Site icon Vistara News

Shah Rukh Khan: ಡಂಕಿ Vs ಸಲಾರ್: ಸ್ಕ್ರೀನ್‌ಗಳಿಗಾಗಿ ಆಫ್-ಸ್ಕ್ರೀನ್ ಫೈಟ್!

Dunki Vs Salaar

ಬೆಂಗಳೂರು: ಪ್ರಭಾಸ್‌ ಅವರ ಸಲಾರ್‌ ಹಾಗೂ ಶಾರುಖ್‌ ಖಾನ್‌ (Shah Rukh Khan) ಅಭಿನಯದ ಡಂಕಿ ಸಿನಿಮಾ ಒಟ್ಟಿಗೆ (Dunki Vs Salaar) ಬಿಡುಗಡೆಯಾಗುತ್ತಿವೆ. ಕೆಲವು ದಿನಗಳ ಹಿಂದೆ ಡಂಕಿ ಸಿನಿಮಾ ಪೋಸ್ಟ್‌ ಪೋನ್‌ ಆಗಲಿದೆ ಎಂದು ಹೇಳಲಾಗಿತ್ತು. ಮೂಲಗಳ ಪ್ರಕಾರ ಎರಡೂ ಚಿತ್ರತಂಡ ಹೆಚ್ಚಿನ ಸ್ಕ್ರೀನ್‌ಗಳಿಗಾಗಿ ಹೊಸ ತಂತ್ರವನ್ನು ಉಪಯೋಗಿಸುತ್ತಿದ್ದಾರೆ ಎನ್ನಲಾಗಲಿದೆ. ಆಫ್-ಸ್ಕ್ರೀನ್ ಫೈಟ್‌ಗಳು ಆಗುತ್ತಿವೆ ಎನ್ನಲಾಗಿದೆ.

ಡಿಸೆಂಬರ್‌ 22ರಂದು ಎರಡೂ ಸಿನಿಮಾಗೂ ತೆರೆಗೆ ಬರುತ್ತಿವೆ. ಯಾವುದೇ ಚಲನಚಿತ್ರವು ಹಿಂದೆ ಸರಿಯಲು ಸಿದ್ಧವಾಗದೆ ಸ್ಕ್ರೀನ್‌ಗಳಿಗಾಗಿ ಹೋರಾಟ ಮಾಡುತ್ತಿವೆ ಎನ್ನಲಾಗಿದೆ. ಉತ್ತರ ಭಾರತ ವಿಚಾರಕ್ಕೆ ಬಂದಾಗ, ವಿತರಕರು ಶಾರುಖ್‌ ಅವರ ಸಿನಿಮಾವನ್ನು ಮೊದಲ ಆಯ್ಕೆಯಾಗಿ ಆರಿಸಿಕೊಳ್ಳುತ್ತಾರೆ. ವಿಶೇಷವಾಗಿ ಜವಾನ್ ಮತ್ತು ಪಠಾಣ್‌ ಯಶಸ್ಸಿನ ನಂತರ ಡಂಕಿಗೆ ಮೂರು ಪ್ರದರ್ಶನಗಳು ಮತ್ತು ಸಲಾರ್‌ಗಾಗಿ ಒಂದು ಪ್ರದರ್ಶನವನ್ನು ನೀಡಲು ಯೋಜಿಸುತ್ತಿದ್ದಾರೆʼʼಎನ್ನಲಾಗುತ್ತಿದೆ.

ಸಲಾರ್ ವಿತರಿಸುತ್ತಿರುವ ಅನಿಲ್ ಥಡಾನಿ ಅವರ ಎಎ ಚಿತ್ರಗಳು ಸಲಾರ್‌ಗೆ ಹೆಚ್ಚು ಶೋಗಳನ್ನು ನೀಡುವವರಿಗೆ ಮಾತ್ರ ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾ ನೀಡುವುದಾಗಿ ವಿತರಕರಿಗೆ ತಿಳಿಸಿದ್ದು, ಡಂಕಿ ನಿರ್ಮಾಪಕರು ಸಹ ಹೆಚ್ಚು ಸ್ಕ್ರೀನ್‌ಗಳನ್ನು ಪಡೆಯುವುದಕ್ಕಾಗಿ ಈ ಮಾರ್ಗವಾಗಿ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.

ʻʻಹೆಚ್ಚಿನ ಸ್ಕ್ರೀನ್‌ಗಳನ್ನು ಪಡೆದುಕೊಳ್ಳುವ ಹೋರಾಟವು ಈಗಾಗಲೇ ಪ್ರಾರಂಭವಾಗಿದೆ” ಎಂದು ಒಳಗಿನವರು ಹೇಳುತ್ತಾರೆ, “ಸಲಾರ್ ಮತ್ತು ಅನಿಮಲ್ ವಿತರಕರು ಹೆಚ್ಚಿನ ಪರದೆಗಳನ್ನು ಪಡೆಯಲು ಎಲ್ಲಾ ಶಕ್ತಿಯನ್ನು ಹಾಕುತ್ತಿದ್ದಾರೆ, ಇದು ಶಾರುಖ್ ಮುಂದೆ ಅವರಿಗೆ ಕಠಿಣ ಸವಾಲಾಗಿ ಪರಿಣಮಿಸುತ್ತಿದೆ. ವಿತರಕರ ಮೇಲೆ ಸಾಕಷ್ಟು ಒತ್ತಡವಿದೆʼʼಎನ್ನಲಾಗುತ್ತಿದೆ.

ಇದನ್ನೂ ಓದಿ: Shah Rukh Khan: ರಾಣಿ ಮುಖರ್ಜಿ ಸೆರಗು ಹಿಡಿದ ಶಾರುಖ್‌; ‘ಜೆಂಟಲ್‌ಮ್ಯಾನ್’ಅಂದ್ರು ಫ್ಯಾನ್ಸ್‌!

ವ್ಯಾಪಾರ ತಜ್ಞ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್‌ ಮಾಡಿ “ಡಂಕಿಪೋಸ್ಟ್‌ ಪೋನ್‌ ಆಗುವುದಿಲ್ಲ. ಅವು ಸುಳ್ಳು ವರದಿಗಳಾಗಿದ್ದವು. ವಾಸ್ತವವಾಗಿ, ಚಿತ್ರದ ಟೀಸರ್ ಶೀಘ್ರದಲ್ಲೇ ಹೊರಬರಲಿದೆʼʼಎಂದಿದ್ದಾರೆ.

ಕಳೆದ ತಿಂಗಳು ʻʻಸಲಾರ್‌ʼʼ ಚಿತ್ರತಂಡ ರಿಲೀಸ್‌ ದಿನಾಂಕವನ್ನು ರಿವೀಲ್‌ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಪೃಥ್ವಿರಾಜ್ ಸುಕುಮಾರನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಚಿತ್ರವು ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡಲು ಯೋಜಿಸಿತ್ತು. ʻಆದಿಪುರುಷ’ ಚಿತ್ರದ ಸೋಲಿನ ನಂತರ, ಪ್ರಭಾಸ್ (Actor Prabhas) ತಮ್ಮ ಮುಂಬರುವ ಬಿಗ್-ಬಜೆಟ್ ಚಿತ್ರ ‘ಸಲಾರ್‌’ (Salaar Movie) ಮೇಲೆ ಭಾರಿ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಶಾರುಖ್ ಅವರ ಈ ವರ್ಷದ ಮೂರನೇ ಸಿನಿಮಾ ಡಂಕಿ ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ಸಹ ನಾಯಕಿಯಾಗಿ ನಟಿಸಿದ್ದಾರೆ.

Exit mobile version