Site icon Vistara News

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

ಸಿನಿಮಾ ತಂತ್ರಜ್ಞಾನರೇ ಸೇರಿ ಮಾಡಿರುವ ಕನ್ನಡದ ಹೊಚ್ಚ ಹೊಸ ಚಲನಚಿತ್ರ ‘ದ್ವಿಜ’ ಇದೇ (Dvija Film) ಅಕ್ಟೋಬರ್‌ಗೆ ತೆರೆಗೆ ಬರಲು ಸಜ್ಜಾಗಿದೆ. ‘ದ್ವಿಜ’ ಅನ್ನೋ ಹೆಸರೇ ವಿಶೇಷವಾಗಿದ್ದು, ಇದಕ್ಕೆ ಎರಡನೇ ಹುಟ್ಟು ಎಂಬ ಅರ್ಥದಲ್ಲಿ ‘ದ್ವಿಜ’ ಅನ್ನೋ ಹೆಸರಿಡಲಾಗಿದೆ ಎಂದು ಸಿನಿಮಾದ ನಿರ್ದೇಶಕ ಗಿರಿ ಲಕ್ಷ್ಮಣ್ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ತಾನು ಪ್ರೀತಿಸುತಿದ್ದ ಹುಡುಗನನ್ನ ಕಳೆದುಕೊಂಡ ಯುವತಿಯೊಬ್ಬಳ ಕಥೆಯನ್ನು ಈ ‘ದ್ವಿಜ’ ಸಿನಿಮಾ ಹೇಳುತ್ತಿದ್ದು, ಸೈಬರ್ ಕ್ರಿಮಿನಲ್ ಜಗತ್ತಿನ ಅನಾವರಣ ಮಾಡುವ ಪ್ರಯತ್ನ ಇದರಲ್ಲಾಗಿದೆ. ಈಗಾಗಲೇ ‘ದ್ವಿಜ’ ಸಿನಿಮಾದ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆಗೆ ತಂಡ ತಯಾರಿ ನಡೆಸಿದೆ.

ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ಯುವ ನಟರಾದ ಲಡ್ಡು ಗೋಪಾಲ್, ಸೃಷ್ಟಿ ರಾಘವೇಂದ್ರ, ಸತ್ಯ, ದಿಲೀಪ್ ಕುಮಾರ್ ಎಲ್, ಮನೀಶಾ ಭಟ್, ಗಗನ್ ಟಿ ಜಿ ಮುಂತಾದವರು ನಟಿಸಿದ್ದಾರೆ. ಹೊಸಬರ ತಂಡಕ್ಕೆ ಗೌರಿ ಲಕ್ಷ್ಮಣ್ ಬಂಡವಾಳ ಹೂಡಿದ್ದು, ಶ್ಯಾಮಲ್ ಭೌಮಿಕ್, ರಿಥ್ವಿಕ್ ಶರ್ಮಾ, ಸುಬ್ರಮಣಿಯನ್ ಶೋಭಾ ಮತ್ತು ನವೀನ್ ಎಂ ಬಿ ರವರು ಸಹ-ನಿರ್ಮಾಪಣೆಯ ಹೊಣೆ ಹೊತ್ತಿದ್ದಾರೆ.

ಇದನ್ನೂಓದಿ: Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

ಯುವ ಪ್ರತಿಭೆಗಳಾದ ಕೀರ್ತನ್ ಭಟ್‌ರ ಛಾಯಾಗ್ರಹಣ, ಪ್ರಶಾಂತ್ ಅಂಬಿಲಿ ಯವರ ಸಂಕಲನ, ಶ್ರೀಹರಿ ಅವರ ಗ್ರಾಫಿಕ್ಸ್ , ಪ್ರಬೋಧ್ ಶ್ಯಾಮ್ ಮತ್ತು ಹೇಮಾದ್ರಿ ಶ್ರೀನಿವಾಸ್ ರವರ ಸಂಗೀತ ಸಂಯೋಜನೆ ಈಗಾಗಲೇ ಜನರ ಮನ ಸೆಳೆಯುತ್ತಿದೆ.

“ಹೊಸ ಅಲೆಗಳ ಅಂಚಿನಲ್ಲಿರುವ ಕನ್ನಡ ಚಿತ್ರರಂಗಕ್ಕೆ, ದ್ವಿಜ ಸಿನಿಮಾ ಮತ್ತೊಂದು ಗರಿಯಾಗಲಿದೆ. ಈ ಚಿತ್ರ ಒಂದು ಸುಂದರ ಅನುಭವವನ್ನು ಕೊಡಲಿದ್ದು, ಬರುವ ದಿನಗಳಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದರಲ್ಲಿ ಸಂಶಯವಿಲ್ಲ” ಎಂದು ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಲೂಸಿಯಾ ಪವನ್ ಕುಮಾರ್, ಬ್ಲಿಂಕ್ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಖ್ಯಾತ ನಟರಾದ ರಿಷಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ದ್ವಿಜ’ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ‘ಡಿಸೈರ್ಲೆಸ್ ಪ್ರೊಡಕ್ಷನ್ಸ್’ ಅನ್ನೋ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version