Site icon Vistara News

Duniya Vijay | ತೆಲುಗು ಸಿನಿಮಾಗಾಗಿ ಸಖತ್‌ ದಪ್ಪ ಆಗಿದ್ದಾರೆ ದುನಿಯಾ ವಿಜಯ್

Duniya Vijay

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದುನಿಯಾ (Duniya Vijay) ವಿಜಯ್‌ ಇದೀಗ ತಮ್ಮ‌ ದೇಹ ತೂಕವನ್ನು ವಿಪರೀತ ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನಂದಮೂರಿ ಬಾಲಕೃಷ್ಣ ಅವರ ಸಿನಿಮಾ. ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅಭಿನಯಿಸುತ್ತಿರುವ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿದೆ. ಹೀಗಾಗಿ ವಿಜಯ್ ತಮ್ಮ ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಗಡ್ಡ ಸಹ ಬಿಟ್ಟಿದ್ದಾರೆ.

ʻಇದು ನನಗೆ ಬಹಳ ಹಿಂಸೆ ಆಗುತ್ತಿದೆ. ಆದರೂ ಕಾಯಕವೇ ಕೈಲಾಸ ಅಲ್ಲವಾ? ಇದೆಲ್ಲ ಮಾಡಲೇಬೇಕಿದೆʼ ಎಂದಿದ್ದಾರೆ ವಿಜಯ್. ತೆಲುಗು ಪ್ರಾಜೆಕ್ಟ್ ಮುಗಿಯುತಿದ್ದಂತೆ ಅವರು ಮತ್ತೆ ತೂಕ ಕಡಿಮೆ ಮಾಡಿಕೊಂಡು ‘ಭೀಮ’ ಸಿನಿಮಾದ ಕೆಲಸ ಶುರು ಮಾಡಲಿದ್ದಾರೆ.

ಇದನ್ನೂ ಓದಿ | ರಾಮ ರಾಮ ರೇ ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಿನಿಮಾ : ಟೈಟಲ್‌ ರಿವೀಲ್‌ ಮಾಡಿದ ಅಶ್ವಿನಿ ಪುನೀತ್

ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಇದು ಬಾಲಯ್ಯ ಅವರ 107ನೇ ಸಿನಿಮಾ. ಶ್ರುತಿ ಹಾಸನ್ ಈ ಚಿತ್ರದ ನಾಯಕಿ. ರಾಯಲಸೀಮಾ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಶೀರ್ಷಿಕೆಯನ್ನು ಚಿತ್ರತಂಡ ಇನ್ನೂ ರಿವೀಲ್‌ ಮಾಡಬೇಕಿದೆ. ಇನ್ನುಳಿದ ಪಾತ್ರವರ್ಗಗಳ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ | Vistara Interview | ಕಂಟೆಂಟ್‌ ಸಿನಿಮಾಗಳಿಗೆ ನನ್ನ ಆದ್ಯತೆ: ಏಕ್‌ ಲವ್‌ ಯಾ ಖ್ಯಾತಿಯ ರೀಷ್ಮಾ ನಾಣಯ್ಯ

Exit mobile version