Site icon Vistara News

Actress Leelavathi: 500 ರೂ. ಸಂಭಾವನೆ ಇದ್ದಾಗಲೇ 50 ಸಾವಿರ ರೂ. ಪಡೆಯುತ್ತಿದ್ದ ಲೀಲಾವತಿ!

Actress Leelavathi

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರರನ್ನು ರಂಜಿಸಿದ್ದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಪ್ರಮುಖರು ಕಂಬನಿ ಮಿಡಿದಿದ್ದಾರೆ.

ಮುಂಜಾನೆ 6ರಿಂದ 10 ಗಂಟೆಯವರೆಗೆ ನೆಲಮಂಗಲದ ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನ ನಡೆಯುತ್ತಿದೆ. 10 ಗಂಟೆಗೆ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Actress Leelavathi: ನೆಲಮಂಗಲದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನ, ರವೀಂದ್ರ ಕಲಾಕ್ಷೇತ್ರದಲ್ಲಿ 11 ಗಂಟೆಯಿಂದ ಅವಕಾಶ

ಸಿನಿಮಾಗಳಲ್ಲಿ ‌ಪ್ರಮುಖ ಕಲಾವಿದರಿಗೆ ತಿಂಗಳ ಸಂಬಳ 500 ರೂಪಾಯಿಗಳಷ್ಟೆ ಇದ್ದ ಸಮಯದಲ್ಲಿಯೇ ಅವರು ನಾಟಕದಲ್ಲಿ ಅಭಿನಯಿಸಲು 50 ಸಾವಿರ ರೂಪಾಯಿ ಸಂಭಾವನೆ ಒಟ್ಟಿಗೆ ಪಡೆದಿದ್ದರಂತೆ. ಈ ಬಗ್ಗೆ ಸ್ವತಃ ಲೀಲಾವತಿಯವರೇ ಈ ಮುಂಚೆ ಹೇಳಿಕೊಂಡಿದ್ದರು.

500ಕ್ಕೂ ಅಧಿಕ ಸಿನಿಮಾಗಳಲ್ಲಿ ಲೀಲಾವತಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ಮಿಂಚಿ ಮೋಡಿ ಮಾಡಿದ್ದರು.

ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. ‘ವೀರ ಕೇಸರಿ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ರಣಧೀರ ಕಂಠೀರವ’ ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು.

Exit mobile version