ಬೆಂಗಳೂರು: ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salmaan) ತಮ್ಮ 28ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅನೇಕ ಸ್ಟಾರ್ ಪುತ್ರರು ತಮ್ಮ 20ರ ದಶಕದ ಆರಂಭದಲ್ಲಿ ಸಿನಿರಂಗಕ್ಕೆ ಕೊಟ್ಟಿದ್ದಾರೆ. ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಈ ಬಗ್ಗೆ ದುಲ್ಕರ್ ಸಲ್ಮಾನ್ ತಾವು ಸಿನಿರಂಗಕ್ಕೆ ಏಕೆ ತಡವಾಗಿ ಎಂಟ್ರಿ ಕೊಟ್ಟೆ ಎಂಬುದರ ಬಗ್ಗೆ ಬಹಿರಂಗಪಡಿಸಿದ್ದಾರೆ. ʻತಮಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಎಲ್ಲಿ ನಾನು ತಂದೆಯ ಹೆಸರಿಗೆ ಧಕ್ಕೆ ತಂದು ಬಿಡುತ್ತೇನೋ ಎಂಬ ಆತಂಕ ನನ್ನಲ್ಲಿತ್ತು. ನಾನು ನಟಿಸಬಹುದೆಂಬ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲʼ ಎಂದು ಹೇಳಿದ್ದಾರೆ.
ʻʻನನಗೆ ಭಯವಾಗಿತ್ತು. ನಾನು 28 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದಾಗಲೂ ನನ್ನಲ್ಲಿ ನಡುಕ ತುಂಬಿತ್ತು. ನಾನು ನಟಿಸಬಹುದೇ ಅಥವಾ ಜನರು ನನ್ನನ್ನು ಥಿಯೇಟರ್‌ನಲ್ಲಿ ಎರಡು ಗಂಟೆಗಳ ಕಾಲ ನೋಡುತ್ತಾರೆಯೇ ಎಂದು ನನಗೆ ತಿಳಿದಿರಲಿಲ್ಲʼʼ ಎಂದು ಹೇಳಿದ್ದಾರೆ. “ನಮ್ಮ 20ರ ದಶಕದಲ್ಲಿ ನಾನು ಸಾಕಷ್ಟು ಅಭದ್ರತೆಯೊಂದಿಗೆ ಹೋರಾಡಿದ್ದೆ. ಆಗ ನಮಗೆ ನಮ್ಮ ಮೇಲೆ ಹೆಚ್ಚು ವಿಶ್ವಾಸವಿರುತ್ತಿರಲಿಲ್ಲʼʼ ಎಂದು ದುಲ್ಕರ್ ಹೇಳಿದರು. ʻʻನೆಪೋಟಿಸಂ (ಸ್ವಜನಪಕ್ಷಪಾತ) ಕೂಡ ಆ ಕಾಲದಲ್ಲಿ ಎದುರಿಸಿದ್ದೇವು.
“ಆ ಸಮಯದಲ್ಲಿ, ಎರಡನೇ ತಲೆಮಾರಿನ ನಟರು ಮಲಯಾಳಂ ಚಿತ್ರರಂಗದಲ್ಲಿ ಉತ್ತಮವಾಗಿ ನಟಿಸುವುದು ಅಪರೂಪವಾಗಿತ್ತು. ಪೃಥ್ವಿರಾಜ್ ತುಂಬ ಮುಂಚೆಯೇ ಬಂದಿದ್ದರು. ನಾನು ಮಾಡಿದ ಸಮಯಕ್ಕೆ ಫಹಾದ್ ಕೂಡ ಬಂದಿದ್ದಾರೆ. ಮೊದ ಮೊದಲು ಸ್ವಲ್ಪ ತಡವರಿಸಿದ್ದೆ. ನನಗೆ ನನ್ನ ತಂದೆ (ಮಮ್ಮುಟ್ಟಿ) Mammootty ಹೆಸರನ್ನು ಕೆಡಿಸಲು ಇಷ್ಟವಿರಲಿಲ್ಲ. ತಂದೆಯ ಹೆಸರಿಗೆ ಧಕ್ಕೆ ತಂದು ಬಿಡುತ್ತೇನೋ ಎಂಬ ಆತಂಕ ನನ್ನಲ್ಲಿತ್ತುʼʼಎಂದು ಹೇಳಿದರು.
ಸಿನಿಮಾ ನನ್ನ ಜೀವನ
ʻಇದೀಗ ನನ್ನ ಜೀವನ, ಮಹತ್ವಾಕಾಂಕ್ಷೆ ಮತ್ತು ಸ್ಫೂರ್ತಿ ಸಿನಿಮಾ ಮಾತ್ರವೇ ಆಗಿದೆ. ನನಗೆ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯಲು ಇಷ್ಟ. ಸಿನಿಮಾದ ಮೇಲಿನ ನನ್ನ ಉತ್ಸಾಹದಿಂದ ಮಾತ್ರ ನಾನು ಆ ಸಂತೋಷದ ಜಾಗದಿಂದ ಹೊರಬರಲು ಸಾಧ್ಯವಾಯಿತು” ಎಂದು ಹೇಳಿದರು.
ದುಲ್ಕರ್ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಫ್ಯಾಷನ್ ಐಕಾನ್ ಎಂತಲೂ ಕರೆಯಲ್ಪಡುತ್ತಾರೆ. ನಟನೆ ಜತೆ ನಿರ್ಮಾಪಕರೂ ಹೌದು. ಅವರ ನಿರ್ಮಾಣ ಸಂಸ್ಥೆ, ವೇಫೇರರ್ ಫಿಲ್ಮ್ಸ್ ಮುಂಬರುವ ʻಕಿಂಗ್ ಆಫ್ ಕೋಥಾʼ ಮತ್ತು ಇತರ ಕೆಲವು ಯೋಜನೆಗಳನ್ನು ನಿರ್ಮಿಸುತ್ತಿದೆ.