಿಂಪ್ಸ್ನಲ್ಲಿ ಪ್ರಭಾಸ್, ದೀಪಿಕಾ (Deepika Padukone) ಹಾಗೂ ಅಮಿತಾಭ್ (Amitabh Bachchan) ಲುಕ್ ರಿವೀಲ್ ಆಗಿದೆ. ಹೀಗಿರುವಾಗ ದುಲ್ಕರ್ ಸಲ್ಮಾನ್ ಕೂಡ ಇರಲಿದ್ದಾರೆ ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
ನಟಿಸುತ್ತಿದ್ದೀನೋ, ಇಲ್ಲವೋ!
ದುಲ್ಕರ್ ಸಲ್ಮಾನ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಸೆಟ್ಗೆ ಭೇಟಿ ನೀಡಿದ್ದರು. ಈ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ. ‘ಪ್ರಾಜೆಕ್ಟ್ ಕೆ (ಕಲ್ಕಿ 2898 ಎಡಿ) ಚಿತ್ರದ ಬಗ್ಗೆ ಏನನ್ನೂ ಹೇಳಲೂ ಸಾಧ್ಯವಿಲ್ಲ. ಆದರೆ, ಆ ಸೆಟ್ಗಳು ಅದ್ಭುತವಾಗಿದ್ದವು ಎಂದಷ್ಟೇ ನಾನು ಹೇಳಬಲ್ಲೆ. ನಾಗ್ ಅಶ್ವಿನ್ ಮಾತ್ರ ಈ ರೀತಿ ಆಲೋಚಿಸಲು ಸಾಧ್ಯ. ಪ್ರೇಕ್ಷಕರಿಗೆ ಅವರು ಸರ್ಪ್ರೈಸ್ ನೀಡಲು ಎಂದಿಗೂ ವಿಫಲವಾಗುವುದಿಲ್ಲ. ಈ ಚಿತ್ರದ ಸೆಟ್ಗಳು ಅವರ ಈ ಮೊದಲ ಸಿನಿಮಾಗಿಂತಲೂ ಅದ್ಭುತವಾಗಿವೆ. ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೀನೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದು ನಕ್ಕಿದ್ದಾರೆ. ಇದು ಅವರ ಫ್ಯಾನ್ಸ್‌ಗೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.
ಇದನ್ನೂ ಓದಿ: Dulquer Salmaan: ದುಲ್ಕರ್ ಸಲ್ಮಾನ್ ಸಿನಿಮಾಗೆ ರಾಣಾ ದಗ್ಗುಬಾಟಿ ಸಾಥ್!
ಕಲ್ಕಿ ಅವತಾರ ತಾಳಿದ ಪ್ರಭಾಸ್!
‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸೂಪರ್ ಹೀರೊ ಮಾದರಿಯ ಪಾತ್ರಗಳು ಕಾಣಿಸಿವೆ. ದೀಪಿಕಾ ಪಡುಕೋಣೆ ಅವರು ಕೂಡ ‘ಕಲ್ಕಿ 2898-ಎಡಿ’ ಚಿತ್ರದಲ್ಲಿದ್ದಾರೆ. ಅವರ ಪಾತ್ರ ಕೂಡ ಇಲ್ಲಿ ಕಾಣಿಸಿದೆ. ಅಮಿತಾಭ್ ಬಚ್ಚನ್ ಅವರ ಮುಖವನ್ನು ಮಾತ್ರ ತೋರಿಸಲಾಗಿದೆ. ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: Dulquer Salmaan: ಮಾಸ್ ಲುಕ್‌ನಲ್ಲಿ ಮಿಂಚಲು ದುಲ್ಕರ್ ಸಲ್ಮಾನ್ ರೆಡಿ; ಕಿಂಗ್ ಆಫ್ ಕೋಥಾ ಟೀಸರ್ ರಿಲೀಸ್
ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್ ಕೆ ಸಿನಿಮಾ ಸ್ಯಾನ್ ಡಿಯಾಗೊದಲ್ಲಿ ಕಾಮಿಕ್ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕಾಮಿಕ್ ಕಾನ್‌ಗೆ ಹೋದ ಮೊದಲ ಭಾರತೀಯ ಚಲನಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅಲ್ಲಿ ನಿಮ್ಮನ್ನು ನೋಡೋಣ” ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.