Site icon Vistara News

Dunki Box Office: 250 ಕೋಟಿ ರೂ. ಸನಿಹದಲ್ಲಿ ಶಾರುಖ್‌ ಸಿನಿಮಾ ಡಂಕಿ!

Shah Rukh Khan dunki

ಬೆಂಗಳೂರು: ಶಾರುಖ್ ಖಾನ್ ನಟನೆ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಒಳ್ಳೆಯ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ವಿಶ್ವದಾದ್ಯಂತ ಚಿತ್ರ (Dunki Box Office) ಈಗ 200 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. ಐದು ದಿನಗಳ ಒಟ್ಟು ಕಲೆಕ್ಷನ್ ಈಗ ಭಾರತದಲ್ಲಿ 128.13 ಕೋಟಿ ರೂ. ಆಗಿದೆ ಎನ್ನಲಾಗಿದೆ. ಡಿಸೆಂಬರ್ 25ರಂದು ಶೇಕಡಾ 29.53ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಎರಡನೇ ವಾರದಲ್ಲಿ ವಿಶ್ವದಾದ್ಯಂತ 250 ಕೋಟಿ ರೂ. ದಾಟುವ ಸಾಧ್ಯತೆಯಿದೆ ಎನ್ನಲಾಗಿದೆ.

ಶಾರುಖ್‌ ಅವರ ಇತ್ತೀಚಿನ ಸಂದರ್ಶನವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ʼಡಂಕಿʼ ಪ್ರಚಾರ ಕಾರ್ಯದ ಸಮಯದಲ್ಲಿ ಶಾರುಖ್‌ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದರು. ಇನ್ನು ಮುಂದೆ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ʻʻಮಾರ್ಚ್​ ಮತ್ತು ಏಪ್ರಿಲ್​ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಶುರು ಆಗಲಿದೆ. ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ. ಆದರೆ ಹೀರೊ ನಾನು ಆಗಿರುತ್ತೇನೆ’ ಎಂದು ಅವರು ಹೇಳಿದ್ದರು. ʻʻಜವಾನ್ ತುಂಬಾ ಕಮರ್ಷಿಯಲ್ ಆಗಿತ್ತು. ಡಂಕಿ ತುಂಬ ನೈಜವಾಗಿ ಮೂಡಿಬಂದ ಸಿನಿಮಾʼʼ ಎಂದಿದ್ದರು.

ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ವಲಸೆ ಸಮಸ್ಯೆಯನ್ನು ಕೇಂದ್ರೀಕರಿಸುತ್ತದೆ. ಸಿನಿಮಾದ ಹೆಸರನ್ನು “ಕತ್ತೆ ಮೇಲಿನ ಪ್ರಯಾಣ” ಎಂಬ ಪದಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಪ್ರಪಂಚದಾದ್ಯಂತದ ಜನರು ತಾವು ವಲಸೆ ಹೋಗಲು ಬಯಸುವ ಸ್ಥಳಗಳನ್ನು ತಲುಪಲು ತೆಗೆದುಕೊಳ್ಳುವ ದೀರ್ಘಕಾಲೀನ, ಅಪಾಯಕಾರಿ ಪಯಣದ ಸುತ್ತ ಸಾಗುತ್ತದೆ. ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೊಮನ್ ಇರಾನಿ, ಅನಿಲ್ ಗ್ರೋವರ್ ಮತ್ತು ವಿಕ್ರಮ್ ಕೊಚ್ಚರ್ ನಟಿಸಿರುವ ಈ ಚಿತ್ರವು ಡಿಸೆಂಬರ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇದು ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಚಿತ್ರವು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದನ್ನೂ ಓದಿ: Dunki Box Office: 100 ಕೋಟಿ ರೂ. ಕ್ಲಬ್‌ ಸೇರಿದ ಡಂಕಿ!

ʻಡಂಕಿ’ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುವಂತೆ ಶಾರುಖ್‌ ಮನವಿ ಮಾಡಿದ್ದರು. ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ʼಡಂಕಿʼಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Exit mobile version