Site icon Vistara News

Actor MohanLal: ಮೋಹನ್ ಲಾಲ್ ಸಿನಿಮಾಗೆ ಕನ್ನಡದ ನಂದಕಿಶೋರ್ ಆ್ಯಕ್ಷನ್‌ ಕಟ್;‌ ಏಕ್ತಾ ಕಪೂರ್‌ ಸಹ ನಿರ್ಮಾಣ!

Ekta Kapoor To Co-Produce To MohanLal Film

ಬೆಂಗಳೂರು: ಧೂಮಂ ಸಿನಿಮಾ ಬೆನ್ನಲ್ಲೇ ಕನ್ನಡದ ಮತ್ತೋರ್ವ ನಿರ್ದೇಶಕ ಬೇರೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದುವೇ ನಂದಕಿಶೋರ್. ಇದೀಗ ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor MohanLal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ.

ಚಿತ್ರಕ್ಕೆ ʻವೃಷಭʼ (Vrushabha) ಎಂದು ಹೆಸರಿಟ್ಟಿದ್ದು, ಇದೇ ತಿಂಗಳಿನಿಂದಲೇ ಚಿತ್ರೀಕರಣ ಆರಂಭಿಸುವುದಾಗಿ ನಂದಕಿಶೋರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಪ್ಯಾನ್‌ ಇಂಡಿಯಾ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಬಾಲಿವುಡ್ ಹಂಗಾಮಾ ಎಂಬ ಮನರಂಜನಾ ಪೋರ್ಟಲ್‌ ಈ ಬಗ್ಗೆ ಸುದ್ದಿ ಮಾಡಿದ್ದು, ಎವಿಎಸ್ ಸ್ಟುಡಿಯೋಸ್ ಮತ್ತು ಕನೆಕ್ಟ್ ಮೀಡಿಯಾ 200 ಕೋಟಿ ರೂ ಬಜೆಟ್‌ನಲ್ಲಿ ಸಿನಿಮಾ ಮಾಡಲಿದೆ ಎಂದು ವರದಿಯಾಗಿದೆ. ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದ್ದು, ಇದು ಏಕ್ತಾ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಅವರು ಮುಂಬೈನ ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಸ್ಟುಡಿಯೋದಲ್ಲಿ ಚಿತ್ರದ ನಾಯಕ ನಟ ಮೆಗಾಸ್ಟಾರ್ ಮೋಹನ್‌ಲಾಲ್ ಅವರನ್ನು ಭೇಟಿಯಾಗುತ್ತಿದ್ದಾರೆ, ಅಲ್ಲಿ ಅವರು ಈ ಸಿನಿಮಾಗೆ ಸಹಿ ಹಾಕಲಿದ್ದಾರೆʼʼ ಎಂದು ಮೂಲಗಳು ಬಹಿರಂಗ ಪಡಿಸಿದೆ.

ನಂದ್ ಕಿಶೋರ್ ನಿರ್ದೇಶನದ ಈ ಚಿತ್ರ 2024ರಲ್ಲಿ ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಎಂದು ಹೇಳಿಕೊಂಡಿರುವ ನಂದಕಿಶೋರ್, ಸಾಹಸ ಪ್ರಧಾನ ದೃಶ್ಯಗಳನ್ನೂ ಹೊಂದಿರುವುದಾಗಿ ತಿಳಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಜುಲೈ 22 ರಿಂದ ಶೂಟಿಂಗ್ ಶುರು ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ; Fashion Show News: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಶ್ವೇತಾ ನಂದಕುಮಾರ್‌ ಚೀತಾ ಪ್ರಿಂಟ್ಸ್‌ ಡಿಸೈನರ್‌ವೇರ್ಸ್‌

ಇದರಲ್ಲಿ ಶ್ರೀಕಾಂತ್ ಮೇಕಾ ಪುತ್ರ ರೋಷನ್ ಕೂಡ ನಟಿಸುತ್ತಿದ್ದಾರೆ. ಅಲ್ಲದೇ, ಕನ್ನಡದ ಕಲಾವಿದರಿಗೂ ಅವಕಾಶ ಇರಲಿದೆ ಎನ್ನಲಾಗಿದೆ. ಸಂತೋಷ್ ತುಂಡಿಯಲ್ ಸಿನಿಮಾಟೋಗ್ರಾಫರ್ ಆಗಿದ್ದು, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಸಂಗೀತ ಚಿತ್ರಕ್ಕಿದೆ. ಮೂಲ ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ತಯಾರಾಗಲಿದ್ದು, ನಂತರ ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ ಎನ್ನಲಾಗಿದೆ.

Exit mobile version